ಚೆನ್ನೈ : ತಮಿಳು ನಟ ಸೂರ್ಯ ಯಾವಾಗಲೂ ವಿಶಿಷ್ಟ ಕಥೆಗಳೊಂದಿಗೆ ಸಿನಿಮಾಗಳಲ್ಲಿ ಮೂಲಕ ಅಭಿಮಾನಿಗಳಿಗೆ ಸರ್ಪ್ರೈಸ್ ಕೊಡುತ್ತಿರುತ್ತಾರೆ. ಈ ಕಾರಣಕ್ಕಾಗಿಯೇ ನಟ ಸೂರ್ಯ ಅವರು ತಮಿಳು ಮತ್ತು ತೆಲುಗಿನಲ್ಲಿ ಉತ್ತಮ ಫಾಲೋಯಿಂಗ್ ಹೊಂದಿದ್ದಾರೆ. ನಟ ಸೂರ್ಯ ಅವರು ತಮ್ಮ ಮುಂದಿನ ಸಿನಿಮಾ ತಮಿಳು ಸಾಹಸ ಕ್ರೀಡೆ “ಜಲ್ಲಿಕಟ್ಟು” ಆಧಾರಿತ ‘ವಾಡಿವಾಸಲ್’ ಸಿನಿಮಾದಲ್ಲಿ ಸೂರ್ಯ ತಂದೆ ಮತ್ತು ಮಗನಾಗಿ ದ್ವಿಪಾತ್ರದಲ್ಲಿ ನಟಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಈ ಸಿನಿಮಾದಲ್ಲಿ ಗ್ರಾಮೀಣ ಜಲ್ಲಿಕಟ್ಟು ಕ್ರೀಡಾಪಟು ಪಾತ್ರದಲ್ಲಿ ಸೂರ್ಯ ಕಾಣಿಸಿಕೊಳ್ಳಲಿದ್ದಾರೆ. ಮುಂಬರುವ ಶೂಟಿಂಗ್‌ಗೆ ತಕ್ಕಂತೆ ಅವರು ತಮ್ಮ ಗೆಟಪ್ ಅನ್ನು ಬದಲಾಯಿಸಿಕೊಂಡರು. ಶೀಘ್ರದಲ್ಲೇ ಶೂಟಿಂಗ್ ಶುರುವಾಗಲಿದ್ದು, ಪಾತ್ರಕ್ಕೆ ತಕ್ಕಂತೆ ಗಡ್ಡ, ಉದ್ದನೆಯ ಮೀಸೆ ಮತ್ತು ದಪ್ಪ ಕೂದಲು ಬಿಟ್ಟು ಗ್ರಾಮೀಣ ಜಲ್ಲಿಕಟ್ಟು ಕ್ರೀಡಾಪಟುವಾಗಿ ಕಾಣಿಸಿಕೊಳ್ಳಲಿದ್ದಾರೆ.
ವಾಡಿವಾಸಲ್ ಸಿನಿಮಾವನ್ನು ನಿರ್ದೇಶಕ ವೆಟ್ರಿಮಾರನ್ ನಿರ್ದೇಶಿಸಲಿದ್ದು, ವಿ ಕ್ರಿಯೇಷನ್ಸ್ ಸಂಸ್ಥೆ ಬ್ಯಾನರ್ ನಲ್ಲಿ ಸಿನಿಮಾ ನಿರ್ಮಾಣವಾಗಲಿದೆ. ಈ ಸಿನಿಮಾಕ್ಕೆ ಜೀವ ಪ್ರಕಾಶ್ ಅವರು ಸಂಗೀತ ಸಂಯೋಜನೆ ನೀಡಲಿದ್ದಾರೆ.
ಇದನ್ನು ಓದಿ: ನನ್ನ ಜೀವನ ಯುದ್ಧಭೂಮಿಯಲ್ಲಿ ಪ್ರಾರಂಭವಾಯಿತು; ಶ್ರೀಲಂಕಾದ ತಮಿಳುಗನಾಗಿ ಹುಟ್ಟಿದ್ದು ನನ್ನ ತಪ್ಪೇ…? ಮುರಳೀಧರನ್ ರಿಯಾಕ್ಷನ್