ತನ್ನ ಮರ್ಮಾಂಗವನ್ನು ಹೊರತೆಗೆದು ಅದನ್ನು ಅನುಭವಿಸುವಂತೆ ಹೇಳಿದ್ದ; ಬಾಲಿವುಡ್ ನಿರ್ದೇಶಕನ ವಿರುದ್ಧ ಖ್ಯಾತ ನಟಿ ಲೈಂಗಿಕ ಆರೋಪ

ಮುಂಬೈ: ಲೈಂಗಿಕ ಆರೋಪ ಎದುರಿಸುತ್ತಿರುವ ಬಾಲಿವುಡ್ ನಿರ್ದೇಶಕ ಸಾಜಿದ್ ಖಾನ್ ವಿರುದ್ಧ ನಟಿ ಶೆರ್ಲಿನ್ ಚೋಪ್ರಾ ಕೂಡ ಆರೋಪ ಮಾಡಿದ್ದೂ, ಸಾಜಿದ್ ಅವರ ಮರ್ಮಾಂಗವನ್ನು ತೋರಿಸಿ ಅನುಭವಿಸುವಂತೆ ಹೇಳಿದ್ದ ಎಂದು ಆರೋಪಿಸಿದ್ದಾರೆ. ಬಾಲಿವುಡ್ ನಿರ್ದೇಶಕ…

Sherlyn Chopra and director Sajid Khan vijayaprabha

ಮುಂಬೈ: ಲೈಂಗಿಕ ಆರೋಪ ಎದುರಿಸುತ್ತಿರುವ ಬಾಲಿವುಡ್ ನಿರ್ದೇಶಕ ಸಾಜಿದ್ ಖಾನ್ ವಿರುದ್ಧ ನಟಿ ಶೆರ್ಲಿನ್ ಚೋಪ್ರಾ ಕೂಡ ಆರೋಪ ಮಾಡಿದ್ದೂ, ಸಾಜಿದ್ ಅವರ ಮರ್ಮಾಂಗವನ್ನು ತೋರಿಸಿ ಅನುಭವಿಸುವಂತೆ ಹೇಳಿದ್ದ ಎಂದು ಆರೋಪಿಸಿದ್ದಾರೆ.

ಬಾಲಿವುಡ್ ನಿರ್ದೇಶಕ ಸಾಜಿದ್ ಖಾನ್ ವಿರುದ್ಧ ನಟಿ ಮತ್ತು ಶೆರ್ಲಿನ್ ಚೋಪ್ರಾ ಸೋಷಿಯಲ್ ಮೀಡಿಯಾದಲ್ಲಿ ಲೈಂಗಿಕ ಆರೋಪ ಮಾಡಿದ್ದಾರೆ. ಈಗಾಗಲೇ ಅನೇಕ ಮಹಿಳೆಯರು ಸಾಜಿದ್ ವಿರುದ್ಧ ಲೈಂಗಿಕ ಆರೋಪ ಮಾಡಿದ್ದಾರೆ. ಅವರನ್ನು ಇಂಡಿಯನ್ ಫಿಲಂ ಅಂಡ್ ಟೆಲಿವಿಜನ್ ಡೈರೆಕ್ಟರ್ ಅಸೋಸಿಯೇಷನ್ ಒಂದು ವರ್ಷ ನಿಷೇಧಿಸಿದೆ. ಅಷ್ಟೇ ಅಲ್ಲದೆ, 2018 ರಲ್ಲಿ ಭಾರತದಲ್ಲಿ #MeToo ಚಳವಳಿ ಉತ್ತುಂಗದಲ್ಲಿದ್ದಾಗ ನಿರ್ದೇಶಕ ಸಾಜಿದ್ ಖಾನ್ ಲೈಂಗಿಕ ಕಿರುಕುಳದ ಆರೋಪಗಳು ಬೆಳಕಿಗೆ ಬಂದ ನಂತರ ‘ಹೌಸ್ಫುಲ್ 4’ ಸಿನಿಮಾದಿಂದ ಅವರನ್ನು ಕೈಬಿಡಲಾಗಿತ್ತು. ಆದರೆ, ಇತ್ತೀಚೆಗೆ ನಟಿ ಶೆರ್ಲಿನ್ ಚೋಪ್ರಾ ಅವರು ನಿರ್ದೇಶಕ ಸಾಜಿದ್ ಖಾನ್ ಅವರ ವಿರುದ್ಧದ ಲೈಂಗಿಕ ಆರೋಪ ಮಾಡಿದ್ದೂ ಈಗ ಎಲ್ಲೆಡೆ ಚರ್ಚೆಯ ವಿಷಯವಾಗಿದೆ.

