ಬೆಂಗಳೂರು: ನಿರ್ದೇಶಕ ಪ್ರೇಮ್ ಹೆಸರು ಉಲ್ಲೇಖಿಸಿ ನಟ ದರ್ಶನ್ ಅವರ, ಪ್ರೇಮ್ ಗೆ ಏನು 2 ಕೊಂಬು ಇವೆಯಾ? ಎಂಬ ಹೇಳಿಕೆಗೆ ಪ್ರೇಮ್ ಪತ್ನಿ, ನಟಿ ರಕ್ಷಿತಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ನಟಿ ರಕ್ಷಿತಾ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದು, ‘ಯಾರಾದರೂ ಒಬ್ಬರು ಇನ್ನೊಬ್ಬರ ನಡೆಯ ಬಗ್ಗೆ ಮಾತನಾಡುವಾಗ ನಾವು ತಮ್ಮ ನಿಜ ಜೀವನದಲ್ಲಿ ಏನು ಮಾತನಾಡುತ್ತಿದ್ದೇವೆ, ಜನರ ಎದುರು ಏನು ಮಾತನಾಡುತ್ತಿದ್ದೇವೆ, ಯಾವ ಸಂದರ್ಭದಲ್ಲಿ ಏನು ಮಾತನಾಡುತ್ತಿದ್ದೇವೆ ಎನ್ನುವುದು ಮುಖ್ಯವಾಗಿರುತ್ತದೆ’ ಎಂದು ನಟಿ ರಕ್ಷಿತಾ ತಮ್ಮ ಅಸಮಾಧಾನವನ್ನು ಸಾಮಾಜಿಕ ಜಾಲತಾಣದಲ್ಲಿ ಹೊರಹಾಕಿದ್ದಾರೆ.
ಇನ್ನು, ನಟ ದರ್ಶನ್ ಮತ್ತು ನಟಿ ರಕ್ಷಿತಾ ಸೇರಿ ಕಲಾಸಿಪಾಳ್ಯ, ಅಯ್ಯ, ಸುಂಟರಗಾಳಿ ಸೇರಿದಂತೆ ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ.