ಹೈದರಾಬಾದ್: ಇತ್ತೀಚಿನ ದಿನಗಳಲ್ಲಿ ತೆಲುಗು ಚಿತ್ರರಂಗದ ಮಟ್ಟ ಮತ್ತಷ್ಟು ಹೆಚ್ಚಾಗಿದೆ. ಟಾಲಿವುಡ್‌ನ ಎಲ್ಲಾ ಹೀರೋಗಳು ಪ್ಯಾನ್ ಇಂಡಿಯಾ ಚಿತ್ರಗಳತ್ತ ವಾಲುತ್ತಿದ್ದಾರೆ. ವಿಶೇಷವಾಗಿ ಬಾಲಿವುಡ್ನಲ್ಲಿ, ಅವರು ತಮ್ಮ ಸಾಮರ್ಥ್ಯವನ್ನು ತೋರಿಸಲು ಪ್ರಯತ್ನಿಸುತ್ತಿದ್ದಾರೆ. ಇದಕ್ಕಾಗಿ ಅವರು ಬಾಲಿವುಡ್ ನಾಯಕಿಯರನ್ನು ತಮ್ಮ ಚಿತ್ರಗಳಲ್ಲಿ ಹಾಕಿಕೊಳ್ಳುತ್ತಿದ್ದಾರೆ. ಸ್ಟಾರ್ ನಟಿಯಾದರೆ ಬಾಲಿವುಡ್‌ನಲ್ಲಿ ಪ್ರಚಾರ ಮಾಡುವುದು ಸುಲಭ ಎಂದು ನಿರೀಕ್ಷಿಸಲಾಗಿದೆ. ಇದರೊಂದಿಗೆ ತೆಲುಗು ಸಿನಿಮಾ ನಿರ್ಮಾಪಕರು ಬೀ ಟೌನ್‌ನ ಸ್ಟಾರ್ ನಾಯಕಿಯರನ್ನು ಕರೆತರಲು ಯೋಚಿಸುತ್ತಿದ್ದು,ತಮ್ಮ ಸಿನಿಮಾದಲ್ಲಿ ನಟಿಸಲು ಅವರಿಗೆ ದೊಡ್ಡ ಮೊತ್ತವನ್ನು ಪಾವತಿಸುತ್ತಿದ್ದಾರೆ.
ಬಾಲಿವುಡ್‌ನ ಅನೇಕ ನಟಿಯರು ಈಗಾಗಲೇ ಟಾಲಿವುಡ್‌ನಲ್ಲಿ ನಟಿಸಿ ಉತ್ತಮ ಯಶಸ್ಸು ಕಂಡಿದ್ದು, ಮತ್ತೊಬ್ಬ ಯುವ ನಟಿ ಸೋನಾಕ್ಷಿ ಸಿನ್ಹಾ ಕೂಡ ತಮ್ಮ ಸಾಮರ್ಥ್ಯ ತೋರಿಸಲು ಸಜ್ಜಾಗಿದ್ದಾರೆ. ಈ ಮುದ್ದುಮುಖದ ಚೆಲುವೆ ಇಬ್ಬರು ದೊಡ್ಡ ಸ್ಟಾರ್ ನಟರೊಂದಿದೆ ಒಂದೇ ಬಾರಿಗೆ ನಟಿಸುವ ಅವಕಾಶ ದಕ್ಕಿಸಿಕೊಂಡಿದ್ದಾರೆ ಎನ್ನಲಾಗಿದೆ. ಇವುಗಳಲ್ಲಿ ಚಿರಂಜೀವಿ ನಾಯಕನಾಗಿ ಯುವ ನಿರ್ದೇಶಕ ಬಾಬಿ ನಿರ್ದೇಶನ ಹೊಸ ಸಿನಿಮಾ, ಇನ್ನೊಂದು ಗೋಪಿಚಂದ್ ಮಾಲಿನೇನಿ ನಿರ್ದೇಶನದ ಮುಂಬರುವ ಬಾಲಕೃಷ್ಣ ಚಿತ್ರ. ಒಂದೇ ಸಮಯದಲ್ಲಿ ಚಿರಂಜೀವಿ ಮತ್ತು ಬಾಲಕೃಷ್ಣರೊಂದಿಗೆ ರೋಮ್ಯಾನ್ಸ್ ಮಾಡಲಿದ್ದಾರೆ ನಟಿ ಸೋನಾಕ್ಷಿ ಸಿನ್ಹಾ.
ಈ ಎರಡು ಆಫರ್ ಗಳು ನಟಿ ಸೋನಾಕ್ಷಿ ವೆರೆಗೂ ತಲುಪಿದ್ದು, ಡೇಟ್ಸ್ ಬಗ್ಗೆ ಯೋಚಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.ಚಿರಂಜೀವಿ ಪ್ರಸ್ತುತ ಕೊರಟಾಲ ಶಿವ ನಿರ್ದೇಶನದ ‘ಆಚಾರ್ಯ’ ಚಿತ್ರದಲ್ಲಿ ನಟಿಸುತ್ತಿದ್ದು, ಚಿತ್ರದಲ್ಲಿ ಚಿರು ಎದುರು ಕಾಜಲ್ ಅಗರ್ವಾಲ್ ನಟಿಸಿದ್ದಾರೆ. ಇನ್ನು ಬೊಯಪತಿ ಶ್ರೀನು ನಿರ್ದೇಶನದ ಬಿಬಿ 3 ಚಿತ್ರದಲ್ಲಿ ಬಾಲಕೃಷ್ಣ ನಟಿಸುತ್ತಿದ್ದಾರೆ.