ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣ ಜೈಲಿನಲ್ಲಿದ್ದ ದರ್ಶನ್ ಕುರಿತಾಗಿ ವಿಜಯಲಕ್ಷ್ಮೀ ಅವರ ನಿರಂತರ ಪ್ರಾರ್ಥನೆ ಫಲಿಸಿದೆ. ದರ್ಶನ್ ಸೇರಿ ಏಳು ಜನ ಆರೋಪಿಗಳಿಗೆ ಈಗ ಪೂರ್ಣಾವಧಿ ಜಾಮೀನು ಸಿಕ್ಕಿದೆ. ಅದೇ ಖುಷಿಯಲ್ಲಿದ್ದಾರೆ ವಿಜಿ ದರ್ಶನ್.
ದರ್ಶನ್ ಬೇಲ್ಗಾಗಿ ವಿಜಯಲಕ್ಷ್ಮೀ ಬಳ್ಳಾರಿಯ ಕನಕ ದುರ್ಗಮ್ಮನ್ನ ಮೊರೆ ಹೋಗಿದ್ದರು. ಮಂತ್ರಾಲಯಕ್ಕೆ ಹೋಗಿ ರಾಯರ ದರ್ಶನ ಪಡೆದಿದ್ದರು. ಮಧ್ಯಂತರ ಜಾಮೀನು ಸಿಕ್ಕಾಗ ಕನಕ ದುರ್ಗಮ್ಮ ದೇವಿಯ ಮೊರೆ ಹೋಗಿದ್ದ ವಿಜಯಲಕ್ಷ್ಮೀ ದರ್ಶನ್ ಕುಂಕುಮ ಪ್ರಸಾದವನ್ನು ಪಡೆದಿದ್ದರು. ಒಟ್ಟು ನಾಲ್ಕು ಬಾರಿ ದುರ್ಗಮ್ಮ ದೇವಿ ಪೂಜೆ ಮಾಡಿದ್ದರು.
ಪತಿಯ ಕಷ್ಟಕ್ಕೆ ಮರುಗಿದ್ದ ವಿಜಯಲಕ್ಷ್ಮೀ ದರ್ಶನ್, ದೇಗುಲದಲ್ಲಿಯೇ ಕಣ್ಣೀರು ಇಟ್ಟಿದ್ದರು. ಮಠ ಮಂದಿರಗಳನ್ನು ಸುತ್ತುತ್ತಾ ಪತಿಯ ಬಿಡುಗಡೆಗಾಗಿ ಸೆರಗೊಡ್ಡಿ ಬೇಡುತ್ತಲೇ ಇದ್ದ ವಿಜಯಲಕ್ಷ್ಮೀ ಅವರ ಪ್ರಾರ್ಥನೆ ಕೊನೆಗೂ ಫಲಿಸಿದೆ. ವಿಜಯಲಕ್ಷ್ಮೀಗೆ ಸದ್ಯ ಖುಷಿ ಹಂಚಿಕೊಳ್ಳಲು ಪದಗಳು ಉಳಿದಿಲ್ಲ. ಎಲ್ಲಾ ಸಂಭ್ರಮವನ್ನು ಒಂದೇ ಒಂದು ಫೋಟೋದಲ್ಲಿ ಆಚೆ ವ್ಯಕ್ತಪಡಿಸಿದ್ದಾರೆ.
ನನ್ನ ಎಲ್ಲಾ ಹರಕೆಗಳು ಪ್ರಾರ್ಥನೆಗಳು ಹುಸಿ ಹೋಗಲಿಲ್ಲ ಎಂಬ ಅರ್ಥದಲ್ಲಿ ಕೈಯಲ್ಲಿ ಹೂವು ಹಿಡಿದು ಫೋಟೋವೊಂದನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ ವಿಜಯಲಕ್ಷ್ಮೀ ದರ್ಶನ್.