ಹೈದರಾಬಾದ್ : ಟಾಲಿವುಡ್ ಯಂಗ್ ರೆಬೆಲ್ ಸ್ಟಾರ್ ಪ್ರಭಾಸ್ ನಾಯಕನಾಗಿ ‘ಮಹಾನಟಿ’ ಖ್ಯಾತಿಯ ನಾಗ್ ಅಶ್ವಿನ್ ನಿರ್ದೇಶನದಲ್ಲಿ ವೈಜಯಂತಿ ಮೂವೀಸ್ ಬ್ಯಾನರ್ ನಲ್ಲಿ ಬಾರಿ ಬಜೆಟ್ ನಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ ಎಂದು ತಿಳಿದುಬಂದಿದೆ. ಈ ಸಿನಿಮಾವನ್ನು ಸಿ.ಅಶ್ವಿನಿದತ್ ಸೇರಿದಂತೆ ಸ್ವಪ್ನ ದತ್ ಹಾಗು ಪ್ರಿಯಾಂಕಾ ದತ್ ಸೇರಿ ನಿರ್ಮಿಸುತ್ತಿದ್ದಾರೆ.
ಈ ಸಿನಿಮಾದಲ್ಲಿ ಯಂಗ್ ರೆಬೆಲ್ ಸ್ಟಾರ್ ಪ್ರಭಾಸ್ ಅವರಿಗೆ ನಾಯಕಿಯಾಗಿ ಬಾಲಿವುಡ್ ದೀಪಿಕಾ ಪಡುಕೋಣೆ ನಟಿಸುತ್ತಿದ್ದಾರೆ. ಆದರೆ ಚಿತ್ರದ ಬಗ್ಗೆ ಚಿತ್ರತಂಡವು ಟ್ವಿಟರ್‌ನಲ್ಲಿ ಸರ್ಪ್ರೈಸ್ ನೀಡಿದ್ದು, ಬಾಲಿವುಡ್ ಸೂಪರ್ ಸ್ಟಾರ್ ನಟ ಅಬಿತಾಬ್ ಬಚ್ಚನ್ ಅವರು ಈ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನಲಾಗಿದೆ.
ಚಿತ್ರತಂಡವು ನಟ ಅಬಿತಾಬ್ ಬಚ್ಚನ್ ಅವರ ಸಿನಿಮಾಕ್ಕೆ ಸಂಬಂದಿಸಿದ ವಿವರಗಳೊಂದಿಗೆ 28 ಸೆಕೆಂಡುಗಳ ವೀಡಿಯೊವನ್ನು ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಭಾರತೀಯ ಸಿನೆಮಾ ಲೆಜೆಂಡ್ ಇಲ್ಲದೆ ಲೆಜೆಂಡರಿ ಫಿಲ್ಮ್ ಮಾಡುವುದು ಹೇಗೆ. ‘ಲಕ್ಷಾಂತರ ಭಾರತೀಯರ ನೆಚ್ಚಿನ ನಟ.
ಬಿಗ್ ಬಿ ಅಮಿತಾಭ್ ಅವರಿಗೆ ಇದು ನಮ್ಮ ಆತ್ಮೀಯ ಸ್ವಾಗತ. ಅವರ ಆಗಮನದೊಂದಿಗೆ ನಮ್ಮ ಪ್ರಯಾಣವು ಹೆಚ್ಚು ದೊಡ್ಡದಾಗಿದೆ! ಎಂದು ವೈಜಯಂತಿ ಮೂವೀಸ್ ಟ್ವೀಟ್ ಮಾಡಿದೆ. ಈ ಚಿತ್ರವನ್ನು ತೆಲುಗು, ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ಸೈನ್ಸ್ ಫಿಕ್ಷನ್ ಹಿನ್ನೆಲೆಯಲ್ಲಿ ನಿರ್ಮಿಸಲಾಗುತ್ತದೆ.