ಖ್ಯಾತ ಬಹುಭಾಷಾ ನಟಿ ರಮ್ಯಾ ಕೃಷ್ಣ ಅವರು ತಮ್ಮ ನಟನೆ ಮತ್ತು ಸೌಂದರ್ಯದಿಂದ ಸುಮಾರು ಮೂರು ದಶಕಗಳಿಗೂ ಹೆಚ್ಚು ಕಾಲ ಚಿತ್ರರಂಗವನ್ನು ಆಳಿದ್ದು, ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದು, ಕನ್ನಡದ ರವಿಚಂದ್ರನ್ ಸೇರಿದಂತೆ ಸೂಯಾಪರ್ ಸ್ಟಾರ್ ರಜನೀಕಾಂತ್ , ಕಮಲ್ ಹಾಸನ್, ಚಿರಂಜೀವಿ, ಬಾಲಕೃಷ್ಣ, ನಾಗಾರ್ಜುನ ಸೇರಿದಂತೆ ಖ್ಯಾತ ನಟರ ಜೊತೆ ನಟಿಸಿ ಸೈ ಎನಿಸಿಕೊಂಡಿದ್ದಾರೆ.
ನಟಿ ರಮ್ಯಾ ಕೃಷ್ಣ ಅವರು ತಮ್ಮ ವೃತ್ತಿಜೀವನದಲ್ಲಿ, ಸುಮಾರು 260 ಕ್ಕೂ ಹೆಚ್ಚು ಚಿತ್ರಗಳಲ್ಲಿ ಕೆಲಸ ಮಾಡಿದ್ದು, ಕಾಂತೆ ಕೂತುರ್ನೆ ಕಾಣು, ಕೊಂಚೆಂ ಇಷ್ಟ ಕೊಂಚೆಂ ಕಷ್ಟಂ, ಪಡಯಪ್ಪ, ಬಾಹುಬಲಿ: ದಿ ಬಿಗಿನಿಂಗ್, ಬಾಹುಬಲಿ: ದಿ ಕನ್‌ಕ್ಲೂಷನ್, ಮತ್ತು ಸೂಪರ್ ಡಿಲಕ್ಸ್ ಸೇರಿದಂತೆ ಹಲವಾರು ಹಿಟ್ ಚಿತ್ರಗಳನ್ನು ನೀಡಿದ್ದು, ಕನ್ನಡದಲ್ಲಿ ಸ್ವೀಟಿ ನನ್ನ ಜೋಡಿ, ಮಾಂಗಲ್ಯಮ್ ತಂತು ನಾನೇನಾ, ಏಕಾಂಗಿ, ನೀಲಾಂಬರಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.
ಮದುವೆಗೂ ಮುನ್ನ ನಟಿ ರಮ್ಯಾ ಕೃಷ್ಣ ಗರ್ಭಪಾತ:
ಈಗ ಖ್ಯಾತ ಬಹುಭಾಷಾ ನಟಿ ರಮ್ಯಾ ಕೃಷ್ಣ ಮತ್ತು ನಿರ್ದೇಶಕ ಕೆ.ಎಸ್.ರವಿಕುಮಾರ್ ಸಂಬಂಧದ ವಿವಾದ ಮತ್ತೆ ಮುನ್ನಲೆಗೆ ಬಂದಿದೆ. ಹೌದು, ಪಡೆಯಪ್ಪ ಮತ್ತು ಪಾಟಲಿ ಸಿನಿಮಾ ಶೂಟಿಂಗ್ ವೇಳೆ ನಟಿ ರಮ್ಯಾ ಕೃಷ್ಣ ಮತ್ತು ನಿರ್ದೇಶಕ ಕೆ.ಎಸ್.ರವಿಕುಮಾರ್ ಇಬ್ಬರ ನಡುವೆ ಸ್ನೇಹ ಬೆಳೆದಿದ್ದು, ಇಬ್ಬರು ಸಂಬಂಧ ಹೊಂದಿದ್ದರು ಎಂಬ ವದಂತಿ ಕೇಳಿಬಂದಿವೆ.
ಅಲ್ಲದೇ, ನಿರ್ದೇಶಕ ಕೆ.ಎಸ್. ರವಿಕುಮಾರ್‌ನಿಂದ ನಟಿ ರಮ್ಯಾ ಕೃಷ್ಣ ಗರ್ಭಿಣಿಯಾಗಿದ್ದರು ಎಂಬ ವದಂತಿ ಹಬ್ಬಿತ್ತು. ಆದರೆ, ಈ ಮಗು ಇಬ್ಬರಿಗೂ ಬೇಡವಾಗಿತ್ತು. ಆಗ ರಮ್ಯಾ ಗರ್ಭಪಾತಕ್ಕೆ ಮುಂದಾಗಿದ್ದರು. ಮಾತ್ರವಲ್ಲ, 75 ಲಕ್ಷ ಬೇಡಿಕೆ ಇಟ್ಟಿದ್ದರೆಂಬ ಸುದ್ದಿ ಇದೀಗ ಬಹಿರಂಗಗೊಂಡಿದ್ದು, ಎಲ್ಲೆಡೆ ಹರಿದಾಡುತ್ತಿದೆ.