ಬೆಂಗಳೂರು: ನಾಳೆ ಆಕ್ಟೊಬರ್ 06 ನಟ ಆಕ್ಷ್ಯನ್ ಪ್ರಿನ್ಸ್ ದ್ರುವ ಸರ್ಜಾ ಅವರ ಹುಟ್ಟುಹಬ್ಬ ಹಿನ್ನಲೆ, ಅಬಿಮಾನಿಗಳು ಎಲ್ಲಿದ್ದರೋ ಅಲ್ಲಿಂದಲೇ ಶುಭ ಕೋರಲು ದ್ರುವ ಸರ್ಜಾ ಅವರು ಮನವಿ ಮಾಡಿದ್ದಾರೆ. ಇತ್ತೀಚಿಗೆ ದ್ರುವ ಸರ್ಜಾ ಅವರ ಕುಟುಂಬದಲ್ಲಿ ನಟ ಚಿರಂಜೀವಿ ಸರ್ಜಾ ಅವರ ಅಕಾಲಿಕ ಸಾವು, ಇಡೀ ಕುಟುಂಬವು ಆಘಾತಕ್ಕೊಳಗಾಗುವಂತೆ ಮಾಡಿತ್ತು.ಇಡೀ ದೇಶದಲ್ಲಿ ಎಲ್ಲೆಡೆ ಕರೋನ ಹರಡುತ್ತಿದ್ದು ಎಲ್ಲೂ ಸಂಭ್ರಮಾಚರಣೆ ಇಲ್ಲ.
ಈ ಕುರಿತಂತೆ ನಟ ದ್ರುವ ಸರ್ಜಾ ಅವರು ಟ್ವೀಟ್ ಮಾಡಿದ್ದೂ, ಅಭಿಮಾನಿಗಳೇ ನಮ್ಮ ಅನ್ನದಾತರು. ನೀವೇ ನಮ್ಮ ಶಕ್ತಿ. ಪ್ರತಿವರ್ಷ ಹುಟ್ಟುಹಬ್ಬಕ್ಕೆ ನೀವು ನಮ್ಮ ಮನೆಗೆ ಬಂದು ತೋರಿಸೋ ಪ್ರೀತಿ, ವಿಶ್ವಾಸ, ಅಭಿಮಾನ ವರ್ಣನಾತೀತ. ಈ ವರ್ಷದ ಎಲ್ಲಾ ಬೆಳವಣಿಗೆಗಳು ನಿಮಗೆ ಗೊತ್ತಿರೋದೇ. ಎಲ್ಲೂ ಸಂಭ್ರಮವಿಲ್ಲ. ಅಭಿಮಾನಿಗಳನ್ನು ಮನೆಯಬಳಿ ಬರಬೇಡಿ ಎನ್ನಲು ಮನಸ್ಸಿಲ್ಲ. ನೀವು ಇರುವ ಕಡೆಯಿಂದಲೇ ಹಾರೈಸಿ. ಅದೇ ನನಗೆ ಶ್ರೀರಕ್ಷೆ.ಜೈಆಂಜನೇಯ ಎಂದು ಅಭಿಮಾನಿಗಳಲ್ಲಿ ನಟ ದ್ರುವ ಸರ್ಜಾ ಮನವಿ ಮಾಡಿದ್ದಾರೆ.
ಅಭಿಮಾನಿಗಳೇ ನಮ್ ಅನ್ನದಾತರು.ನೀವೇ ನಮ್ಮ ಶಕ್ತಿ.ಪ್ರತಿವರ್ಷ ಹುಟ್ಟುಹಬ್ಬಕ್ಕೆ ನೀವು ನಮ್ಮ ಮನೆಗೆ ಬಂದು ತೋರಿಸೋ ಪ್ರೀತಿ,ಅಭಿಮಾನ ವರ್ಣನಾತೀತ.ಈವರ್ಷದ ಎಲ್ಲಾ ಬೆಳವಣಿಗೆಗಳು ನಿಮಗೆ ಗೊತ್ತಿರೋದೇ.ಎಲ್ಲೂ ಸಂಭ್ರಮವಿಲ್ಲ.ಅಭಿಮಾನಿಗಳನ್ನು ಮನೆಯಬಳಿ ಬರಬೇಡಿ ಎನ್ನಲು ಮನಸ್ಸಿಲ್ಲ.ನೀವು ಇರುವ ಕಡೆಯಿಂದಲೇ ಹಾರೈಸಿ.ಅದೇ ನನಗೆ ಶ್ರೀರಕ್ಷೆ.ಜೈಆಂಜನೇಯ🙏
— Dhruva Sarja (@DhruvaSarja) October 5, 2020