ಬಾಲಿವುಡ್ ನಟಿ ನೋರಾ ಫತೇಹಿ, ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಆಕ್ಟಿವ್ ಇರುವ ನಟಿಯರಲ್ಲಿ ಒಬ್ಬರು. ಆಗಾಗ ತನ್ನ ಮಾದಕ ಫೋಟೋಗಳನ್ನು ಹಂಚಿಕೊಂಡು ಪಡ್ಡೆ ಹೈಕ್ಳ ಮನದಲ್ಲಿ ಜಲ್ ಎಬ್ಬಿಸುವ ಈ ಕೆನಡಿಯನ್ ಸುಂದರಿ, ಇತ್ತೀಚಿಗೆ ವಂಚನೆ ಪ್ರಕರಣವೊಂದರಲ್ಲಿ ಸಿಲುಕಿಕೊಂಡು ಭಾರಿ ಸುದ್ದಿಯಾಗಿದ್ದರು.
ಸದ್ಯ, ಆ ಪ್ರಕರಣದಿಂದ ಕೊಂಚ ರಿಲೀಫ್ ಪಡೆದಿರುವ ನಟಿ ನೋರಾ ಫತೇಹಿ, ದುಬೈನಲ್ಲಿ ಸುತ್ತಾಡುತ್ತ ಎಂಜಾಯ್ ಮಾಡುತ್ತಿದ್ದು, ಅಲ್ಲಿಂದಲೇ ಕೆಲವೊಂದು ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ಇತ್ತೀಚೆಗೆ ಕಪ್ಪು ಬಣ್ಣದ ಸ್ವಿಮ್ಮಿಂಗ್ ಡ್ರೆಸ್ ನಲ್ಲಿ ತೆಗೆದ ಫೋಟೋ ಒಂದನ್ನು ಪೋಸ್ಟ್ ಮಾಡಿರುವ ನಟಿ ನೋರಾ ಫತೇಹಿ, “ತನ್ನೊಂದಿಗೆ ಸುತ್ತಾಡೋಕೆ ಯಾರು ಬರುತ್ತೀರ?” ಎಂದು ಫೋಟೋಗೆ ಕ್ಯಾಪ್ಷನ್ ಕೊಟ್ಟಿದ್ದಾರೆ. ಈಗ ಈ ಪೋಸ್ಟ್ ಭಾರಿ ವೈರಲ್ ಆಗಿದ್ದು, ನೆಟ್ಟಿಗರು ಕಾಮೆಂಟ್ ಮಾಡಿ ನಟಿಯ ಕಾಲೆಳೆದಿದ್ದಾರೆ.
View this post on Instagram