ಬೆಂಗಳೂರು: ತೆಲುಗಿನ ಖಳನಟನೊಬ್ಬ ಸಾಹಸಸಿಂಹ ದಿವಂಗತ ಡಾ. ವಿಷ್ಣುವರ್ಧನ್ ಅವರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾನೆ. ಹೌದು ತೆಲುಗಿನ ಖಳನಟನಾದ ವಿಜಯ್ ರಂಗರಾಜು ಎಂಬುವರು ಡಾ. ವಿಷ್ಣುವರ್ಧನ್ ಅವರಿಗೆ ಲೇಡಿಸ್ ವೀಕ್ ನೆಸ್ ಇತ್ತು, ನಾನು ಶೂಟಿಂಗ್ ಸಂದರ್ಭದಲ್ಲಿ ವಿಷ್ಣುವರ್ಧನ್ ಅವರ ಕಾಲರ್ ಹಿಡಿದಿದ್ದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.
ವಿಜಯ್ ರಂಗರಾಜು ಅವರ ವಿವಾದಾತ್ಮಕ ಹೇಳಿಕೆ ವಿರುದ್ಧ ನಟರಾದ ನವರಸ ಜಗ್ಗೇಶ್, ಒಳ್ಳೆ ಉಡುಗ ಪ್ರಥಮ್, ಅನುರುದ್, ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಸೇರಿದಂತೆ ಕನ್ನಡಿಗರು, ವಿಷ್ಣುವರ್ಧನ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದು ವಿವಾದಾತ್ಮಕ ಹೇಳಿಕೆ ನೀಡಿದ್ದ ವಿಜಯ್ ರಂಗರಾಜು ಕ್ಷಮೆ ಕೇಳುವಂತೆ ಹೆಚ್ಚರಿಕೆ ನೀಡಿದ್ದರು.
ಇನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸಹ ವಿಜಯ್ ರಂಗರಾಜು ವಿರುದ್ಧ ಕಿಡಿಕಾರಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಪುನೀತ್ ರಾಜ್ ಕುಮಾರ್ ಅವರು, ನಮ್ಮ ನಾಡಿನ ಮೇರು ನಟರಲ್ಲಿ ಒಬ್ಬರಾದ ವಿಷ್ಣು ಸರ್ ಬಗ್ಗೆ ಅವಹೇಳನವಾಗಿ ಮಾತನಾಡಿರುವ ಆ ಕಲಾವಿದ (ವಿಜಯ್ ರಂಗರಾಜು) ಕ್ಷಮೆ ಕೇಳಿ ತನ್ನ ಮಾತುಗಳನ್ನ ಹಿಂಪಡೆಯಬೇಕು ಎಂದು ಹೇಳಿದ್ದಾರೆ.
ಭಾರತೀಯ ಚಿತ್ರರಂಗ ನಮ್ಮ ಮನೆ ಇದ್ದ ಹಾಗೆ ಎಲ್ಲ ಕಲಾವಿದರು ಒಂದು ಕುಟುಂಬ. ಕಲೆಗೆ ಕಲಾವಿದರಿಗೆ ಗೌರವಿಸೋದು ನಮ್ಮ ಕರ್ತವ್ಯ “ಮೊದಲು ಮಾನವನಾಗು”. ಒಬ್ಬ ಕಲಾವಿದನಾಗಬೇಕಾದರೆ ಅವನಿಗಿರಬೇಕಾದ ಮೊದಲ ಅರ್ಹತೆ ತನ್ನ ಸಹದ್ಯೋಗ ಕಲಾವಿದರ ಬಗ್ಗೆ ಗೌರವ ಹಾಗು ಪ್ರೀತಿಯನ್ನು ತೋರುವುದು. ಯಾವುದೇ ಭಾಷೆಯ ನಟರಾದರು ಗೌರವ ಮೊದಲು. ಕಲೆ ಹಾಗು ಕಲಾವಿದರನ್ನು ಗೌರವಿಸಿ ಎಂದು ಟ್ವೀಟ್ ಮಾಡಿದ್ದಾರೆ.
ನಮ್ಮ ನಾಡಿನ ಮೇರು ನಟರಲ್ಲಿ ಒಬ್ಬರಾದ ವಿಷ್ಣು ಸರ್ ಬಗ್ಗೆ ಅವಹೇಳನ ವಾಗಿ ಮಾತನಾಡಿರುವ ಆ ಕಲಾವಿದ ಕ್ಷಮೆ ಕೇಳಿ ತನ್ನ ಮಾತುಗಳನ್ನ ಹಿಂಪಡಿಬೇಕು ಭಾರತೀಯ ಚಿತ್ರರಂಗ ನಮ್ಮ ಮನೆ ಎಲ್ಲ ಕಲಾವಿದರು ಒಂದು ಕುಟುಂಬ ಕಲೆಗೆ ಕಲಾವಿದರಿಗೆ ಗೌರವಿಸೋದು ನಮ್ಮ ಕರ್ತವ್ಯ “ಮೊದಲು ಮಾನವನಾಗು”#RespectArtAndArtist
— Puneeth Rajkumar (@PuneethRajkumar) December 12, 2020