Anchor Anushree : ಆ್ಯಂಕರ್ ಅನುಶ್ರೀ ಯಾವಾಗ ಮದುವೆ ಆಗ್ತಾರೆ? ಇವರು ಮದುವೆ ಆಗುವ ಹುಡುಗ ಯಾರು? ಈ ಕುತೂಹಲ ಎಲ್ಲರಲ್ಲೂ ಇತ್ತು. ಇದೀಗ ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಯುಟ್ಯೂಬ್‌ಗಳಲ್ಲಿ ಇವರ ಮದುವೆ ಸುದ್ದಿಯೇ..?
ಅಂದು ಏಕಾಂಗಿ.. ಇಂದು …ಅರ್ಧಂಗಿ

ಅನುಶ್ರೀ ಮದ್ದೆ ಆಮಂತ್ರಣ ಪತ್ರಿಕೆ ಸಿಂಪಲ್ ಆಗಿದೆ. ಇದರಲ್ಲಿ ಅನುಶ್ರೀ ಬರೆದ ಸಾಲು ಇಂಟ್ರಸ್ಟಿಂಗ್ ಆಗಿದೆ. ನೀವೆಲ್ಲ ಕೇಳುತ್ತಿದ್ದ ಏಕೈಕ ಪ್ರಶ್ನೆಗೆ ಈಗ ಉತ್ತರ. ಏಕಾಂಗಿ ನಿರೂಪಣೆಯ ನಂತರ ಅರ್ಧಾಂಗಿ ಆಗುವ ಹೊಸ ಮನ್ವಂತರ ಅಂತಲೇ ಬರೆದಿದ್ದಾರೆ.
ಕೊಡಗು ಮೂಲದ ರೋಷನ್ ಜತೆ ಮದುವೆ
ಅನುಶ್ರೀ ಮದುವೆ ಆಗುತ್ತಿರೋ ಹುಡಗನ ಹೆಸರು ರೋಷನ್ ಅಂತಲೇ ಇದೆ. ಇವರು ಕೊಡಗು ಮೂಲದ ರಾಮಮೂರ್ತಿ ಅವರ ಪುತ್ರ. ಸ್ವಲ್ಪ ದಿನದ ಹಿಂದೆ ವೈರಲ್ ಆಗಿದ್ದ ಹುಡುಗ ಇವರೇ ಆಗಿದ್ದು, ಈಗ ಅನುಶ್ರೀ ಅವರನ್ನೇ ಮದುವೆಯಾಗಲಿದ್ದಾರೆ ಎನ್ನುವ ಮಾಹಿತಿ ಹೊರಬಿದ್ದಿದೆ.
ಮದುವೆ ಮುಹೂರ್ತದ ಸಮಯ
ಅನುಶ್ರೀ & ರೋಷನ್ ಆಗಸ್ಟ್ 28 ರಂದು ಗುರುವಾರ ಬೆಳಗ್ಗೆ 10.56 ಶುಭ ಮುಹೂರ್ತದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಮದುವೆ ಬೆಂಗಳೂರಿನ ಕಗ್ಗಲಿಪುರದ ತಿಟ್ಟಹಳ್ಳಿಯಲ್ಲಿಯ ಸಂಭ್ರಮ ಬೈ ಸ್ವಾಲೈನ್ಸ್ ಸ್ಟುಡಿಯೋದಲ್ಲಿ ನೆರವೇರಲಿದೆ. ಇಲ್ಲಿಯೇ ಅನುಶ್ರೀ & ರೋಷನ್ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ
ಸಿಂಪಲ್ ಆಮಂತ್ರಣ ಪತ್ರಿಕೆ
ಅನುಶ್ರೀ ಹಾಗೂ ರೋಷನ್ ಮದುವೆ ಆಮಂತ್ರಣ ಪತ್ರಿಕೆ ತು೦ಬಾ ಸಿಂಪಲ್ ಆಗಿದೆ. ಲೈಟ್ ಕಲರ್ ಇನ್ವಿಟೇಷನ್ ಇದಾಗಿದ್ದು, ಕನ್ನಡ & ಇ೦ಗ್ಲೀಷ್ ಭಾಷೆಯಲ್ಲಿ ಇದೆ. ಸರಳ ಸು೦ದರ ಡಿಸೈನ್ ಮಧ್ಯೆದಲ್ಲಿ ಮೊದಲು ಅನುಶ್ರೀ ಹೆಸರಿದೆ. ಆ ಮೇಲೆ ರೋಷನ್ ಹೆಸರಿದೆ. ಇಬ್ಬರ ಹೆಸರು ಇಲ್ಲಿ ಗಮನ ಸೆಳೆಯುವಂತೇನೆ ಡಿಸೈನ್ ಮಾಡಿದ್ದಾರೆ.



