ಪವಿತ್ರಾ ಜೊತೆ 10 ವರ್ಷಗಳಿಂದ ಲಿವ್-ಇನ್-ರಿಲೇಶನ್​ ಶಿಪ್: ​​​ಶಾಕಿಂಗ್ ವಿಚಾರ ಬಿಚ್ಚಿಟ್ಟ ದರ್ಶನ್.. ಚಾರ್ಜ್​ಶೀಟ್​​ನಲ್ಲಿ ಇರೋದೇನು?

Actor Darshan revealed charge sheet: ಪವಿತ್ರಾ ಗೌಡ ಜೊತೆ ನಾನು 10 ವರ್ಷಗಳಿಂದ ಲಿವ್‌ ಇನ್‌ ರಿಲೇಷನ್‌ ಶಿಪ್‌ನಲ್ಲಿ ಇದ್ದೇನೆ ಎಂದು ನಟ ದರ್ಶನ್‌ ಹೇಳಿದ್ದಾರೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣ ಸಂಬಂಧ ಕೋರ್ಟ್‌ಗೆ…

Renukaswamy murder case

Actor Darshan revealed charge sheet: ಪವಿತ್ರಾ ಗೌಡ ಜೊತೆ ನಾನು 10 ವರ್ಷಗಳಿಂದ ಲಿವ್‌ ಇನ್‌ ರಿಲೇಷನ್‌ ಶಿಪ್‌ನಲ್ಲಿ ಇದ್ದೇನೆ ಎಂದು ನಟ ದರ್ಶನ್‌ ಹೇಳಿದ್ದಾರೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣ ಸಂಬಂಧ ಕೋರ್ಟ್‌ಗೆ ಸಲ್ಲಿಕೆಯಾಗಿರುವ ಚಾರ್ಜ್‌ಶೀಟ್‌ ನಲ್ಲಿ ಉಲ್ಲೇಖಿಸಿರುವ ಮಾಹಿತಿ ಬಹಿರಂಗವಾಗಿದೆ.

ಪವಿತ್ರಾ ಗೌಡ ಆರ್‌ಆರ್‌ನಗರದಲ್ಲಿನ ನನ್ನ ವಿಳಾಸದ ಮನೆಯಿಂದ ಒಂದುವರೆ ಕಿ.ಮೀ. ದೂರದಲ್ಲಿ ನೆಲೆಸಿದ್ದಾರೆ. 2018ರಲ್ಲಿ ಪವಿತ್ರಾ ಗೌಡಗೆ ಮನೆ ಖರೀದಿಸಲು 1.75 ಕೋಟಿ ನೀಡಿರುವುದಾಗಿ ತಿಳಿಸಿದ್ದಾರೆಂದು ವರದಿಯಾಗಿದೆ.

ದರ್ಶನ್​​​ ಬಿಚ್ಚಿಟ್ಟ ಶಾಕಿಂಗ್ ವಿಚಾರ; ಚಾರ್ಜ್​ಶೀಟ್​​ನಲ್ಲಿ ಇರೋದೇನು? (Actor Darshan revealed charge sheet)

