Dolly Dhananjaya Marriage : ಸ್ಯಾಂಡಲ್ ವುಡ್ ನಟ ಮೋಸ್ಟ್ ಎಲಿಜಬಲ್ ಬ್ಯಾಚುಲರ್, ಹ್ಯಾಂಡ್ಸಮ್ ಹಂಕ್ ಡಾಲಿ ಧನಂಜಯ ಹಸಮಣೆ ಏರಿತ್ತೋದ್ದಾರೆ.
ಹೌದು, ಡಾಲಿ ಧನಂಜಯ್ ಅವರ ಬಾಳ ಸಂಗಾತಿ ಯಾರು ಎನ್ನುವ ಪ್ರಶ್ನೆ ಅನೇಕರಲ್ಲಿ ಮೂಡಿತ್ತು. ಇದೀಗ ದೀಪಾವಳಿ ಹಬ್ಬಕ್ಕೆ ಧನಂಜಯ ಗುಡ್ನ್ಯೂಸ್ ಕೊಟ್ಟಿದ್ದು, ತಮ್ಮ ಬಾಳ ಸಂಗಾತಿಯನ್ನು ಧನಂಜಯ್ ಅವರು ಪರಿಚಯಿಸಿದ್ದಾರೆ. ಫೆಬ್ರವರಿ 16ರಂದು ಮದುವೆ ನಡೆಯಲಿದೆ. ಡಾಲಿ ಧನಂಜಯ್ ಅವರು ವೈದ್ಯೆಯನ್ನು ಕೈ ಹಿಡಿಯುತ್ತಿದ್ದಾರೆ.
ಹೌದು ಡಾಲಿ ಮದುವೆಯಾಗುತ್ತಿರುವ ಹುಡುಗಿಯ ಹೆಸರು ಧನ್ಯತಾ. ಸ್ತ್ರೀರೋಗ ತಜ್ಞೆ (Gynecologist) ಆಗಿರುವ ಧನ್ಯತಾ, ಧನಂಜಯ್ಗೆ ಜೊತೆಯಾಗುತ್ತಿದ್ದಾರೆ. ಡಾಲಿ ಮತ್ತು ಧನ್ಯತಾ ಮಧ್ಯೆ ಅನೇಕ ವರ್ಷಗಳ ಪರಿಚಯ ಇದೆ. ಈ ಪರಿಚಯ ಪ್ರೀತಿಗೆ ತಿರುಗಿ ಇದೀಗ ಹಸೆಮಣೆ ಏರುತ್ತಿದ್ದಾರೆ.