ಟಾಲಿವುಡ್ ನಟ ನರೇಶ್ ಮತ್ತು ನಟಿ ಪವಿತ್ರಾ ಲೋಕೇಶ್ ಲವ್ವಿ ಡವ್ವಿ ವಿಚಾರ ಸಾಕಷ್ಟು ರಂಪಾಟದ ನಂತರ ಇದೀಗ ಮತ್ತೆ ಹೊಸ ಟ್ವಿಸ್ಟೊಂದು ಸಿಕ್ಕಿದ್ದು, ನಟ ನರೇಶ್ ಮನೆಗೆ ರಮ್ಯಾ ರಘುಪತಿ ಮತ್ತೆ ಎಂಟ್ರಿ ಕೊಟ್ಟಿದ್ದಾರೆ.
ಹೌದು, ಟಾಲಿವುಡ್ ನಟ ನರೇಶ್ ಮತ್ತು ಬೆಂಗಳೂರಿನ ರಮ್ಯಾ ರಘುಪತಿ ಗಲಾಟೆ ಸ್ವಲ್ಪ ದಿನದ ಮಟ್ಟಿಗೆ ತಣ್ಣಗಾಗಿತ್ತು. ಇಬ್ಬರೂ ತಮ್ಮ ಪಾಡಿಗೆ ತಾವು ಇದ್ದಾರೆ ಎಂದುಕೊಳ್ಳುವಷ್ಟರಲ್ಲಿ ದಿಢೀರ್ ಅಂತ ರಮ್ಯಾ, ನಟ ನರೇಶ್ ಮನೆಯಲ್ಲಿ ಕಾಣಿಸಿಕೊಂಡಿದ್ದು, ಆಗಿದ್ದೆಲ್ಲವನ್ನೂ ಸರಿ ಮಾಡಿ, ಗಂಡನ ಜೊತೆಯೇ ಇರುವುದಾಗಿ ಅವರು ನಿರ್ಧಾರ ಮಾಡಿದ್ದಾರಂತೆ.
ಆದರೆ ಇತ್ತ ನಟ ನರೇಶ್ ನಟಿ ಪವಿತ್ರಾ ಲೋಕೇಶ್ ಜತೆಗೆ ತೋಟದ ಮನೆಯಲ್ಲಿ ಇದ್ದಾರೆ ಎಂದು ಹೇಳಲಾಗುತ್ತಿದ್ದು, ಹೀಗಾಗಿ ರಮ್ಯಾ ಮನೆಗೆ ಬಂದ ಹಿನ್ನೆಲೆ ಇಬ್ಬರೂ ಗೊಂದಲಕ್ಕೀಡಾಗಿದ್ದಾರೆ ಎಂದು ಹೇಳಲಾಗಿದೆ.