Chandan Shetty : ಚಂದನ್ ಶೆಟ್ಟಿ ಜೀವನಚರಿತ್ರೆ
ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಚಂದನ್ ಶೆಟ್ಟಯ ಪೂರ್ತಿ ಹೆಸರು ಚಂದನ್ ಪರಮೇಶ್ ಶೆಟ್ಟಿ (Chandan Shetty) . ಇವರು 17 ಸೆಪ್ಟೆಂಬರ್ 1989 ರಂದು ಹಾಸನ ಜಿಲ್ಲೆಯ ಶಾಂತಿಗ್ರಮದ ಹೊಳೆನರಸೀಪುರದಲ್ಲಿ ಜನಿಸಿದರು. ಇವರ ತಂದೆ ಪರಮೇಶ ಮತ್ತು ತಾಯಿ ಪ್ರೇಮಾ. ಸಕಲೇಶಪುರದ ರೋಟರಿ ಶಾಲೆಯಲ್ಲಿ ಪ್ರಾಥಮಿಕ ಶಾಲೆ ಮುಗಿಸಿದ ಇವರು, ಪಿಯುಸಿಯನ್ನು ಪುತ್ತೂರಿನಲ್ಲಿ ಪೂರ್ಣಗೊಳಿಸಿದರು. ಮೈಸೂರಿನಲ್ಲಿ BBM ಪದವಿ ಪಡೆದ ಚಂದನ್, ಒಂದು ವರ್ಷ ಕಾಲ್ ಸೆಂಟರ್‌ನಲ್ಲಿ ಕೆಲಸ ಮಾಡಿದ್ದರು. ನಟನಾಗಿ, ಸಂಗೀತ ನಿರ್ದೇಶಕನಾಗಿ, ರ್ಯಾಪರ್ ಆಗಿ ಇವರು ಹೆಸರು ಮಾಡಿದ್ದಾರೆ.
ಇದನ್ನು ಓದಿ: ಪಡಿತರ ಚೀಟಿದಾರರಿಗೆ ಶಾಕ್; ನ.1ರಿಂದ ಇವರಿಗೆ ಸಿಗಲ್ಲ ರೇಷನ್
ಅಲೆಮಾರಿ ಚಿತ್ರದ ಮೂಲಕ ಸಹಾಯಕ ಸಂಗೀತ ನಿರ್ದೇಶಕನಾಗಿ ಚಿತ್ರರಂಗ ಪ್ರವೇಶ!
ಸಂಗೀತ ನಿರ್ದೇಶಕರಾದ ಅರ್ಜುನ್ ಜನ್ಯರವರು 2012 ರಲ್ಲಿ ಅಲೆಮಾರಿ ಚಿತ್ರದಲ್ಲಿ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಿದರು. ಆ ವೇಳೆ ಚಂದನ್ ಶೆಟ್ಟಿ ಅವರು ಗೀತರಚನೆಕಾರ ಮತ್ತು ಸಹಾಯಕ ಸಂಗೀತ ನಿರ್ದೇಶಕರಾಗಿ ಆ ಚಿತ್ರದಲ್ಲಿ ಕೆಲಸ ಮಾಡಿದರು. ಆ ಮೂಲಕ ತಮ್ಮ ವೃತ್ತಿಜೀವನವನ್ನು ಆರಂಭಿಸಿದರು. ನಂತರ ವರದನಾಯಕ, ಪವರ್, ಚಕ್ರವ್ಯೂಹ ಮತ್ತು ಭಜರಂಗಿ ಚಲನಚಿತ್ರಗಳಿಗೆ ಕೆಲಸ ಮಾಡಿದರು.
ಬಿಗ್‌ಬಾಸ್ ಸೀಸನ್-5ರ ವಿನ್ನರ್ ಚಂದನ್ ಶೆಟ್ಟಿ
‘ಬಿಗ್ ಬಾಸ್’ ಸೀಸನ್ 5 ರಲ್ಲಿ ಉತ್ತಮ ಪ್ರದರ್ಶನ ನೀಡಿ ಚಂದನ್ ಶಟ್ಟಿ ವಿನ್ನರ್ ಆಗಿ ಹೊರಹೊಮ್ಮಿದ್ರು. ಮನೆಯೊಳಗೆ ತಮ್ಮ ಭಿನ್ನ ವಿಭಿನ್ನ ಹಾಡುಗಳ ಮೂಲಕ ಎಲ್ಲರ ಗಮನ ಸೆಳೆದಿದ್ದವರು ಚಂದನ್ ಶೆಟ್ಟಿ. ತಮ್ಮ ಪ್ರತಿಭೆಯ ಮೂಲಕ ಅಸಂಖ್ಯಾತ ಕನ್ನಡಿಗರ ಹೃದಯದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದರು. ‘ಬಿಗ್ ಬಾಸ್ ಕನ್ನಡ-5’ ಕಾರ್ಯಕ್ರಮದ ವಿನ್ನರ್ ಆದ ಚಂದನ್ ಶೆಟ್ಟಿಗೆ ಟ್ರೋಫಿಯೊಂದಿಗೆ ಅರ್ಧ ಕೋಟಿ ರೂಪಾಯಿ ಲಭಿಸಿತ್ತು. ಬಹುಮಾನ ಹಣವನ್ನ ತಮ್ಮ ತಂದೆಗೆ ನೀಡಿದ್ದರು.
ಇದನ್ನು ಓದಿ: ಇವರಿಗೂ ಸಿಗಲಿದೆ ರೂ.2 ಲಕ್ಷದವರೆಗೆ ತೆರಿಗೆ ವಿನಾಯಿತಿ, ನಿಶ್ಚಿತ ಪಿಂಚಣಿ ಸೌಲಭ್ಯ
Chandan Shetty : ಬಿಗ್ ಬಾಸ್ ಮನೆಯಲ್ಲಿ ಪ್ರೀತಿಸಿ ಒಂದಾಗಿದ್ದ ನಿವೇದಿತಾ – ಚಂದನ್!
