ಆ ಲೀಡರ್ ನನ್ನನ್ನು ಹೋಟೆಲ್‌ ರೂಮ್​​ಗೆ ಕರೆದಿದ್ದ; ರಾಜಕಾರಣಿ ವಿರುದ್ಧ ಖ್ಯಾತ ನಟಿಯಿಂದ ಗಂಭೀರ ಆರೋಪ

Rini Ann George : ಕೇರಳದ ಯುವ ರಾಜಕಾರಣಿಯೊಬ್ಬರು ತನಗೆ ಅಶ್ಲೀಲ ಮೆಸೇಜ್​​ಗಳನ್ನು (ಆಕ್ಷೇಪಾರ್ಹ ಸಂದೇಶ) ಕಳುಹಿಸಿ ಹೋಟೆಲ್‌ಗೆ ಬರುವಂತೆ ಕೇಳಿಕೊಂಡಿದ್ದರು ಎಂದು ಮಲಯಾಳಂ ನಟಿ ರಿನಿ ಆನ್ ಜಾರ್ಜ್ (Rini Ann George)…

Rini Ann George

Rini Ann George : ಕೇರಳದ ಯುವ ರಾಜಕಾರಣಿಯೊಬ್ಬರು ತನಗೆ ಅಶ್ಲೀಲ ಮೆಸೇಜ್​​ಗಳನ್ನು (ಆಕ್ಷೇಪಾರ್ಹ ಸಂದೇಶ) ಕಳುಹಿಸಿ ಹೋಟೆಲ್‌ಗೆ ಬರುವಂತೆ ಕೇಳಿಕೊಂಡಿದ್ದರು ಎಂದು ಮಲಯಾಳಂ ನಟಿ ರಿನಿ ಆನ್ ಜಾರ್ಜ್ (Rini Ann George) ಆರೋಪಿಸಿದ್ದಾರೆ.

ಹೌದು, ಕೇರಳದ ಮುಂಚೂಣಿ ರಾಜಕೀಯ ಪಕ್ಷವೊಂದರ ಯುವ ನಾಯಕನೊಬ್ಬ ಅಶ್ಲೀಲ ಸಂದೇಶಗಳನ್ನು ರವಾನಿಸಿದ್ದು, ನನ್ನೊಂದಿಗೆ ದುರ್ವರ್ತನೆ ತೋರಿದ್ದಾರೆ ಎಂದು ಮಲಯಾಳಂನ ನಟಿ ರಿನಿ ಆನ್ ಜಾರ್ಜ್ ಆರೋಪಿಸಿದ್ದು, “ನನ್ನ ಈ ಹೇಳಿಕೆಯ ಬೆನ್ನಲ್ಲೇ ನನ್ನ ವಿರುದ್ಧ ಆನ್ ಲೈನ್ ದಾಳಿ ನಡೆಯುತ್ತಿದ್ದು, ಈ ಬೆದರಿಕೆ ಹೀಗೆಯೇ ಮುಂದುವರಿದಲ್ಲಿ ನಾನು ನಾಯಕನ ಹೆಸರು ಬಹಿರಂಗಪಡಿಸುತ್ತೇನೆ” ಎಂದು ರಿನಿ ಆನ್ ಜಾರ್ಜ್ ಹೇಳಿದ್ದಾರೆ.

ಕಳೆದ ಮೂರು ವರ್ಷಗಳಿಂದ ತಮಗೆ ಇಂತಹ ಮೆಸೇಜ್​​ಗಳು ಬರುತ್ತಿವೆ ಎಂದಿರುವ ನಟಿ, ‘ನನ್ನ ಮೇಲೆ ಯಾವುದೇ ದೌರ್ಜನ್ಯ ನಡೆದಿಲ್ಲ, ಆದರೆ ಅನೇಕರು ಕಿರುಕುಳಕ್ಕೆ ಒಳಗಾಗಿದ್ದಾರೆ ಎಂದು ಕೇಳಿದ್ದೇನೆ. ನಾನು ಅವರ ಪರವಾಗಿ ಮಾತನಾಡುತ್ತಿದ್ದೇನೆ’ ಎಂದು ಹೇಳಿದ್ದಾರೆ.

Vijayaprabha Mobile App free

ನಟಿ ನಟಿ ರಿನಿ ಆನ್ ಜಾರ್ಜ್ ಯಾರನ್ನೂ ಹೆಸರಿಸದಿದ್ದರೂ ಕಾಂಗ್ರೆಸ್ ಶಾಸಕ ರಾಹುಲ್ ಮಂಕೂಟತಿಲ್ ರಾಜೀನಾಮೆಗೆ ಬಿಜೆಪಿ ಒತ್ತಾಯಿಸಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.