ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂ ನಲ್ಲಿ ಬರೋಬ್ಬರಿ 350ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿರುವ ದಕ್ಷಿಣ ಭಾರತದ ಹಿರಿಯ ನಟಿ ಕವಿತಾ ಅವರ ಮಗ ಸಾಯಿ ರೂಪ್ ಕೊರೊನಾ ಸೋಂಕಿನಿಂದ ಮೃತ ಪಟ್ಟಿದ್ದಾರೆ.
ಕೆಲವು ದಿನಗಳ ಕೊರೊನಾ ವೈರಸ್ʼಗೆ ತುತ್ತಾಗಿದ್ದ ಸಾಯಿ ರೂಪ್ ಆರಂಭದಲ್ಲಿ ಮನೆಯಲ್ಲಿಯೇ ಪ್ರತ್ಯೇಕವಾಗಿದ್ದಾರಾದರು, ನಂತರ ಆರೋಗ್ಯ ಸ್ಥಿತಿ ಹದಗೆಟ್ಟಿದ್ದರಿಂದ, ಅವರನ್ನ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೇ ಸಾಯಿ ರೂಪ್ ಸಾವನ್ನಪ್ಪಿದ್ದಾರೆ.
ಇನ್ನು, ಕವಿತಾ ಅವರ ಪತಿ ದಶತರಾಜ್ ಕೂಡ ಕೊರೊನಾ ಸೋಂಕಿಗೆ ತುತ್ತಾಗಿದ್ದು, ಸ್ಥಿತಿ ಗಂಭೀರವಾಗಿದ್ದು, ಪತಿಯನ್ನು ಉಳಿಸಿಕೊಳ್ಳಲು ಕವಿತಾ ಹೋರಾಡುತ್ತಿದ್ದಾರೆ. ಇನ್ನು ನಟಿ ಕವಿತಾ ಅವ್ರ ಮಗನ ನಿಧನಕ್ಕೆ ಚಲನಚಿತ್ರೋದ್ಯಮದ ಹಲವಾರು ಜನರು ಸಂತಾಪ ವ್ಯಕ್ತಪಡಿಸುತ್ತಿದ್ದಾರೆ.
ಸಹೋದರರ ಸವಾಲ್, ಕಿಲಾಡಿ ಕಿಟ್ಟು, ಪುಟ್ನಂಜ, ಸೂಪರ್ ಸ್ಟಾರ್, ಎಚ್2ಓ, ಭೂತಯ್ಯನ ಮಕ್ಕಳು, ಚಂದ್ರ ಚಕೋರಿ ಸೇರಿದಂತೆ 29 ಕನ್ನಡ ಸಿನಿಮಾಗಳಲ್ಲಿ ನಟಿ ಕವಿತಾ ನಟಿಸಿದ್ದಾರೆ.