ಮುಂಬೈ: ಗ್ಲೋಬಲ್ ಸ್ಟಾರ್ ನಟಿ ಪ್ರಿಯಾಂಕಾ ಚೋಪ್ರಾ ಅವರು ಬಾಲಿವುಡ್ ಜೊತೆಗೆ ಹಾಲಿವುಡ್ ಸಿನಿಮಾಗಳಲ್ಲೂ ಸಹ ತಮ್ಮ ಛಾಪು ಮೂಡಿಸುತ್ತಿದ್ದಾರೆ. ತನಗಿಂತ ಹತ್ತು ವರ್ಷ ಚಿಕ್ಕವನಾದ ತನ್ನ ಗೆಳೆಯ ನಿಕ್ ಜೊನಾಸ್ ಅವರನ್ನು ಮದುವೆಯಾದ ನಟಿ ಪ್ರಿಯಾಂಕಾ ಚೋಪ್ರಾ ಅವರು, ಮದುವೆಯ ನಂತರವೂ ತಮ್ಮ ಸಿನಿಮಾ ವೃತ್ತಿಜೀವನವು ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ಅವರ ಇತ್ತೀಚಿನ ಚಿತ್ರ ‘ದಿ ವೈಟ್ ಟೈಗರ್’ ಇತ್ತೀಚೆಗೆ ಬಿಡುಗಡೆಯಾಗಿದ್ದು ಯಶಸ್ವಿಯಾಗಿದೆ. ಆದರೆ, ಇತ್ತೀಚೆಗೆ ಇಂಗ್ಲಿಷ್ ಪತ್ರಿಕೆಕೆ ನೀಡಿದ ಸಂದರ್ಶನದಲ್ಲಿ ಪ್ರಿಯಾಂಕಾ ಈ ಚಿತ್ರದ ಶೂಟಿಂಗ್ ಬಗ್ಗೆ ಕೆಲವು ಆಸಕ್ತಿಕರ ವಿಷಯಗಳನ್ನು ಹಂಚಿಕೊಂಡಿದ್ದಾರೆ.
ಅವರು ಬಹಳ ಓದಿ ಎಂಜಿನಿಯರ್ ಆಗಲು ಬಯಸಿದ್ದೆ, ಆದರೆ ಅಸಾಧಾರಣವಾಗಿ ತನ್ನ ಹೆಜ್ಜೆಗಳು ಚಿತ್ರೋದ್ಯಮದ ಕಡೆಗೆ ಕಾಲಿಟ್ಟಿದ್ದರಿಂದ ಈಗೆ ನೆಲೆಯೂರಿದೆ ಎಂದು ಪ್ರಿಯಾಂಕಾ ಹೇಳಿದ್ದಾರೆ. 2000 ರ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ಮಿಸ್ ವರ್ಲ್ಡ್ ಕಿರೀಟವನ್ನು ಗೆದ್ದ ನಂತರ ಸಿನಿಮಾ ಅವಕಾಶಗಳು ಸತತವಾಗಿ ಒಲಿದು ಬಂದವು ಎಂದು ಅವರು ಹೇಳಿದರು. ಆ ಸಮಯದಲ್ಲಿ ತನಗೆ ಸಿನೆಮಾಗಳ ಬಗ್ಗೆ ಹೆಚ್ಚು ತಿಳಿದಿಲ್ಲ ಎಂದು ಹೇಳಿದ ಪ್ರಿಯಾಂಕಾ, ಅನೇಕ ನಟನಾ ಕೌಶಲ್ಯಗಳನ್ನು ಶೂಟಿಂಗ್ ನಡೆಯುತ್ತಿರುವ ಸಮಯದಲ್ಲೇ ಕಲಿತಿದ್ದೇನೆ ಎಂದು ಹೇಳಿದರು. ಹಾಗೆ ಸಿನಿಮಾ ಇಂಡಸ್ಟ್ರಿಯಲ್ಲಿ ತಾನು ನೆಲೆಯೂರಿ ಸ್ಟಾರ್ ಅದೇ ಎಂದು ಹೇಳಿದ್ದು, ತಮಗೆ ಈ ಉದ್ಯಮವು ಸೂಕ್ತವಾಗಿದೆ ಎಂದು ಹೇಳಿದರು.
ಲಾಕ್ ಡೌನ್ ನಂತರ ಮತ್ತೆ ಶೂಟಿಂಗ್‌ನಲ್ಲಿ ಭಾಗವಹಿಸಿದ್ದಕ್ಕೆ ಪ್ರತಿಕ್ರಿಯಿಸಿದ ಪ್ರಿಯಾಂಕಾ ಚೋಪ್ರಾ, ಲಾಕ್ ಡೌನ್ ನಿಯಮಗಳನ್ನು ಅನುಸರಿಸಿ ಶೂಟಿಂಗ್ ನಡೆಯುವ ಲೊಕೇಷನ್ ನಲ್ಲಿ ಬಹಳ ಮುಂಜಾಗ್ರತೆ ಅನುಸರಿಸಿದ್ದೇ, ಆದರೆ ಶೂಟಿಂಗ್ ಸೆಟ್ನಲ್ಲಿ ಸುರಕ್ಷಿತವಾಗಿದ್ದೇನೆ ಎಂದು ಅನಿಸಲಿಲ್ಲ ಎಂದು ಪ್ರಿಯಾಂಕಾ ಚೋಪ್ರಾ ಹೇಳಿದರು.
ಇದನ್ನು ಓದಿ: ಸಣ್ಣಗಾಗಲು ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿರುವ ತಮನ್ನಾ ಭಾಟಿಯಾ; ವಿಡಿಯೋ ವೈರಲ್