ಅಪ್ಪು ಅಭಿನಯದ ರಾಜಕುಮಾರ ಮತ್ತು ಜೇಮ್ಸ್ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದ ಪ್ರಿಯಾ ಆನಂದ್, ವಿಚಿತ್ರ ಹೇಳಿಕೆ ನೀಡಿ ಸುದ್ದಿಯಲ್ಲಿದ್ದಾರೆ.
ಹೌದು, ಸಂದರ್ಶನವೊಂದರಲ್ಲಿ ಮಾತನಾಡಿದ ನಟಿ ಪ್ರಿಯಾ ಆನಂದ್ ‘ನಾನು ದೇವಮಾನವ ನಿತ್ಯಾನಂದರನ್ನು ಇಷ್ಟಪಡುತ್ತೇನೆ. ಒಂದು ವೇಳೆ ನಾನು ಅವರನ್ನು ಮದುವೆಯಾದರೆ, ನನ್ನ ಹೆಸರನ್ನು ಬದಲಾಯಿಸಬೇಕಿಲ್ಲ.
ನಿತ್ಯಾನಂದನ ಬಗ್ಗೆ ಯಾವುದೇ ಅಪಪ್ರಚಾರ ಮಾಡಿದರೂ ಸಹಸ್ರಾರು ಭಕ್ತರಿಂದ ಪೂಜಿಸಲ್ಪಾಡುವ ವ್ಯಕ್ತಿಯಾಗಿದ್ದು, ನಿತ್ಯಾನಂದರಿಗೆ ಜನರನ್ನು ಹೇಗೆ ಆಕರ್ಷಿಸಬೇಕೆಂದು ತಿಳಿದಿದೆ. ವಿವಾದಿತ ಸ್ವಾಮೀಜಿ ನಿತ್ಯಾನಂದನಿಗೆ ಭಕ್ತರು ಮಾತ್ರವಲ್ಲದೆ ಹಲವು ಪ್ರೇಮಿಗಳು ಕೂಡ ಇದ್ದಾರೆ. ಇಷ್ಟು ಜನ ಅವರನ್ನು ಹಿಂಬಾಲಿಸುತ್ತಿದ್ದಾರೆ ಎಂದರೆ ಅವರಲ್ಲಿ ಏನೋ ಇದೆ ಎಂದರ್ಥ’ ಎಂದು ನಟಿ ಪ್ರಿಯಾ ಆನಂದ್ ತಮಾಷೆಯಾಗಿ ಹೇಳಿದ್ದಾರೆ.