ಸಿನಿಮಾ ರಂಗದ ಕುರಿತು ಸಾಮಾನ್ಯವಾಗಿ ಗಾಸಿಪ್ ಸುದ್ದಿಗಳು ಹರಿದಾಡುತ್ತಿರುತ್ತವೆ. ಈಗ ಬಹುಭಾಷಾ ನಟಿ ಸಾಯಿಪಲ್ಲವಿ ಚಿತ್ರರಂಗಕ್ಕೆ ಗುಡ್‌ಬೈ ಹೇಳಿ, ಕ್ಲಿನಿಕ್ ತೆರೆಯಲಿದ್ದಾರೆ ಎಂಬ ವಿಚಾರವೊಂದು ಹಬ್ಬಿದೆ. ಹೌದು, ವೈದ್ಯಕೀಯ ಶಿಕ್ಷಣ ಪಡೆದಿರುವ ಅವರು ಕ್ಲಿನಿಕ್ ಆರಂಭಿಸುವ ಚಿಂತನೆಯಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ.
ನಟಿ ಸಾಯಿ ಪಲ್ಲವಿ ಅವರು ಕಾಶ್ಮೀರ ಪಂಡಿತರ ಹತ್ಯೆಯನ್ನು, ಗೋ ಹತ್ಯೆ ಮಾಡುವವರಿಗೆ ಹೋಲಿಸಿದರು ಎನ್ನುವ ವಿವಾದದಿಂದ ಬೇಸತ್ತು, ಸಿನಿಮಾ ರಂಗವನ್ನೇ ತೊರೆಯಲಿದ್ದಾರೆ. ಈ ಬಗ್ಗೆ ಅವರು ತಮ್ಮ ಕುಟುಂಬಸ್ಥರ ಜೊತೆ ಚರ್ಚಿಸಿದ್ದಾರೆ ಎನ್ನಲಾಗುತ್ತಿದೆ. ಇದೇ ಕಾರಣಕ್ಕೆ ಇವರು ಯಾವುದೇ ಹೊಸ ಚಿತ್ರಗಳನ್ನು ಒಪ್ಪಿಕೊಂಡಿಲ್ಲ ಎಂದು ಹೇಳಲಾಗಿದೆ.
ಸಿನಿಮಾ ರಂಗದಲ್ಲಿ ಗಾಸಿಪ್ ಕಾಮನ್ ಆಗಿದ್ದು, ಸಾಯಿ ಪಲ್ಲವಿ ಸಿನಿಮಾ ರಂಗದಿಂದ ದೂರವಾಗುತ್ತಾರಾ ಎನ್ನುವುದು ಕೂಡ ಗಾಸಿಪ್ ಇರಬಹುದು ಎಂದೇ ನಂಬಲಾಗಿತ್ತು. ಆದರೆ, ಸಾಯಿ ಪಲ್ಲವಿ ಕ್ಲಿನಿಕ್ ತೆರೆಯುವ ಕುರಿತು ಮನೆಯಲ್ಲಿ ಚರ್ಚೆ ಮಾಡಿದ್ದರಿಂದ ಇದು, ಇಂದಲ್ಲ ನಾಳೆ ನಿಜವೂ ಆಗಬಹುದು ಎನ್ನಲಾಗುತ್ತಿದೆ. ವೈದ್ಯಕೀಯ ಶಿಕ್ಷಣ ಪಡೆದಿರುವ ಸಾಯಿ ಪಲ್ಲವಿ ಕೂಡ ಇದಕ್ಕೆ ಪೂರಕ ಎನ್ನುವಂತೆ ತುಂಬಾ ಸಿನಿಮಾಗಳನ್ನು ಒಪ್ಪಿಕೊಂಡಿಲ್ಲ. ಇದರಿಂದ ಸಿನಿಮಾ ಬದಲಾಗಿ ಸಾಯಿ ಪಲ್ಲವಿ ಕ್ಲಿನಿಕ್ ತೆರೆಯುವುದು ನಿಜವೆನ್ನಲಾಗುತ್ತಿದೆ.