Rita Anchan | ಹಿರಿಯ ನಟಿ ರೀಟಾ ಅಂಚನ್‌ ನಿಧನ

Rita Anchan : ಕಾದಂಬರಿ ಆಧಾರಿತ ಕನ್ನಡದ ಕ್ಲಾಸಿಕ್‌ ಚಿತ್ರಗಳಲ್ಲಿ ಒಂದಾದ ಪರಸಂಗದ ಗೆಂಡೆತಿಮ್ಮ ಸಿನಿಮಾದಲ್ಲಿ ಮರಕಣಿ ಪಾತ್ರದಲ್ಲಿ ನಟಿಸಿದ್ದ ರೀಟಾ ರಾಧಾಕೃಷ್ಣ ಅಂಚನ್‌ (68) ನಿಧನರಾಗಿದ್ದಾರೆ. ಬಿಲ್ಲವರ ಸಂಘದ ಮಾಜಿ ಅಧ್ಯಕ್ಷ &…

Rita Anchan

Rita Anchan : ಕಾದಂಬರಿ ಆಧಾರಿತ ಕನ್ನಡದ ಕ್ಲಾಸಿಕ್‌ ಚಿತ್ರಗಳಲ್ಲಿ ಒಂದಾದ ಪರಸಂಗದ ಗೆಂಡೆತಿಮ್ಮ ಸಿನಿಮಾದಲ್ಲಿ ಮರಕಣಿ ಪಾತ್ರದಲ್ಲಿ ನಟಿಸಿದ್ದ ರೀಟಾ ರಾಧಾಕೃಷ್ಣ ಅಂಚನ್‌ (68) ನಿಧನರಾಗಿದ್ದಾರೆ.

ಬಿಲ್ಲವರ ಸಂಘದ ಮಾಜಿ ಅಧ್ಯಕ್ಷ & ಟಾಟಾ ಕಂಪನಿಯಲ್ಲಿ ಹಿರಿಯ ಅಧಿಕಾರಿಯಾಗಿದ್ದ ಟಿ.ಅಂಚನ್ ಅವರ ಪುತ್ರಿಯಾಗಿರುವ ರೀಟಾ ವಿವಾಹವಾದ ಬಳಿಕ ಪತಿ ರಾಧಾಕೃಷ್ಣ ಮಂಚಿಗಯ್ಯ ಜೊತೆ ಬೆಂಗಳೂರಿನಲ್ಲಿ ನೆಲೆಸಿದ್ದರು. ಪತಿ, ಪುತ್ರ, ಪುತ್ರಿ ಹಾಗೂ ಕುಟುಂಬಸ್ಥರನ್ನು ಅವರು ಅಗಲಿದ್ದಾರೆ.

ಇದನ್ನೂ ಓದಿ: Kartika Purnima | ಕಾರ್ತಿಕ ಪೂರ್ಣಿಮೆ ಈ ರಾಶಿಯವರಿಗೆ ಅತ್ಯಂತ ಶುಭ ಯೋಗ

Vijayaprabha Mobile App free

Rita Anchan : ಬಹುಭಾಷಾ ನಟಿಯಾಗಿದ್ದರು ರೀಟಾ..

ಬಹುಭಾಷಾ ನಟಿಯಾಗಿದ್ದ ರೀಟಾ ಅಂಚನ್‌ ಕಲಾತ್ಮಕ & ಪ್ರಯೋಗಾತ್ಮಕ ಸಿನಿಮಾಗಳಲ್ಲಿ ಹೆಚ್ಚಾಗಿ ನಟಿಸಿದ್ದರು. 1978ರಲ್ಲಿ ಲೋಕೇಶ್‌ ಮುಖ್ಯಭೂಮಿಕೆಯಲ್ಲಿದ್ದ ಪರಸಂಗದ ಗೆಂಡೆತಿಮ್ಮ ಸಿನಿಮಾದ ಮರಕಣಿ ಪಾತ್ರದಿಂದಲೇ ಇವರು ಪ್ರಸಿದ್ಧರಾಗಿದ್ದರು. ಈ ಸಿನಿಮಾದ ನಟನೆಗಾಗಿ ಅವರು ಸಾಕಷ್ಟು ಪ್ರಶಸ್ತಿಗಳನ್ನೂ ಪಡೆದುಕೊಂಡಿದ್ದರು.

ಹಿಂದಿ, ಪಂಜಾಬಿ, ಗುಜರಾತಿ ಸಿನಿಮಾಗಳಲ್ಲೂ ನಟಿಸಿದ್ದ ಅವರು ಕೆಲವು ವರ್ಷಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದರು. ರೀಟಾ ಅವರ ಅತ್ತೆ ಮೈಸೂರು ಮಹಾರಾಜ ಒಡೆಯರ್‌ ಕುಟುಂಬದವರು.

ಇದನ್ನೂ ಓದಿPanchanga | ಇಂದು ಶುಕ್ರವಾರ 15-11-2024; ಶುಭ ಮುಹೂರ್ತ, ಅಶುಭ ಮುಹೂರ್ತಗಳ ಮಾಹಿತಿ!

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.