ಬಹುಭಾಷಾ ನಟಿ, ಸ್ಯಾಂಡಲ್ ವುಡ್ ಕಿರಿಕ್ ಬೆಡಗಿ, ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ಅವರ ಜನಪ್ರಿಯತೆಯ ಬಗ್ಗೆ ಹೊಸದಾಗಿ ಹೇಳಬೇಕಾಗಿಲ್ಲ ಅವರ ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ಹಿಟ್ ಆಗಿತ್ತಿದ್ದು, ಇತ್ತೀಚಿಗೆ ಬಿಡುಗಡೆಯಾದ ತೆಲುಗಿನ ಅಲ್ಲೂ ಅರ್ಜುನ್ ಅಭಿನಯದ ‘ಪುಷ್ಪ’ ಸಿನಿಮಾ (Pushpa Movie) ಸೂಪರ್ ಹಿಟ್ ಆಗಿದ್ದು, ವಿಶ್ವಾದ್ಯಂತ 350 ಕೋಟಿ ರೂಪಾಯಿಗೂ ಅಧಿಕ ಹಣ ಗಳಿಸುವಲ್ಲಿ ಆ ಚಿತ್ರ ಯಶಸ್ವಿ ಆಗಿದೆ.
ತೆಲುಗಿನ ‘ಪುಷ್ಪ’ ಸಿನಿಮಾದ ಸಕ್ಸಸ್ ನಿಂದ ರಶ್ಮಿಕಾ ಅವರ ಡಿಮ್ಯಾಂಡ್ ಕೂಡ ಹೆಚ್ಚಿದ್ದು, ಅವರು ಸಂಭಾವನೆ ಜಾಸ್ತಿ ಮಾಡಿಕೊಂಡಿರುವ ಬಗ್ಗೆಯೂ ವರದಿ ಆಗಿದೆ. ಅಷ್ಟೇ ಅಲ್ಲದೆ, ನಟಿ ರಶ್ಮಿಕಾ ಮಂದಣ್ಣ ಬಾಲಿವುಡ್ ಸಿನಿಮಾಗಳ ಕಡೆಗೆ ಹೆಚ್ಚು ಗಮನ ನೀಡುತ್ತಿದ್ದಾರೆ.
ಈಗಾಗಿ ನಟಿ ರಶ್ಮಿಕಾ ಮುಂಬೈನಲ್ಲೆ ವಾಸ್ತವ್ಯ ಹೂಡಲು ಹೊಸ ಮನೆಗೆ ಶಿಫ್ಟ್ ಆಗಿದ್ದು, ಬಾಲಿವುಡ್ ನಲ್ಲಿ ತನ್ನ ಹವಾ ಕ್ರಿಯೇಟ್ ಮಾಡಲು ಸಜ್ಜಾಗಿದ್ದು, ಇದರ ಬಗ್ಗೆ ಅಭಿಮಾನಿಗಳಿಗೆ ಮಾಹಿತಿ ನೀಡಿದ್ದಾರೆ. ಇನ್ನು ಹೊಸ ಮನೆಗೆ ತೆರಳಿರುವ ಅವರಿಗೆ ರಶ್ಮಿಕಾಗೆ ಎಲ್ಲರೂ ಅಭಿನಂದನೆ ತಿಳಿಸಿದ್ದಾರೆ.