ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (kiccha Sudeep) ರಾಜಕೀಯಕ್ಕೆ ಬರುತ್ತಾರೆ ಎಂಬ ಸುದ್ದಿ ಕಳೆದ ಮೂರ್ನಾಲ್ಕು ತಿಂಗಳುಗಳಿಂದ ಹರಿದಾಡುತ್ತಿದ್ದು, ಸುದೀಪ್ ಅವರು BJP ಸೇರುವುದು ಬಹುತೇಕ ಖಚಿತ ಎನ್ನಲಾಗಿದೆ. ಸುದೀಪ್ ಅವರ ಆಪ್ತ ಮೂಲಗಳ ಮಾಹಿತಿ ಪ್ರಕಾರ ಇಂದೇ BJP ಬಾವುಟ ಹಿಡಿಯಲಿದ್ದು, ಬಿಜೆಪಿ ಪಕ್ಷವನ್ನು ಸೇರಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಇದನ್ನು ಓದಿ: SSCಯಿಂದ 7,500 ಕೇಂದ್ರ ಸರ್ಕಾರಿ ಹುದ್ದೆಗಳಿಗೆ ಅರ್ಜಿ ಅಹ್ವಾನ, Degree ವಿದ್ಯಾರ್ಹತೆ, ಈಗಲೇ ಅರ್ಜಿ ಸಲ್ಲಿಸಿ
ಹೌದು, CM ಬೊಮ್ಮಾಯಿ ಹಾಗೂ ಕೆಲ ಸಚಿವರ ಸಲಹೆಯ ಮೇರೆಗೆ ಕಿಚ್ಚ ಸುದೀಪ್ (kiccha Sudeep) ರಾಜಕೀಯ ಅಖಾಡಕ್ಕೆ ಧುಮುಕಲಿದ್ದಾರೆ ಎಂದು ವರದಿಯಾಗಿದೆ. ಒಂದು ವರ್ಗದ ಮೂಲಗಳ ಪ್ರಕಾರ, ಕಿಚ್ಚನಿಗೆ ತನಿಖಾ ಸಂಸ್ಥೆಗಳಾದ IT, ED ಮೂಲಕ ಬೆದರಿಕೆ ಹಾಕಿಸಲಾಗುತ್ತಿದ್ದು, ಈ ಮೂಲಕ ಪಕ್ಷ ಸೇರ್ಪಡೆಗೆ ಒತ್ತಡ ಹೇರಲಾಗುತ್ತಿದೆ ಎನ್ನಲಾಗಿದೆ. ಆದರೆ, ಈ ಬಗ್ಗೆ ಸ್ಪಷ್ಟನೆ ದೊರೆತಿಲ್ಲ.
ಇದನ್ನು ಓದಿ: LPG ಗ್ರಾಹಕರಿಗೆ ಭಾರೀ ಸಬ್ಸಿಡಿ..ಕೇವಲ 500ರೂಗೆ LPG ಸಿಲಿಂಡರ್, 200 ರೂ ಸಬ್ಸಿಡಿ!
ಮೂಲಗಳ ಪ್ರಕಾರ ಇಂದು ಮಧ್ಯಾಹ್ನ 1.30ಕ್ಕೆ ಖಾಸಗಿ ಹೋಟೆಲ್ ನಲ್ಲಿ ಬಿಜೆಪಿ ಪಕ್ಷವನ್ನು ಸೇರಲಿದ್ದಾರೆ ಎನ್ನಲಾಗಿದೆ. ರಾಜ್ಯದ ಪ್ರಮುಖ ಬಿಜೆಪಿ ಮುಖಂಡರ ಸಮುಖದಲ್ಲಿ ಕಿಚ್ಚ ಸುದೀಪ್ ಬಿಜೆಪಿ ಬಾವುಟವನ್ನು ಹಿಡಿಯಲಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮ್ಮುಖದಲ್ಲಿ ಕಿಚ್ಚ ಬಿಜೆಪಿ ಸೇರಲಿದ್ದಾರೆ ಎಂದು ಹೇಳಲಾಗಿದೆ.
ಇದನ್ನು ಓದಿ: ಮಹಿಳೆಯರಿಗೆ ಸಂತಸದ ಸುದ್ದಿ: ಅಂಚೆ ಕಚೇರಿಗಳಲ್ಲಿ ಹೊಸ ಯೋಜನೆ, ಅರ್ಜಿ ಸಲ್ಲಿಸುವುದು ಹೇಗೆ?
ನನಗೆ ಆ ಎರಡು ಪಕ್ಷಕ್ಕಿಂತ ಮೂರನೇ ಪಕ್ಷ ಮುಖ್ಯ:
ಈ ಹಿಂದೆ, ರಾಜಕೀಯ ಪ್ರವೇಶದ ಬಗ್ಗೆ ನಟ ಕಿಚ್ಚ ಸುದೀಪ್ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ನನಗೆ ಎರಡೂ ಕಡೆ (ಕಾಂಗ್ರೆಸ್-ಬಿಜೆಪಿ) ಆಪ್ತರಿದ್ದು, ನನಗೆ ಆ ಎರಡು ಪಕ್ಷಕ್ಕಿಂತ ಮೂರನೇ ಪಕ್ಷ (ಜನರ ಪಕ್ಷ) ಮುಖ್ಯ ಎಂದು ಹೇಳುವ ಮೂಲಕ ಚುನಾವಣೆಗೆ ಸ್ಪರ್ಧಿಸುತ್ತಾರೆ ಎಂಬ ಊಹಾಪೋಹಗಳಿಗೆ ಇತಿಶ್ರೀ ಹಾಡಿದ್ದರು.
ಈಗ ಮತ್ತೊಮ್ಮೆ ರಾಜಕೀಯ ಪ್ರವೇಶದ ಬಗ್ಗೆ ಚರ್ಚೆಯಾಗುತ್ತಿದ್ದು, ನಟ ಕಿಚ್ಚ ಸುದೀಪ್ ಚುನಾವಣಾ ಅಖಾಡಕ್ಕೆ ಇಳಿಯುತ್ತಾರೆಯೇ? ಇಲ್ಲವೇ ಅನ್ನೋದು ಕೂಡ ತೀವ್ರ ಕುತೂಹಲ ಮೂಡಿಸಿದ್ದು, ಕಾದುನೋಡಬೇಕಿದೆ.