ರೈತರಿಗೆ ಕೇಂದ್ರ ಸರ್ಕಾರ ಗುಡ್‌ನ್ಯೂಸ್ ನೀಡಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು (CCEA) 2022-23 ರ ಸಕ್ಕರೆ ಹಂಗಾಮಿಗೆ (ಅಕ್ಟೋಬರ್-ಸೆಪ್ಟೆಂಬರ್) ಕಬ್ಬಿನ ನ್ಯಾಯಯುತ ಮತ್ತು ಲಾಭದಾಯಕ ಬೆಲೆಯನ್ನು (ಎಫ್‌ಆರ್‌ಪಿ) ಕ್ವಿಂಟಲ್‌ಗೆ 305 ರೂ ನಿಗದಿ ಮಾಡಿದೆ.
ಕಬ್ಬು ಬೆಳೆಗಾರರಿಗೆ ಕಾರ್ಖಾನೆಗಳು ಕಬ್ಬು ನುರಿಸಲು (ನ್ಯಾಯಯುತ & ಲಾಭದಾಯಕ)ನೀಡುವ ಕನಿಷ್ಠ ಬೆಂಬಲ ಬೆಲೆ, ಈ ಹಿಂದೆ ಪ್ರತಿ ಕ್ವಿಂಟಲ್‌ಗೆ 290 ರೂಪಾಯಿ ಇದ್ದ ಕಬ್ಬಿನ ದರ (ಎಫ್‌ಆರ್‌ಪಿ) ಈಗ ಕ್ವಿಂಟಲ್‌ಗೆ 305 ರೂಪಾಯಿಗೆ ನಿಗದಿಪಡಿಸಿದ್ದು, ಪ್ರತಿ ಕ್ವಿಂಟಾಲ್‌ಗೆ ₹ 15 ಏರಿಕೆ ಮಾಡಿದೆ. ಕಳೆದ ಎಂಟು ವರ್ಷಗಳಲ್ಲಿ ಸರ್ಕಾರ ಎಫ್‌ಆರ್‌ಪಿಯನ್ನು ಶೇ.34 ಕ್ಕಿಂತ ಹೆಚ್ಚು ಹೆಚ್ಚಿಸಿದೆ.
ಈ ಬಗ್ಗೆ ಸೂಚನೆ ನೀಡಿರುವ ಸರ್ಕಾರ ಕಾರ್ಖಾನೆಗಳು, ರೈತರಿಗೆ ಕ್ವಿಂಟಾಲ್‌ಗೆ ₹305 ನೀಡಲು ಹೇಳಿದೆ. ಇದರಿಂದ 5 ಕೋಟಿ ಕಬ್ಬು ಬೆಳೆಗಾರರು ಹಾಗೂ ದೇಶಾದ್ಯಂತ ಸಕ್ಕರೆ ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಿರುವ 5 ಲಕ್ಷ ಕಾರ್ಮಿಕರಿಗೆ ಅನುಕೂಲವಾಗಲಿದೆ.. ಈ ಹಿಂದೆ ರೈತರು ಪ್ರತಿ ಕ್ವಿಂಟಾಲ್‌ಗೆ ₹ 290 ಪಡೆಯುತ್ತಿದ್ದರು.