ಬಿಗ್ ಬಾಸ್ ಕನ್ನಡ ಒಟಿಟಿ ರಿಯಾಲಿಟಿ ಶೋ ಅದ್ಧೂರಿಯಾಗಿ ಅಂತ್ಯಗೊಂಡಿದೆ. ಇದೇ ಮೊದಲ ಬಾರಿಗೆ ಕನ್ನಡ ಬಿಗ್ ಬಾಸ್ ಒಟಿಟಿ ವರ್ಶನ್ ಆರಂಭಿಸಲಾಗಿದ್ದು, ಚೊಚ್ಚಲ ಬಿಗ್ ಬಾಸ್ ಕನ್ನಡ ಒಟಿಟಿಯಲ್ಲಿ ನಾಲ್ವರು ಫೈನಲಿಸ್ಟ್ 9ನೇ ಆವೃತ್ತಿ ಬಿಗ್‌ಬಾಸ್‌ಗೆ ಪ್ರವೇಶ ಪಡೆದಿದ್ದಾರೆ.
ಹೌದು, ಆರ್ಯವರ್ಧನ್ ಗುರೂಜಿ ಮೊದಲ ಸ್ಪರ್ದಿಯಾದರೆ, ಕೋಸ್ಟಲ್‌ವುಡ್ ಸ್ಟಾರ್ ರೂಪೇಶ್ ಶೆಟ್ಟಿ ಎರಡನೇ ಸ್ಪರ್ಧಿಯಾಗಿ ಅವಕಾಶ ಪಡೆದಿದ್ದು, ಸಾನ್ಯ ಅಯ್ಯರ್, ರಾಕೇಶ್ ಅಡಿಗ ಕೂಡ 9ನೇ ಆವೃತ್ತಿ ಬಿಗ್ ಬಾಸ್‌ಗೆ ಅವಕಾಶ ಪಡೆದಿದ್ದು, ಈ ಮೂಲಕ ಒಟಿಟಿಯಿಂದ ನಾಲ್ವರು ಸ್ಪರ್ಧಿಗಳು 9ನೇ ಆವೃತ್ತಿ ಬಾಗ್ ಬಾಸ್‌ಗೆ ಎಂಟ್ರಿಕೊಟ್ಟಿದ್ದಾರೆ.
ಇದೆ ಸೆಪ್ಟೆಂಬರ್ 24 ರಿಂದ 9ನೇ ಆವೃತ್ತಿ ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ಆರಂಭಗೊಳ್ಳುತ್ತಿದ್ದು, ಸೋಷಿಯಲ್ ಮೀಡಿಯಾ ಸ್ಟಾರ್ ಕಾಫಿ ನಾಡು ಚಂದ್ರು ಸೇರಿದಂತೆ ಕೆಲವು ಸೆಲೆಬ್ರಿಟಿಗಳು 9ನೇ ಆವೃತ್ತಿ ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ಕಾಣಿಸಿಕೊಳ್ಳಲಿದ್ದಾರೆ.