ಹೈದರಾಬಾದ್: ಇಟ್ತಚಿಗೆ ಬಹುಭಾಷಾ ನಟಿ ತಮನ್ನಾ ಭಾಟಿಯಾ ಕೋವಿಡ್ ಸೋಂಕಿಗೆ ಒಳಗಾಗಿದ್ದು ಎಲ್ಲರಿಗು ತಿಳಿದ ವಿಷಯ. ಇದರೊಂದಿಗೆ ನಟಿ ತಮನ್ನಾ ಭಾಟಿಯಾ ಸ್ವಲ್ಪ ತೂಕವನ್ನು ಹೆಚ್ಚಿಸಿಕೊಂಡಿದ್ದರು. ತಮನ್ನಾ ಅವರು ಜಿಮ್‌ನಲ್ಲಿ ವರ್ಕೌಟ್ ಮಾಡುವ ಮೂಲಕ ಕೋವಿಡ್ ಸೋಂಕು ತಗಲುವ ಮೊದಲು ಎಷ್ಟು ತೂಕವನ್ನು ಹೊಂದಿದ್ದರೋ, ಆ ತೂಕಕ್ಕೆ ಹಿಂದೂಗಿದ್ದೇನೆ ಎನ್ನುವ ರೀತಿಯಲ್ಲಿ ವರ್ಕೌಟ್ ಮಾಡಿದ್ದೂ, ನಿಯಮಿತವಾದ ಜೀವನಕ್ರಮದಿಂದಾಗಿ ಇದು ಸಾಧ್ಯ ಎಂದು ಹೇಳಿದ್ದಾರೆ.
ನಟಿ ತಮನ್ನಾ ಭಾಟಿಯಾ ಅವರು ಜಿಮ್‌ನಲ್ಲಿ ವರ್ಕೌಟ್ ಮಾಡುವ ವೀಡಿಯೊವನ್ನು ಇನ್ಸ್ತಾಗ್ರಾಮ್ ನಲ್ಲಿ ಹಂಚಿಕೊಂಡು, “ಅಯಮ್ ಬ್ಯಾಕ್ ಟು ಮೈ ಪ್ರಿ ಬಾಡಿ” ಎಂದು ಹೇಳಿಕೊಂಡಿದ್ದು, “ನಾನು ಯಾವುದನ್ನೂ ಅತಿಯಾಗಿ ಮಾಡಲು ಬಯಸುವುದಿಲ್ಲ. ಮಾಡಿದ ಕೆಲಸದಲ್ಲಿ ಸ್ಥಿರತೆ ಇದ್ದರೆ ಏನು ಬೇಕಾದರೂ ಸಾಧಿಸಬಹುದು. ನಾನು ಬಹಳ ಶಿಸ್ತಿನಿಂದ ಎರಡು ತಿಂಗಳು ವರ್ಕೌಟ್ ಮಾಡಿದ್ದೇನೆ.
ಕರೋನ ಸೋಂಕು ತಗಲುವ ಮೊದಲು ನಾನು ಹೇಗೆ ಇದ್ದೇ, ಹಾಗೆ ನಾನು ಬದಲಾಗಿದ್ದೇನೆ. ವರ್ಕೌಟ್ ಮಾಡುವುದನ್ನು ತಪ್ಪಿಸಲು ತಪ್ಪುಗಳನ್ನು ಮಾಡಬೇಡಿ ಪ್ರತಿದಿನ ವ್ಯಾಯಾಮ ಮಾಡಿ, ”ಎಂದು ನಟಿ ತಮನ್ನಾ ಹೇಳಿದ್ದಾರೆ. ಪ್ರಸ್ತುತ ತಮನ್ನಾ ತೆಲುಗಿನಲ್ಲಿ ‘ಎಫ್ 3’, ‘ಆಂಧಾ ಧುನ್’ ತೆಲುಗು ರೀಮೇಕ್ ಮತ್ತು ‘ಗುರ್ಟುಂಡಾ ಸೀತಕಲಂ’ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.
View this post on Instagram