ಈ ಸಿನಿಮಾದ ಸೋಲಿಗೆ ನಾನೇ ಕಾರಣ.. ಕ್ಷಮೆ ಇರಲಿ..ನಿರ್ದೇಶಕ !!

ನಟ ಸತೀಶ್ ನೀನಾಸಂ, ಹರಿಪ್ರಿಯಾ ನಟಿಸಿರುವ ಸಿನಿಮಾ ಪೆಟ್ರೋಮ್ಯಾಕ್ಸ್​ ಸಿನಿಮಾ ಈಗಾಗಲೇ ಕಳೆದ ಜುಲೈ 15ರಂದು ಚಿತ್ರಮಂದಿರದಲ್ಲಿ ಬಿಡುಗಡೆ ಆಗಿದ್ದಲ್ಲದೇ ಓಟಿಟಿ ಅಲ್ಲಿ ಸಹ ರಿಲೀಸ್ ಆಗಿದೆ. ಪೆಟ್ರೋಮ್ಯಾಕ್ಸ್ ಚಿತ್ರದ ಟ್ರೈಲರ್ ಸಖತ್ ಸದ್ದು…

ನಟ ಸತೀಶ್ ನೀನಾಸಂ, ಹರಿಪ್ರಿಯಾ ನಟಿಸಿರುವ ಸಿನಿಮಾ ಪೆಟ್ರೋಮ್ಯಾಕ್ಸ್​ ಸಿನಿಮಾ ಈಗಾಗಲೇ ಕಳೆದ ಜುಲೈ 15ರಂದು ಚಿತ್ರಮಂದಿರದಲ್ಲಿ ಬಿಡುಗಡೆ ಆಗಿದ್ದಲ್ಲದೇ ಓಟಿಟಿ ಅಲ್ಲಿ ಸಹ ರಿಲೀಸ್ ಆಗಿದೆ.

ಪೆಟ್ರೋಮ್ಯಾಕ್ಸ್ ಚಿತ್ರದ ಟ್ರೈಲರ್ ಸಖತ್ ಸದ್ದು ಮಾಡಿತ್ತು. ಆದರೆ, ಕೆಲವರು ಚಿತ್ರದಲ್ಲಿನ ಡಬಲ್ ಮೀನಿಂಗ್ ಡೈಲಾಗ್​ ಗಳಿಗೆ ಬಾರಿ ಅಸಮಾಧಾನ ವ್ಯಕ್ತಪಡಿಸಿದ್ದರು. ಆದರೂ ಚಿತ್ರದಲ್ಲಿ ಉತ್ತಮ ಕಥೆ ಹೇಳಲಾಗಿದೆ ಎಂದು ಚಿತ್ರದ ನಿರ್ದೇಶಕರಾದ ವಿಜಯ್ ಪ್ರಸಾದ್ ಅವರು ಹೇಳಿದ್ದರು. ಆದರೂ ಪೆಟ್ರೋಮ್ಯಾಕ್ಸ್ ಚಿತ್ರ ತೆರೆಕಂಡ ಕೆಲವೇ ದಿನಗಳಲ್ಲಿ ಓಟಿಟಿ ಅಲ್ಲಿ ಬಿಡುಗಡೆ ಆಗುವ ಮೂಲಕ ಸಿನಿಮಾ ಸೋಲಲ್ಪಟ್ಟಿತು. ಹೀಗಾಗಿ ಇದೀಗ ಪೆಟ್ರೋಮ್ಯಾಕ್ಸ್ ಚಿತ್ರದ ನಿರ್ದೇಶಕ ವಿಜಯ್ ಪ್ರಸಾದ್ ಈ ಕುರಿತು ಜನರಲ್ಲಿ ಕ್ಷಮೆ ಕೇಳಿದ್ದಾರೆ.

ಹೌದು, ನಿರ್ದೇಶಕ ವಿಜಯ್ ಪ್ರಸಾದ್ ಇದ್ದಕಿದ್ದಂತೆಯೇ ಸೋಶಿಯಲ್ ಮೀಡಿಯಾದಲ್ಲಿ ಒಂದು ಪೋಸ್ಟ್‌ ಹಾಕಿ ಅಚ್ಚರಿ ಮೂಡಿಸಿದ್ದು,. ‘ನಮ್ಮ ಪೆಟ್ರೋಮ್ಯಾಕ್ಸ್ ಚಿತ್ರ ನಾವು ಅಂದುಕೊಂಡಂತೆ ಎಲ್ಲರನ್ನೂ ತಲುಪಲು ಆಗಲಿಲ್ಲ..! ಅದಕ್ಕೆ ಕಾರಣ ಖಂಡಿತವಾಗಿಯೂ ನೀವಂತೂ ಅಲ್ಲವೇ ಅಲ್ಲ, ಹಾಗೆ ನಮ್ಮ ಚಿತ್ರತಂಡದ ಯಾರೋಬ್ಬರೂ ಅಲ್ಲ…! ಇದಕ್ಕೆ ಕಾರಣ ನಾನೋಬ್ಬನೇ..! ಕ್ಷಮೆ ಇರಲಿ..’ ಎಂದು ಬರೆದುಕೊಂಡಿದ್ದಾರೆ. ಇನ್ನು, ಪೆಟ್ರೋಮ್ಯಾಕ್ಸ್ ಚಿತ್ರ ನಿರ್ದೇಶಕ ವಿಜಯ್ ಪ್ರಸಾದ್‌ ಅವರ ಈ ಪೋಸ್ಟ್‌ ನೋಡಿದ ಅನೇಕರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.