ಡಾಕ್ಟರ್ ಜೊತೆ ರಹಸ್ಯ ಮದುವೆ: ಅದಕ್ಕಾಗಿಯೇ ಎಲ್ಲರಿಗೂ ಹೇಳಲಿಲ್ಲ..? ಮದುವೆ ಬಗ್ಗೆ ಸ್ಪಷ್ಟನೆ ನೀಡಿದ ನಟಿ ಸಂಜನಾ

ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿ ಬಂಧಿಸಿ ಇತ್ತೀಚೆಗೆ ಜಾಮೀನಿನ ಮೇಲೆ ಬಿಡುಗಡೆಯಾದ ನಾಯಕಿ ಸಂಜನಾ ಗಲ್ರಾನಿ ರಹಸ್ಯವಾಗಿ ವಿವಾಹವಾದ ವಿಷಯ ಎಲ್ಲರಿಗೂ ತಿಳಿದ ವಿಚಾರ. ಕಳೆದ ವರ್ಷ ಲಾಕ್ ಡೌನ್ ನಲ್ಲಿ ಡಾ.ಪಾಷಾ ಎನ್ನುವರನ್ನು…

ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿ ಬಂಧಿಸಿ ಇತ್ತೀಚೆಗೆ ಜಾಮೀನಿನ ಮೇಲೆ ಬಿಡುಗಡೆಯಾದ ನಾಯಕಿ ಸಂಜನಾ ಗಲ್ರಾನಿ ರಹಸ್ಯವಾಗಿ ವಿವಾಹವಾದ ವಿಷಯ ಎಲ್ಲರಿಗೂ ತಿಳಿದ ವಿಚಾರ.

ಕಳೆದ ವರ್ಷ ಲಾಕ್ ಡೌನ್ ನಲ್ಲಿ ಡಾ.ಪಾಷಾ ಎನ್ನುವರನ್ನು ವಿವಾಹವಾದ ನಟಿ ಸಂಜನಾ ಗಲ್ರಾಣಿ ಇತ್ತೀಚೆಗೆ ಈ ವಿಷಯವನ್ನು ಬಹಿರಂಗಪಡಿಸಿದ್ದು, ತಾನು ಏಕೆ ರಹಸ್ಯವಾಗಿ ಮದುವೆಯಾಗಬೇಕಾಯಿತು ಎಂಬುದನ್ನು ಕೂಡ ವಿವರಿಸಿದರು.

Vijayaprabha Mobile App free

‘ಮದುವೆಯನ್ನು ನಿಗದಿಪಡಿಸಿದ ಸಮಯದಲ್ಲಿ’ ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದ ವಿಷಯದಲ್ಲಿ ತೊಂದರೆಗಳು ಎದುರಾದವು. ಇದರಿಂದ ನನ್ನ ಮದುವೆ ವಿಷಯವನ್ನು ಉದ್ಯಮದಲ್ಲಿರುವವರೊಂದಿಗೆ ಹಂಚಿಕೊಳ್ಳಲು ನನಗೆ ಸಾಧ್ಯವಾಗಲಿಲ್ಲ. ಆದರೆ ಎಲ್ಲರನ್ನು ಕರೆದು ರಿಸಪ್ಷನ್ ಗ್ರ್ಯಾಂಡ್ ಆಗಿ ಮಾಡಲು ಬಯಸಿದ್ದೆವು. ಆದರೆ ಲಾಕ್‌ಡೌನ್‌ನಿಂದಾಗಿ ಅದು ಸಾಧ್ಯವಾಗಲಿಲ್ಲ ”ಎಂದು ನಟಿ ಸಂಜನಾ ಗಲ್ರಾಣಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಕನ್ನಡದ ಗಂಡಹೆಂಡತಿ ಸಿನಿಮಾ ಮೂಲಕ ಹೆಸರುವಾಸಿಯಾದ ನಟಿ ಸಂಜನಾ ಗಲ್ರಾಣಿ ಜಾಕ್ ಪಾಟ್, ಮೈಲಾರಿ, ದಂಡು ಪಾಳ್ಯ ಸೇರಿ ಇನ್ನು ಹಲವು ಸಿನಿಮಾಗಳಲ್ಲಿ ನಟಿಸಿದ್ದಲ್ಲದೆ, ತೆಲುಗಿನ ‘ಬುಜ್ಜಿಗಾಡು’, ‘ಸತ್ಯಮೇವ ಜಯತೆ’, ಮತ್ತು ‘ಸರ್ದಾರ್ ಗಬ್ಬರ್ ಸಿಂಗ್’ ಚಿತ್ರಗಳಲ್ಲಿ ನಟಿಸಿದ್ದಾರೆ.

ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ, ಮೂರು ತಿಂಗಳು ಜೈಲುವಾಸ ಅನುಭವಿಸಿದ ನಟಿ ಸಂಜನಾ ಅವರು ಇತ್ತೀಚಿಗೆ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.