Actress Parineeti Chopra and Raghav Chadha : ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಮತ್ತು ಎಎಪಿ ಸಂಸದ ರಾಘವ್ ಚಡ್ಡಾ ದಂಪತಿ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದು, ಸಂಭ್ರಮದ ಸುದ್ದಿಯನ್ನು ಹಂಚಿಕೊಂಡಿದ್ದಾರೆ.
ಹೌದು, ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ನಟಿ ಪರಿಣಿತಿ ಚೋಪ್ರಾ-ಎಎಪಿ ಸಂಸದ ರಾಘವ್ ಚಡ್ಡಾ ದಂಪತಿ, ನಮ್ಮ ಪುಟ್ಟ ಜಗತ್ತು ಬರುವ ಹಾದಿಯಲ್ಲಿದೆ ಎಂದು ಬರೆದುಕೊಂಡಿದ್ದಾರೆ. ಕಳೆದ ವರ್ಷ ರಾಜಸ್ಥಾನದಲ್ಲಿ ವಿವಾಹವಾಗಿದ್ದ ಈ ಜೋಡಿ ಇತ್ತೀಚೆಗೆ ಟಿವಿ ಕಾರ್ಯಕ್ರಮವೊಂದರಲ್ಲಿ ಮಗು ಆಗಮನದ ಬಗ್ಗೆ ಸುಳಿವು ನೀಡಿತ್ತು.

ಇನ್ನು, ನಟಿ ಪರಿಣಿತಿ ಚೋಪ್ರಾ ಮತ್ತು ರಾಘವ್ ಛಡ್ಡಾ ಅವರು 2023ರಲ್ಲಿ ಉದಯಪುರದ ಹೋಟೆಲ್ ಲೀಲಾ ಪ್ಯಾಲೇಸ್‌ನಲ್ಲಿ ವಿವಾಹವಾಗಿದ್ದರು. ಸುಮಾರು ಒಂದೂವರೆ ವರ್ಷಗಳ ದಾಂಪತ್ಯದ ನಂತರ ಪರಿಣಿತಿ ತಾಯಿಯಾಗಲಿದ್ದಾರೆ.



