Darshan : ಚಾಲೆಂಜಿಂಗ್ ಸ್ಟಾರ್ ದರ್ಶನ್ ಕನ್ನಡ ಇಂಡಸ್ಟ್ರಿಗೆ ಕಾಲಿಟ್ಟು 28 ವರ್ಷವಾಗಿದೆ. ಸಾಮಾನ್ಯ ಲೈಟ್ ಬಾಯ್ ಆಗಿ ಸಿನಿರಂಗ ಪ್ರವೇಶಿಸಿದ ದಚ್ಚು ಇಂದು ಬಾಕ್ಸ್ ಆಫೀಸ್ ಸುಲ್ತಾನನಾಗಿ ಅಭಿಮಾನಿಗಳ ಪಾಲಿನ ನೆಚ್ಚಿನ ನಟನಾಗಿ ನಾಡಿನಾದ್ಯಂತ ಪರಿಚಿತರಾಗಿದ್ದಾರೆ.
1997ರಲ್ಲಿ ಮಹಾಭಾರತ ಸಿನಿಮಾ ಮೂಲಕ ಬಣ್ಣ ಹಚ್ಚಿದ ನಟ ದರ್ಶನ್ ಸುದೀರ್ಘ 28 ವರ್ಷಗಳನ್ನ ಚಿತ್ರರಂಗದಲ್ಲಿ ಪೂರೈಸಿದ್ದಾರೆ. ಡಿ ಬಾಸ್ ಪಯಣವನ್ನು ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಳ್ಳುವ ಮೂಲಕ ಸಂಭ್ರಮ ಪಡುತ್ತಿದ್ದಾರೆ.
ಖ್ಯಾತ ಕಲಾವಿದನ ಮಗನಾಗಿದ್ದರೂ ಸಿನಿಲೋಕ ದರ್ಶನ್ ಗೆ ರೆಡ್ ಕಾರ್ಪೆಟ್ ಹಾಕಿ ಸ್ವಾಗತಿಸಿಲ್ಲ.

ನಟ ದರ್ಶನ್ ತಮ್ಮ 28 ವರ್ಷದ ಸಿನಿ ಜರ್ನಿಯಲ್ಲಿ ಮಾಡಿದ ವಿಭಿನ್ನ ಪಾತ್ರಗಳಿಂದ ಅಭಿಮಾನಿಗಳಿಂದ ‘ಡಿ’ ಬಾಸ್ ಎಂದು ಕರೆಸಿಕೊಂಡಿದ್ದಾರೆ. ಡಿ ಬಾಸ್ ಖ್ಯಾತ ಕಲಾವಿದನ ಮಗನಾಗಿದ್ದರೂ ಸಿನಿಲೋಕ ಅವರಿಗೆ ರೆಡ್ ಕಾರ್ಪೆಟ್ ಹಾಕಿ ಸ್ವಾಗತಿಸಿಲ್ಲ. ದರ್ಶನ್ ಖ್ಯಾತ ಖಳನಾಯಕ ಪಾತ್ರದಾರಿ ಶ್ರೀನಿವಾಸ್ ತೂಗುದೀಪ್ ರವರ ಮಗನಾಗಿದ್ದರೂ ತನ್ನ ವೃತ್ತಿ ಜೀವನ ಆರಂಭಿಸಿದ್ದು ಲೈಟ್ ಬಾಯ್ ಆಗಿ. ತದನಂತರದ ಮೆಟ್ಟಿಲುಗಳೆ ದಚ್ಚು ಡಿ ಬಾಸ್ ಎನ್ನುವಷ್ಟರ ಮಟ್ಟಿಗೆ ಬೆಳೆಸಿದವು.
ಆಗಸ್ಟ್ 11 ದರ್ಶನ್ ಸಿನಿ ಬದುಕಿನಲ್ಲಿ ಮರೆಯಲಾರದ ದಿನ
ಆಗಸ್ಟ್ 11 ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ನಟನೆಯ ಮೊದಲ ಸಿನಿಮಾ ‘ಮಹಾಭಾರತ’ ರಿಲೀಸ್ ಆಗಿದ್ದ ದಿನವಾಗಿದ್ದು, 1997 ಆಗಸ್ಟ್ 11ರಂದು ಎಸ್. ನಾರಾಯಣ್ ನಿರ್ದೇಶನದ ‘ಮಹಾಭಾರತ’ ಚಿತ್ರ ರಿಲೀಸ್ ಆಗಿತ್ತು. ಈ ಮೂಲಕ ನಟ ದರ್ಶನ್ ಚಿತ್ರರಂಗದಲ್ಲಿ 28 ವರ್ಷ ಪೂರೈಸಿದ್ದಾರೆ.
ಈ ಹಿನ್ನೆಲೆ ದರ್ಶನ್ ಅಭಿಮಾನಿಗಳ ಅಧಿಕೃತ ಡಿ ಕಂಪನಿ ಸಾಮಾಜಿಕ ಜಾಲತಾಣದಲ್ಲಿ, 28 ವರ್ಷಗಳಿಂದ ನಿಯತ್ತಿನಿಂದ ಕಟ್ಟಿರುವ ಸ್ವಂತ್ ಬ್ರ್ಯಾಂಡ್ ಇದು. ಯಾರಿಂದಲೂ ಸುಲಭವಾಗಿ ಕೆಡವಲು ಸಾಧ್ಯವಿಲ್ಲ ಎಂದು ಬರೆದುಕೊಂಡು ಪೋಸ್ಟ್ ಮಾಡಲಾಗಿದೆ.