ಯಾವುದೇ ಭಯವಿಲ್ಲದೆ ನಿರ್ದೇಶಕ ಸಾಜಿದ್ ಖಾನ್ ವಿರುದ್ಧ ದೈರ್ಯವಾಗಿ ಲೈಂಗಿಕ ಆರೋಪ ಮಾಡಿದ್ದಾರೆ ನಟಿ ಶೆರ್ಲಿನ್ ಚೋಪ್ರಾ . ಈ ಕುರಿತು ಶೆರ್ಲಿನ್ ಚೋಪ್ರಾ ಅವರು ಟ್ವೀಟ್ ಮಾಡಿದ್ದೂ, 2005 ರಲ್ಲಿ ನಿರ್ದೇಶಕ ಸಾಜಿದ್ ಖಾನ್ ಅವರಿಂದ ಅನುಭವಿಸಿದ ಕಹಿ ಅನುಭವನ್ನು ಹಂಚಿಕೊಂಡಿದ್ದಾರೆ. ನಟಿ ಶೆರ್ಲಿನ್ ಚೋಪ್ರಾ ಅವರು “ನನ್ನ ತಂದೆ ತೀರಿಕೊಂಡ ಕೆಲವು ದಿನಗಳ ನಂತರ ನಾನು ಏಪ್ರಿಲ್ 2005 ರಲ್ಲಿ ಸಾಜಿದ್ ಖಾನ್ ಅವರನ್ನು ಭೇಟಿಯಾಗಿದ್ದೆ. ಈ ವೇಳೆ ನಿರ್ದೇಶಕ ಸಾಜಿದ್ ಖಾನ್ ಅವರು ತನ್ನ ಪ್ಯಾಂಟ್ನಿಂದ ಮರ್ಮಾಂಗವನ್ನು ಹೊರತೆಗೆದು, ಅದನ್ನು ಅನುಭವಿಸಲು ನನ್ನನ್ನು ಕೇಳಿದ್ದರು. ಪುರುಷಾಂಗ (ಶಿಶ್ನ) ಹೇಗಿರುತ್ತದೆ ಎಂದು ನನಗೆ ತಿಳಿದಿದೆ ಎಂದು ನಿರ್ದೇಶಕ ಸಾಜಿದ್ ಹೇಳಿದ್ದು ನನಗೆ ಇನ್ನೂ ನೆನಪಿದೆ. ಸಾಜಿದ್ ಖಾನ್ ಅವರೊಂದಿಗಿನ ನನ್ನ ಭೇಟಿಯು ಅವನ ಶಿಶ್ನವನ್ನು ಅನುಭವಿಸುವುದಾಗಲಿ, ಅದನ್ನು ರೇಟ್ ಮಾಡುವುದಾಗಲಿ ಅಲ್ಲ ಎಂದು ನಾನು ಅವನಿಗೆ ಹೇಳಿದ್ದೆ “ಎಂದು ಶೆರ್ಲಿನ್ ಟ್ವೀಟ್ ಮಾಡಿದ್ದಾರೆ.

