ಸೆಲೆಬ್ರಿಟಿಗಳು ನೀಡುವ ಹೇಳಿಕೆ ಕೆಲಮೊಮ್ಮೆ ಸೆನ್ಸೇಷನ್ ಕ್ರಿಯೇಟ್ ಮಾಡುತ್ತವೆ. ಹೌದು, ಸಿನಿಮಾ ಪ್ರಚಾರದ ವೇಳೆ ಬಹುಭಾಷಾ ನಟಿ ರೆಜಿನಾ ಕ್ಯಾಸ್ಸಂದ್ರ ಅವರು ಹುಡುಗರ ಬಗ್ಗೆ ಹೇಳಿರುವ ಜೋಕ್ ಒಂದು ಭಾರೀ ವೈರಲ್ ಆಗಿದೆ.

‘ಶಾಕಿನಿ ಡಾಕಿನಿ’ ಪ್ರಚಾರ ವೇಳೆ ಸಂದರ್ಶನದಲ್ಲಿ ಮಾತನಾಡಿರುವ ನಟಿ ರೆಜಿನಾ ಕ್ಯಾಸಂಡ್ರಾ, “ನನ್ನ ಬಳಿ ಒಂದು ಜೋಕ್ ಇದೆ. ಅದು ನಿಮಗೆ ಅರ್ಥವಾಗುತ್ತೋ, ಇಲ್ಲವೋ ಗೊತ್ತಿಲ್ಲ. ಅದೇನೆಂದರೆ ‘ಹುಡುಗರ ಲೈಂಗಿಕ ಸಾಮರ್ಥ್ಯ ಮ್ಯಾಗಿ ಥರ, ಏಕೆಂದರೆ ಇವೆರಡು ಕೂಡ ಎರಡೇ ನಿಮಿಷದಲ್ಲಿ ಮುಗಿಯುತ್ತದೆ” ಎಂದಿರುವ ವಿಡಿಯೋ ವೈರಲ್ ಆಗುತ್ತಿದೆ. ರೆಜಿನಾ ಜೋಕ್ ಗೆ ಪಕ್ಕದಲ್ಲಿದ್ದ ನಿವೇತಾ ಥಾಮಸ್ ಕೂಡ ನಸುನಕ್ಕಿದ್ದಾರೆ. ಸದ್ಯ ಈ ಹೇಳಿಕೆಗೆ ಕೆಲವರು ನಕ್ಕರೆ, ಇನ್ನೂ ಕೆಲವರು ಟೀಕೆ ವ್ಯಕ್ತಪಡಿಸಿದ್ದಾರೆ.

ಅದರಂತೆ ಈಗ, ಈ ಹೇಳಿಕೆ ಕುರಿತು ನಟ ಅಡಿವಿ ಶೇಷ್ ಪ್ರತಿಕ್ರಿಯಿಸಿದ್ದು, ‘ರೆಜಿನಾ.. ನೀವು ಮ್ಯಾಗಿ & ಪುರುಷರ ಬಗ್ಗೆ ಹೇಳಿಕೆ ನೀಡಿದ್ದಿರಿ. ಇದು ಗಮನಕ್ಕೆ ಬಂದಿದೆ. ಏನದು ವಿಚಾರ? ನನಗೆ ಸ್ಟ್ಯಾಮಿನಾ ಜಾಸ್ತಿ ಇದ್ದು, ಬಹಳ ದಿನ ಸಿನಿಮಾ ಮಾಡುತ್ತೇನೆ. ಮ್ಯಾಗಿ ವಿಚಾರ ಹೇಳುವಾಗ ನಿಮ್ಮ ಉದ್ದೇಶ ಏನಾಗಿತ್ತೆಂದು ಕಾಲೆಳೆದಿದ್ದಾರೆ.




