ನಟಿ ರಶ್ಮಿಕಾ ಮಂದಣ್ಣ ನನ್ನ ಪ್ರಿಯತಮೆ’ ಎಂದು ತೆಲುಗು ನಟ ವಿಜಯ್ ದೇವರಕೊಂಡ ಹೇಳಿದ್ದಾರೆ. ಕರಣ್ ಜೋಹರ್ ನಡೆಸಿಕೊಡುತ್ತಿರುವ ‘ಕಾಫಿ ವಿತ್ ಕರಣ್ 7ನೇ ಆವೃತ್ತಿಯಲ್ಲಿ ನಟ ರಶ್ಮಿಕಾ ಜೊತೆಗಿನ ಸಂಬಂಧದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ನಟ ವಿಜಯ್ ದೇವರಕೊಂಡ, ‘ನಾವಿಬ್ಬರೂ ಎರಡು ಚಿತ್ರಗಳನ್ನು ಒಟ್ಟಿಗೆ ಮಾಡಿದ್ದೇವೆ. ಅವಳು ಡಾರ್ಲಿಂಗ್ ಇದ್ದ ಹಾಗೆ’ ಎಂದಿದ್ದಾರೆ. ಅಲ್ಲದೇ, ‘ನಾನು ಅವಳನ್ನು ತುಂಬಾ ಇಷ್ಟಪಡುತ್ತೇನೆ. ಅವಳು ನನಗೆ ನಿಜವಾಗಿಯೂ ಒಳ್ಳೆಯ ಸ್ನೇಹಿತೆ’ ಎಂದು ವಿಜಯ್ ಎಂದು ಹೇಳಿಕೊಂಡಿದ್ದಾರೆ.
ಈ ಹಿಂದೆ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಕಾಂಬಿನೇಷನ್ ನಲ್ಲಿ ಗೀತಾ ಗೋವಿಂದಂ, ಡಿಯರ್ ಕಾಮ್ರೇಡ್ ಸಿನಿಮಾಗಳು ಮೂಡಿ ಬಂದಿದ್ದವು
ಕಾರು, ಬೋಟ್‌ನಲ್ಲಿ ಲೈಂಗಿಕ ಕ್ರಿಯೆ ಮಾಡಿದ್ದೆ:
ಇನ್ನು, ಕರಣ್ ಜೋಹರ್ ನಡೆಸಿಕೊಡುತ್ತಿರುವ ‘ಕಾಫಿ ವಿತ್ ಕರಣ್’ ಕಾರ್ಯಕ್ರಮದಲ್ಲಿ ಮೂವರ ಜೊತೆ ಸೆಕ್ಸ್ ಮಾಡಲು ಅಭ್ಯಂತರವಿಲ್ಲ ಎಂದು ಹೇಳುವ ಮೂಲಕ ವಿಜಯ್ ದೇವರಕೊಂಡ ಮತ್ತೊಂದು ಸೆನ್ಸೇಷನಲ್ ಸೀಕ್ರೆಟ್ ಬಿಚ್ಚಿಟ್ಟಿದ್ದಾರೆ.
ಕರಣ್ ಜೋಹರ್, ‘ನೀವು ಎಂದಾದರೂ ಸಾರ್ವಜನಿಕ ಸ್ಥಳದಲ್ಲಿ ಲೈಂಗಿಕ ಕ್ರಿಯೆ ನಡೆಸಿದ್ದೀರಾ?’ ಎಂದು ಕೇಳಿದಾಗ, ‘ಬೋಟ್‌ನಲ್ಲಿ’ ಎಂದು ವಿಜಯ್ ಉತ್ತರಿಸಿದರು. ‘ಬೇರೆ ಸಾರ್ವಜನಿಕ ಸ್ಥಳಗಳಲ್ಲಿ?’ ಎಂದಾಗ, ‘ಹತಾಶೆಯ ಸಂದರ್ಭಗಳಲ್ಲಿ ಕಾರಿನಲ್ಲಿ’ ಎಂದು ಹೇಳಿದ್ದಾರೆ. ನಟ ವಿಜಯ್ ದೇವರಕೊಂಡ ಈ ಮಾತು ವೈರಲ್ ಆಗುತ್ತಿದೆ.