Vijayaprabha Mobile App free

ಈ ವಿಷಯ ಏಕೆ ಇಲ್ಲಿಯವರೆಗೆ ಬಹಿರಂಗಗೊಳಿಸಿಲ್ಲ ಎಂಬ ಟ್ವಿಟರ್ ಬಳಕೆದಾರರ ಪ್ರಶ್ನೆಗೆ ಉತ್ತರಿಸಿದ ನಟಿ ಶೆರ್ಲಿನ್ ಚೋಪ್ರಾ, “ನಿರ್ದೇಶಕ ಸಾಜಿದ್ ಕ್ಯಾರಕ್ಟಾರ್ ಸಮರ್ಥಿಸಿಕೊಳ್ಳುವುದಕ್ಕೆ ಆತನ ಹತ್ತಿರ ಬಾಲಿವುಡ್ ಸೂಪರ್ ಸ್ಟಾರ್ ಗಳು ಇದ್ದಾರೆ. ಅವರ ವಿರುದ್ಧವಾಗಿ ಇದೆ ನನ್ನ ಮಾತು ಎಂದು ನಟಿ ಶೆರ್ಲಿನ್ ಚೋಪ್ರಾ ಹೇಳಿದ್ದು, ಬಾಲಿವುಡ್ ಮಾಫಿಯಾ ಬಲವಾದ ಸಿಂಡಿಕೇಟ್ ಎಂದು ಆರೋಪಿಸಿದ್ದಾರೆ. ಇದರ ಮುಂದುವರಿದ ಭಾಗವಾಗಿ ಶೆರ್ಲಿನ್ ಅವರು ಸರಣಿ ಟ್ವೀಟ್ ಮಾಡಿದ್ದೂ, ನಿರ್ದೇಶಕ ಸಾಜಿದ್ ಖಾನ್ ತನ್ನ ಮರ್ಮಾಂಗವನ್ನು ಹೊರತೆಗೆಯುವುದು ಮಾತ್ರವಲ್ಲದೆ, ಅದನ್ನು ಮುಟ್ಟಿ ಆನಂದಿಸುವಂತೆ ಹೇಳಿದ್ದ ಎಂದು ಆರೋಪಿಸಿದ್ದಾರೆ. ನೀನು ಎಂದಾದರೂ ಮರ್ಮಾಂಗವನ್ನು ನೋಡಿದ್ದೀಯಾ? ತೆಗೆದುಕೊ ಎಂದು ಸಾಜಿದ್ ಹೇಳಿದ್ದ ಎಂದು ನಟಿ ಶೆರ್ಲಿನ್ ಚೋಪ್ರಾ ಆರೋಪಿಸಿದ್ದಾರೆ.

ನಾನು ಸುಮ್ಮನೆ ಆರೋಪಗಳನ್ನು ಮಾಡುತ್ತಿಲ್ಲ. ಘಟನೆಗೆ ಸಂಬಂಧಿಸಿದ ಫೋನ್ ರೆಕಾರ್ಡ್ ಪುರಾವೆಗಳೂ ಇವೆ ಎಂದು ಶೆರ್ಲಿನ್ ಸ್ಪಷ್ಟಪಡಿಸಿದ್ದಾಳೆ.ತನ್ನ ತಂದೆ ಡಾ.ಪ್ರೇಮ್ ಸಾಗರ್ ಚೋಪ್ರಾ ಅವರ ಮರಣದ ನಂತರ, ತನ್ನನ್ನು ನಿರ್ದೇಶಕ ಸಾಜಿದ್ ಖಾನ್ ತನ್ನನ್ನು ಭೇಟಿ ಮಾಡಲು ಹೇಳಿದ್ದ ಎಂದು ಶೆರ್ಲಿನ್ ಚೋಪ್ರಾ ಹೇಳಿದ್ದು, ಆದರೆ, ಈ ಭೇಟಿ ಆತನ ಶಿಶ್ನದ ಮೇಲೆ ಇರುತ್ತದೆ ಎಂದು ಅವರು ಭಾವಿಸಲಿಲ್ಲ ಎಂದು ಆರೋಪಿಸಿದ್ದಾರೆ.

ಇದನ್ನು ಓದಿ: ಜನಪ್ರಿಯ ‘ಪಿಕಾಕ್ ಮ್ಯಾಗ್ಜಿನ್’ ಮುಖಪುಟಕ್ಕೆ ಐಕಾನಿಕ್ ಲುಕ್ ನೀಡಿದ ಕತ್ರಿನಾ

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.