ಬೆಂಗಾಲ್ : ಪಶ್ಚಿಮ ಬಂಗಾಳದಲ್ಲಿ ಚುನಾವಣಾ ರಂಗು ಕಾವೇರಿದ್ದು, ರಾಜಕೀಯ ನಾಯಕರ ಪಕ್ಷಾಂತರ ಮತ್ತು ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡವರು ಪಕ್ಷ ಸೇರ್ಪಡೆಗೊಳ್ಳುವುದು ಮುಂದುವರೆದಿದ್ದು, ಈಗ ಬಂಗಾಳಿ ನಟಿ ಶ್ರಬಂತಿ ಚಟರ್ಜಿ ಅವರು ಕೋಲ್ಕತಾದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.
ಹಲವು ಬಂಗಾಳಿಯಾ ಈಡಿಯಟ್, ದಿವಾನಾ, ಮಜ್ನು, ವಾಂಟೆಡ್, ಬಿಂದಾಸ್ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿರುವ ಚಟರ್ಜಿ, ವೆಬ್ ಸೀರಿಸ್, ರಿಯಾಲಿಟಿ ಷೋ ಹಾಗು ಟಿವಿ ಸೀರಿಯಲ್ ನಲ್ಲಿ ಕೂಡ ಕಾಣಿಸಿಕೊಂಡಿದ್ದು, ಇದೀಗ ರಾಜಕೀಯ ಇನ್ನಿಂಗ್ಸ್ ಆರಂಭಿಸಿದ್ದಾರೆ.
ಇತ್ತೀಚೆಗಷ್ಟೇ ಟೀಮ್ ಇಂಡಿಯಾ ಮಾಜಿ ಆಟಗಾರರಾದ ಮನೋಜ್ ತಿವಾರಿ ಹಾಗು ಅಶೋಕ್ ದಿಂಡಾ ಕೂಡ ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಪ್ರವೇಶಿಸಿದ್ದು, ಈಗ ನಟಿ ಶ್ರಬಂತಿ ಚಟರ್ಜಿ ರಾಜಕೀಯ ಪ್ರವೇಶ ಮಾಡಿದ್ದೂ ಬಂಗಾಳದಲ್ಲಿ ಚುನಾವಣಾ ರಂಗು ಕಾವೇರಿದೆ.
ಇದನ್ನು ಓದಿ: ಬಹು ನಿರೀಕ್ಷಿತ ‘ರಾಬರ್ಟ್’ ಚಿತ್ರದ ಮತ್ತೊಂದು ಹಾಡು ರಿಲೀಸ್; ಟ್ರೆಂಡಿಂಗ್ ನಲ್ಲಿ ‘ಬೇಬಿ ಡ್ಯಾನ್ಸ್’ ಸಾಂಗ್