ಬಿಗ್ ಬಾಸ್ ಮನೆಯಲ್ಲಿ ಚಂದನ್ ಶೆಟ್ಟಿ, ನಿವೇದಿತಾ ಗೌಡ ಜೋಡಿ ಪ್ರೀತಿಸಿದ್ದರು. ಇದಾದ ನಂತರ ಮೈಸೂರಿನಲ್ಲಿ ದಸರಾ ವೇದಿಕೆಯಲ್ಲಿ ಪ್ರಪೋಸ್ ಮಾಡಿ ಎಡವಟ್ಟು ಮಾಡಿಕೊಂಡಿದ್ದರು. ನಂತರ ಇಬ್ಬರ ಕುಟುಂಬವನ್ನು ಒಪ್ಪಿಸಿ ಅದ್ಧೂರಿಯಾಗಿ ಮದುವೆಯಾಗಿದ್ದರು. ಈ ಇಬ್ಬರೂ ಅನ್ಯೋನ್ಯ ಜೀವನ ನಡೆಸುತ್ತಿದ್ದರು ಎನ್ನುವುದಕ್ಕೆ ಅವರೇ ಮಾಡಿಕೊಂಡಿದ್ದ ಹಲವಾರು ರೀಲ್ಸ್ ಸಾಕ್ಷಿಯಾಗಿದ್ದವು. ಆದರೆ, ಏಕಾಏಕಿ ಇಬ್ಬರೂ ಡಿವೋರ್ಸ್ ಪಡೆದುಕೊಂಡರು.
ರಾಜ ರಾಣಿ ಶೋನಲ್ಲಿ ಒಟ್ಟಾಗಿ ಮಿಂಚಿದ್ದ ಜೋಡಿಗಳು!
ಚಂದನ್ ನಿವೇದಿತಾ ಮದುವೆಯಾಗಿ ಒಂದೂವರೆ ವರ್ಷದ ನಂತರ ರಾಜ ರಾಣಿ ಎಂಬ ಶೋನಲ್ಲಿ ಭಾಗವಹಿಸಿದ್ದರು. ಅಲ್ಲದೆ ಎರಡನೇ ರನ್ನರ್ ಅಪ್ ಸ್ಥಾನ ಗಳಿಸಿದ್ದರು. ಕಾರ್ಯಕ್ರಮದಲ್ಲಿ ಇಬ್ಬರೂ ತುಂಬ ಸಹಜವಾಗಿ, ನೈಜವಾಗಿ ಇದ್ದರು. ಕೊಟ್ಟಂತಹ ಎಲ್ಲ ಟಾಸ್ಕ್ ಗಳನ್ನೂ ಆಡಿ ಗ್ರ್ಯಾಂಡ್ ಫಿನಾಲೆಯಲ್ಲಿ ಎರಡನೇ ರನ್ನರ ಅಪ್ ಆಗಿ ತಲಾ 2.5 ಲಕ್ಷ ರೂಪಾಯಿ ಬಹುಮಾನ ಗಳಿಸಿದ್ದರು. ಸಂಸಾರ ಮಾಡುವಾಗ ಜಗಳ-ಮನಸ್ತಾಪ ಇದ್ದೇ ಇರತ್ತೆ, ಅವನ್ನು ಮೀರಿ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಬದುಕೋದನ್ನು ಕಲಿಯುತ್ತಿದ್ದೇವೆ ಎಂದಿದ್ದರು.
ಇದನ್ನು ಓದಿ: ಬಡ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ಘೋಷಿಸಿದ ಎಸ್‌ಬಿಐಎಫ್..!
ಮೂರೇ ಮೂರು ಪೆಗ್ಗಿಗೆ ಹಾಡಿನ ಮೂಲಕ ಪ್ರಖ್ಯಾತಿ!
ಕನ್ನಡದಲ್ಲಿ ರ್ಯಾಪ್ ಗೀತೆಗಳನ್ನು ಹೆಚ್ಚು ಜನಪ್ರಿಯಗೊಳಿಸಿದವರು ಚಂದನ್ ಶೆಟ್ಟಿ. ಚಂದನ್ ಶೆಟ್ಟಿ ಕಂಪೋಸ್ ಮಾಡಿದ ಹಾಡುಗಳ ಸಂಗೀತ ಮತ್ತು ಆಲ್ಬಂ ಹಾಡುಗಳು ಕೂಡ ಒಂದಕ್ಕಿಂತ ಒಂದು ವಿಭಿನ್ನವಾಗಿದೆ. ಚಂದನ ಶೆಟ್ಟಿಯ ರ್ಯಾಪ್ ಸಂಗೀತದ ಮೊದಲ ದೊಡ್ಡ ಮಟ್ಟದ ಯಶಸ್ಸು ತಂದುಕೊಟ್ಟ ಹಾಡು ಮೂರೇ ಮೂರು ಪೆಗ್ಗಿಗೆ. ಈ ಆಲ್ಬಮ್ ಹಾಡಿನಲ್ಲಿ ಚಂದನ ಶೆಟ್ಟಿ ಸಾಹಿತ್ಯ ಬರೆದು, ನಿರ್ದೇಶಸಿ, ನಟಿಸಿದ್ದರು. ಈ ಗೀತೆಯಲ್ಲಿ ಐಂದ್ರಿತಾ ರೇ ಹೆಜ್ಜೆ ಹಾಕಿದ್ದರು.