ಬಾಲಿವುಡ್ ಬೋಲ್ಡ್ ಬ್ಯೂಟಿ, ನಟಿ ಪೂನಂ ಪಾಂಡೆ ಶಾಕಿಂಗ್ ಸತ್ಯ ಸಂಗತಿಗಳನ್ನು ಬಿಚ್ಚಿಟ್ಟಿದ್ದು, ಇತ್ತೀಚಿನ ಸಂದರ್ಶನವೊಂದರಲ್ಲಿ ಪೂನಂ ತಾನು ಎಲ್ಲವನ್ನೂ ಪ್ರಚಾರಕ್ಕಾಗಿ ಮಾಡಿದ್ದೇನೆ ಎಂದು ಬಹಿರಂಗಪಡಿಸಿದ್ದಾರೆ. ತಾನಿ ನೀಡಿದ ವಿವಾದಾತ್ಮಕ ಹೇಳಿಕೆಗಳು ಪ್ರಚಾರದ ಸ್ಟಂಟ್ನ ಭಾಗವಾಗಿದೆ ಎಂದು ಹೇಳಿಕೆ ನೀಡಿ ಪೂನಂ ಎಲ್ಲರಿಗು ಶಾಕ್ ನೀಡಿದ್ದಾಳೆ. ಈಗ ಹಾಗೆ ಮಾಡಿದ್ದಕ್ಕೆ ಫೀಲ್ ಆಗುತ್ತಿದೆ ಎಂದು ಹೇಳಿದ್ದಾಳೆ.
”ನಾನು 17ನೇ ವಯಸ್ಸಿನಲ್ಲಿ ಬಾಲಿವುಡ್ಗೆ ಎಂಟ್ರಿ ಕೊಟ್ಟೆ. ಆಗ ನನಗೆ ಸಿನಿಮಾ ಉದ್ಯಮದ ಬಗ್ಗೆ ತಿಳುವಳಿಕೆ ಇರಲಿಲ್ಲ. ಹಾಗಾಗಿ ನಾನು ಎಲ್ಲರಿಗಿಂತ ಭಿನ್ನವಾಗಿರಲು ಬಯಸಿದ್ದೆ. ಅದರ ಭಾಗವಾಗಿ ಅವರು ಮಾಧ್ಯಮಗಳ ಗಮನಕ್ಕಾಗಿ ಹಲವಾರು ಬಾರಿ ವಿವಾದಾತ್ಮಕ ಕಾಮೆಂಟ್ಗಳನ್ನು ಮಾಡಿದ್ದೇನೆ. ಆದರೆ ಈಗ ಇಂತಹ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ನನಗೆ ತುಂಬಾ ನೋವೆನಿಸಿದೆ.
ನಾನು ಇಲ್ಲಿಯವರೆಗೆ ಚಿತ್ರರಂಗದಲ್ಲಿ ಬದುಕಿದ ಜೀವನಡಾ ಬಗ್ಗೆ ನನ್ನ ತಂದೆ-ತಾಯಿ ಕೂಡ ಸಂತೋಷವಾಗಿಲ್ಲ. ನಾನು ಆಯ್ಕೆ ಮಾಡಿದ ಪಾತ್ರಗಳ ಬಗ್ಗೆ ನನ್ನ ಹೆತ್ತವರಿಗೆ ಕೆಲೆವೊಮ್ಮೆ ನನಗೆ ಹೊಡೆದಿದ್ದಾರೆ ಕೂಡ. ಇದೀಗ ನನಗೆ ಕೆಲವು ಉತ್ತಮ ಅವಕಾಶಗಳು ಬರುತ್ತಿವೆ. ವಿವಾದಕ್ಕೆ ಅಂತ್ಯ ಹಾಕಿ ಕೆಲಸದ ಕಡೆ ಗಮನ ಕೊಡುತ್ತೇನೆ ಎಂದು ಪೂನಂ ಪಾಂಡೆ ಹೇಳಿದ್ದಾಳೆ.
ಬೋಲ್ಡ್ ನಟಿ ಪೂನಂ ಪಾಂಡೆ ಈಗ ತಮ್ಮ ಬೋಲ್ಡ್ ಮತ್ತು ಗ್ಲಾಮರ್ ಇಮೇಜ್ಗಿಂತ ಗಂಭೀರ ಪಾತ್ರಗಳಿಗಾಗಿ ಹುಡುಕುತ್ತಿದ್ದಾರೆ. ಸಿನಿಮಾಗಳಲ್ಲಿ ತಾಯಿ-ತಂಗಿಯಂತಹ ಪಾತ್ರಗಳನ್ನು ಮಾಡಿ ಅಭಿಮಾನಿಗಳಿಗೆ ತಮ್ಮ ನಟನಾ ಚಾತುರ್ಯವನ್ನು ತೋರಿಸಬೇಕೆಂಬ ಆಸೆ ಇದೆಯಂತೆ.
ತಮ್ಮ ಭವಿಷ್ಯದ ಯೋಜನೆಗಳ ಕುರಿತು ಮಾತನಾಡಿರುವ ಪೂನಂ ಪಾಂಡೆ, ಗ್ಲಾಮರ್ ಗೊಂಬೆಯಾಗಿ ಚಿತ್ರರಂಗದಲ್ಲಿ ಹೆಸರು ಮಾಡಿದ್ದೇನೆ. ಆದರೆ ಈಗ ಅವರು ಗಂಭೀರ ಪಾತ್ರಗಳನ್ನು ಮಾಡಲು ಯೋಚಿಸುತ್ತಿದ್ದು, ಸಿನಿಮಾಗಳಲ್ಲಿ ತಾಯಿ ಅಥವಾ ತಂಗಿಯಾಗಿ ನಟಿಸಲು ನನ್ನ ಅಭ್ಯಂತರವಿಲ್ಲ ಎಂದು ಹೇಳಿದ್ದು, ಅವಕಾಶ ಸಿಕ್ಕರೆ ಖಂಡಿತಾ ಆ ಪಾತ್ರಗಳನ್ನು ಮಾಡಲು ಇಷ್ಟಪಡುತ್ತೇನೆ ಎಂದು ಹೇಳಿದ್ದಾಳೆ.