  • 10 ವರ್ಷಗಳಿಂದ ಪವಿತ್ರಾ ಗೌಡ ಜೊತೆ ಲಿವ್ ಇನ್ ರಿಲೇಷನ್​ಶಿಪ್
  • ಪವನ್, ನನ್ನ & ಪವಿತ್ರಾ ಮನೆಯಲ್ಲಿ ಕೆಲಸ ಮಾಡುತ್ತಾನೆ.
  • 8 ವರ್ಷಗಳಿಂದ ಮನೆ ನೋಡಿಕೊಳ್ಳುವ ಕೆಲಸ ಮಾಡುತ್ತಿದ್ದಾನೆ.
  • ನಂದೀಶ್ ಆಗಾಗ ನನ್ನ ಮನೆಯ ಬಳಿ ಬರುತ್ತಿದ್ದ, ನನ್ನ ಅಭಿಮಾನಿ.
  • ಲಕ್ಷ್ಮಣ್ 15 ವರ್ಷಗಳಿಂದ ನನ್ನ ಬಳಿ ಕಾರ್ ಡ್ರೈವರ್ ಆಗಿದ್ದಾರೆ.
  • ವಿನಯ್ 3-4 ವರ್ಷಗಳಿಂದ ಕಾಮನ್ ಫ್ರೆಂಡ್​ಗಳಿಂದ ಪರಿಚಯ.
  • ಆಗಾಗ ನಮ್ಮ ಮನೆಗೆ ಬಂದು ಹೋಗುತ್ತಿದ್ದ ವಿನಯ್.
  • ಮೈಸೂರಿನ ಫಾರ್ಮ್​ ಹೌಸ್​ನ ನಾಗರಾಜ್ ನೋಡಿಕೊಳ್ಳುತ್ತಾರೆ.
  • ವಿನಯ್ ಸ್ನೇಹಿತ ದೀಪಕ್, ಪರಿಚಯವಾಗಿದ್ದೂ ವಿನಯ್​ರಿಂದಲೇ
  • 16 ವರ್ಷಗಳಿಂದ ಪ್ರದೂಷ್ ಪರಿಚಯ
  • ಚಿತ್ರದುರ್ಗದ ರಾಘವೇಂದ್ರ @ರಘು ಕೂಡ ನನ್ನ ಅಭಿಮಾನಿ
  • ದರ್ಶನ್ ಅಭಿಮಾನಿ ಸಂಘ ಕಟ್ಟಿಕೊಂಡು ಅದರ ಅಧ್ಯಕ್ಷನಾಗಿದ್ದಾನೆ
  • ಚಿತ್ರ ನಟ ಯಶಸ್ ಸೂರ್ಯ ಸಹ ನಮ್ಮ ಜೊತೆಯಲ್ಲಿ ಸಂಪರ್ಕದಲ್ಲಿರ್ತಾರೆ
  • ಶನಿವಾರ 8ನೇ ತಾರೀಕು ವರ್ಕೌಟ್ ಮುಗಿಸಿ ಮನೆಯಲ್ಲಿದ್ದೆ
  • >>ಮಧ್ಯಾಹ್ನ ಪ್ರದೂಷ್ ಹಾಗೂ ನಾಗರಾಜ್ ಜೊತೆ ಹೋಗಿದ್ದೆ
  • >>ಇಬ್ಬರ ಜೊತೆಗೆ ಸ್ಟೋನಿ ಬ್ರೂಕ್ಸ್ ರೆಸ್ಟೋರೆಂಟ್​ಗೆ ಹೋಗಿದ್ದೆ
  • >>ನಾನು ಹೋದ ನಂತರ ರೆಸ್ಟೋರೆಂಟ್​ಗೆ ಚಿಕ್ಕಣ್ಣ ಸಹ ಬಂದರು
  • >>ಅಲ್ಲೇ ಮಧ್ಯಾಹ್ನ ಊಟ ಮಾಡಿ, ಟೇಬಲ್ ಬಳಿ ಕುಳಿತು ಮಾತು
  • >>ಮಧ್ಯಾಹ್ನ 3 ಗಂಟೆಗೆ ಪವನ್ ನನ್ನ ಬಳಿ ಬಂದು ಮೊಬೈಲ್ ತೋರಿಸಿದ್ದ
  • >>ಪವಿತ್ರಾ ಅಕ್ಕನಿಗೆ ಗೌತಮ್. ಎಸ್ ಎನ್ನುವವನಿಂದ ಫೋಟೋಗಳು
  • >>ಹಲವು ದಿನದಿಂದ ಖಾಸಗಿ ಅಂಗಾಂಗದ ಫೋಟೋಗಳು ಕಳುಹಿಸುತ್ತಿದ್ದ
  • >>ನಿನ್ನ ರೇಟ್ ಎಷ್ಟು, ರೂಮ್ ಮಾಡ್ತೇನೆ, ನೀ ಬಾ, ನಾನು ಚೆನ್ನಾಗಿದ್ದೇನೆ
  • >>ಪವಿತ್ರಾಗೆ ಮೆಸೇಜ್ ಮಾಡುತ್ತಿದ್ದ ಅಂತ ಮೊಬೈಲ್ ತೋರಿಸಿದ್ದ
