ಕೇರಳ: ಕೊಲೆ ಪ್ರಕರಣದಲ್ಲಿ ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾಗಿದ್ದ ನಟ ದರ್ಶನ, ತಮ್ಮ ಚಿತ್ರದ ಚಿತ್ರೀಕರಣದ ನಡುವೆ ದೇವಸ್ಥಾನ ಭೇಟಿ ಪ್ರಾರಂಭಿಸಿದ್ದಾರೆ. ಅವರು ತಮ್ಮ ಕುಟುಂಬದೊಂದಿಗೆ ಕೇರಳದ ಪ್ರಸಿದ್ಧ ದೇವಾಲಯವೊಂದಕ್ಕೆ ಭೇಟಿ ನೀಡಿ ಶತ್ರು ಸಂಹಾರ ಪೂಜೆ ನಡೆಸಿದರು.
ಕೇರಳದ ಕಣ್ಣೂರಿನ ಮಡೈಕಾವುವಿನಲ್ಲಿರುವ ಶ್ರೀ ಭಗವತಿ ದೇವಾಲಯಕ್ಕೆ ನಟ ದರ್ಶನ ಭೇಟಿ ನೀಡಿದರು. ದರ್ಶನ್ ತಮ್ಮ ಪತ್ನಿ ವಿಜಯಲಕ್ಷ್ಮಿ ಮತ್ತು ಮಗ ವಿನೇಶ್ ಅವರೊಂದಿಗೆ ಭಗವತಿ ದೇವಸ್ಥಾನಕ್ಕೆ ಹೋಗಿ ಶತ್ರು ಸಂಹಾರ ಯಾಗ ಮಾಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.
ನಟ ಧನ್ವೀರ್ ಕೂಡ ನಟ ದರ್ಶನ್ ಮತ್ತು ಅವರ ಕುಟುಂಬದೊಂದಿಗೆ ಇದ್ದರು. ಪತ್ನಿ ವಿಜಯಲಕ್ಷ್ಮಿ ಅನೇಕ ದೇವಾಲಯಗಳಿಗೆ ಭೇಟಿ ನೀಡಿ, ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿದ್ದ ತನ್ನ ಪತಿ ದರ್ಶನ್‌ರ ಬಿಡುಗಡೆಗಾಗಿ ಪ್ರಾರ್ಥಿಸಿದ್ದರು. ಈ ಹಿನ್ನೆಲೆಯಲ್ಲಿ, ಬಿಡುಗಡೆಯಾದ ನಂತರ ದರ್ಶನ್ ತಮ್ಮ ಕುಟುಂಬದೊಂದಿಗೆ ದೇವಾಲಯಗಳಿಗೆ ಹೋಗಿ ವಿಶೇಷ ಪೂಜೆ ಸಲ್ಲಿಸಿದರು.