ಮುಂಬೈ: ಕರೋನಾ ವೈರಸ್ ಸಾಮಾನ್ಯ ಜನರನ್ನು ಮಾತ್ರವಲ್ಲದೆ ಪ್ರಸಿದ್ಧ ವ್ಯಕ್ತಿಗಳನ್ನೂ ಸಹ ಭಯ ಪಡಿಸುತ್ತಿದೆ. ಈಗಾಗಲೇ ಅನೇಕ ನಟ ನಟಿಯರು, ರಾಜಕಾರಣಿಗಳು ಕರೋನಾ ಸೋಂಕಿಗೆ ಒಳಗಾಗಿದ್ದಾರೆ.
ಕನ್ನಡದಲ್ಲಿ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರದಲ್ಲಿ “ಜೋಕೆ ನಾನು ಬಳ್ಳಿಯ ಮಿಂಚು” ಐಟಂ ಸ್ಯಾಂಗ್ ನಲ್ಲಿ ಅಭಿನಯಸಿದ್ದ ನಟಿ ಮಿಲ್ಕಿ ಬ್ಯುಟಿ ತಮನ್ನಾ ಭಾಟಿಯಾ ಅವರಿಗೆ ಕರೋನ ಸೋಂಕು ದೃಢಪಟ್ಟಿದೆ. ಸದ್ಯ ನಟಿ ತಮನ್ನಾ ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಮನ್ನಾ ಅವರು ಕರೋನಾ ಸೋಂಕಿಗೆ ಒಳಗಾಗಿದ್ದಾರೆಂದು ತಿಳಿದು ಅವರ ಅಭಿಮಾನಿಗಳು ಆಘಾತಕ್ಕೊಳಗಿದ್ದು, ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತಿದ್ದಾರೆ.
ಕೆಲವು ದಿನಗಳ ಹಿಂದೆ, ತಮನ್ನಾಳ ಪೋಷಕರು ಕರೋನಾ ಸೋಂಕಿಗೆ ತುತ್ತಾಗಿದ್ದರು. ಕೆಲವು ದಿನಗಳ ಹಿಂದೆ ನಟಿ ತಮನ್ನಾ, ಕುಟುಂಬ ಮತ್ತು ಸಿಬ್ಬಂದಿಗೆ ಕರೋನಾ ಪರೀಕ್ಷೆಗಳನ್ನು ಮಾಡಿದ್ದರು. ಈ ಪರೀಕ್ಷೆಗಳಲ್ಲಿ, ಪೋಷಕರಿಗೆ ಕರೋನ ಸೋಂಕು ದೃಢಪಟ್ಟಿತ್ತು. ನಟಿ ತಮನ್ನಾ ಸೇರಿದಂತೆ ಉಳಿದ ಸಿಬ್ಬಂದಿಗೆ ಕರೋನ ಸೋಂಕು ನೆಗೆಟಿವ್ ಎಂದು ಬಂದಿತ್ತು. ನಟಿ ತಮನ್ನಾ ಅವರ ಪೋಷಕರು ಇತ್ತೀಚೆಗೆ ಕರೋನಾದಿಂದ ಚೇತರಿಸಿಕೊಂಡು ಪ್ರಸ್ತುತ ಆರೋಗ್ಯವಾಗಿದ್ದಾರೆ.