  • >>ರಘು ಮತ್ತವನ ಸ್ನೇಹಿತರು ಕಿಡ್ನಾಪ್ ಮಾಡಿ ಕರೆದುಕೊಂಡು ಬಂದಿದ್ದಾರೆ
  • >>ಪಾರ್ಕಿಂಗ್ ಶೆಡ್​ನಲ್ಲಿ ಇಟ್ಟಿದ್ದಾರೆ ಅಂತ ಪವನ್ ಮಾಹಿತಿ ಕೊಟ್ಟಿದ್ದ
  • >>ನಾನು, ವಿನಯ್, ಪ್ರದೂಷ್, ಸ್ಕಾರ್ಪಿಯೋದಲ್ಲಿ ಪವಿತ್ರಾ ಮನೆಗೆ
  • >>ಪವಿತ್ರಾ ಕರೆದುಕೊಂಡು ಸಂ.4.30ಕ್ಕೆ ಯಾರ್ಡ್​ಗೆ ನಾವು ತಲುಪಿದ್ವಿ
  • >>ವಾಹನದ ಬಂಪರ್​ಗೆ ಒರಗಿಕೊಂಡಿದ್ದ ಒಬ್ಬ ವ್ಯಕ್ತಿಯನ್ನ ತೋರಿಸಿದ
  • >>ಪವಿತ್ರಾ ಅಕ್ಕನಿಗೆ ಮೆಸೇಜ್ ಕಳಿಸಿದ ವ್ಯಕ್ತಿ ಇವನೇ ಅಂತ ಹೇಳಿದ
  • >>ರಘು, ದೀಪು, ನಂದೀಶ್ ಕೂಡ ಈ ಸಮಯದಲ್ಲಿ ಅಲ್ಲೇ ಇದ್ರು
  • >>ನಾನು ನೋಡಿದಾಗ, ಆತ ಬಹಳ ಆಯಾಸಗೊಂಡವನಂತೆ ಇದ್ದ
  • >>ಬ್ಲೂ ಜೀನ್ಸ್ ಪ್ಯಾಂಟ್ ಹಾಗೂ ಶರ್ಟ್ ಹಾಕಿಕೊಂಡಿದ್ದ ಆ ವ್ಯಕ್ತಿ
  • >>ನಾನು ಬರುವ ಮೊದಲು ಆತನಿಗೆ ಹೊಡೆದಂತೆ ಕಂಡು ಬಂತು
  • >>ಇದನ್ನ ಕಳುಹಿಸಿದ್ದು ನೀನೇನಾ ಅಂತ ನಾನು ಆತನಿಗೆ ಕೇಳಿದೆ
  • >>ಅದಕ್ಕೆ ಅವನು, ಹೌದು ನಾನೆ ಕಳಿಸಿದ್ದು ಅಂತ ಉತ್ತರಿಸಿದ
  • >>ಇದು ನಿನಗೆ ಬೇಕಾ? ನಿನ್ನ ಸಂಬಳ ಎಷ್ಟು ಅಂತ ನಾನು ಕೇಳಿದೆ
  • >>20 ಸಾವಿರ ಸಂಬಳದಲ್ಲಿ ಇವ್ಳನ್ನ ಮೆಂಟೇನ್ ಮಾಡೋಕಾಗುತ್ತಾ?
  • >>ಈ ರೀತಿ ಕೆಟ್ಟದಾಗಿ ಬಾ ಅಂತ ಮೆಸೇಜ್ ಮಾಡಿದ್ದೀಯಲ್ಲಾ ಅಂತ ಕೇಳಿದೆ
  • >>ನಾನು ಕೇಳಿದ ಪ್ರಶ್ನೆಗೆ ಆತ ಏನನ್ನೂ ಮಾತನಾಡಲಿಲ್ಲ-ದರ್ಶನ್
  • ಕೈನಿಂದ ಹೊಡೆದೆ, ಕಾಲಿನಿಂದ ಎದೆ, ಕುತ್ತಿಗೆ, ತಲೆಗೆ ಬಲವಾಗಿ ಹೊಡೆದೆ
  • ಬಾಗಿದ್ದ ಮರದ ಕೊಂಬೆ ಮುರಿದು ಅದರಲ್ಲೂ ಆತನಿಗೆ ಹೊಡೆದೆ
  • ನನ್ನ ಕೈಗಳಿಂದಲೂ ಆತನಿಗೆ ನಾನು ಒಂದೆರಡು ಏಟು ಗುದ್ದಿದೆ
  • ನಂತರ ಕಾರ್​ನಲ್ಲಿ ಕುಳಿತಿದ್ದ ಪವಿತ್ರಾಳನ್ನ ಕರೆತರಲು ಹೇಳಿದೆ
  • ಪವಿತ್ರ ಚಪ್ಪಲಿಯಿಂದ ಆತನಿಗೆ ಹೊಡೆದಳು ಎಂದು ಶಾಕಿಂಗ್ ವಿಚಾರ ಬಾಯ್ಬಿಟ್ಟಿದ್ದಾರೆ.
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.