18ನೇ ವಯಸ್ಸಿನಲ್ಲಿದ್ದಾಗ ಆ ಬಾಬಾನಿಂದ ಲೈಂಗಿಕ ಕಿರುಕುಳ; ಆಧ್ಯಾತ್ಮಿಕ ಗುರುವಿನ ಕರಾಳ ಸತ್ಯ ಬಿಚ್ಚಿಟ್ಟ ಖ್ಯಾತ ನಟಿ?

ಮುಂಬೈ: ನಿಜ ಜೀವನದಲ್ಲಿ ಕೆಲವು ಜನರಿಗೆ ಸಂಭವಿಸಿದ ಘಟನೆಗಳ ಬಗ್ಗೆ ನಿಮಗೆ ತಿಳಿದಿರೆ, ಈ ಜಗತ್ತಿನಲ್ಲಿ ಯಾರನ್ನೂ ನಂಬುವುದು, ಯಾರನ್ನೂ ನಂಬಬಾರದು ತಿಳಿಯುವುದಿಲ್ಲ. ಮುಖ್ಯವಾಗಿ ಹೇಳುವುದಾದರೆ, ಅವರು ಎಷ್ಟೇ ಕಾನೂನುಗಳನ್ನು ತಂದರು, ಮಹಿಳೆಯರಿಗೆ ರಕ್ಷಣೆ…

anupriya goenka vijayaprabha news

ಮುಂಬೈ: ನಿಜ ಜೀವನದಲ್ಲಿ ಕೆಲವು ಜನರಿಗೆ ಸಂಭವಿಸಿದ ಘಟನೆಗಳ ಬಗ್ಗೆ ನಿಮಗೆ ತಿಳಿದಿರೆ, ಈ ಜಗತ್ತಿನಲ್ಲಿ ಯಾರನ್ನೂ ನಂಬುವುದು, ಯಾರನ್ನೂ ನಂಬಬಾರದು ತಿಳಿಯುವುದಿಲ್ಲ. ಮುಖ್ಯವಾಗಿ ಹೇಳುವುದಾದರೆ, ಅವರು ಎಷ್ಟೇ ಕಾನೂನುಗಳನ್ನು ತಂದರು, ಮಹಿಳೆಯರಿಗೆ ರಕ್ಷಣೆ ವಿರಳವಾಗಿದೆ ಎನಿಸುತ್ತದೆ. ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯಗಳು ಈಗಲೂ ಎಲ್ಲೋ ಒಂದು ಕಡೆ ನಡೆಯುತ್ತಿದ್ದು, ದೇಶದ ಜನರಿಗೆ ತಲೆ ತಗ್ಗಿಸುವ ಕೆಲಸವಾಗಿದೆ.

ಇನ್ನು ಇತ್ತೀಚೆಗೆ ನಡೆದ ಮಾಧ್ಯಮಗೋಷ್ಠಿಯಲ್ಲಿ, ನಟಿ ಅನುಪ್ರಿಯಾ ಗೋಯೆಂಕಾ ಅವರು ಆಧ್ಯಾತ್ಮಿಕ ಗುರುವಿನ ಲೈಂಗಿಕ ದುಷ್ಕೃತ್ಯಗಳ ಬಗ್ಗೆ ಹೇಳಿದ್ದು, ಇದನ್ನು ತಿಳಿದ ಜನರು ಶಾಕ್ ಆಗುದ್ದಾರೆ.

ಇತ್ತೀಚಿಗೆ ಪ್ರಕಾಶ್ ಜಾ ನಿರ್ದೇಶನದ ‘ಆಶ್ರಮ 2’ ವೆಬ್ ಸರಣಿಯ ಮೂಲಕ ಪ್ರೇಕ್ಷಕರ ಮುಂದೆ ಬಂದ ನಟಿ ಅನುಪ್ರಿಯಾ ಗೋಯೆಂಕಾ ಸಂದರ್ಶನವೊಂದರಲ್ಲಿ ಮಾತನಾಡುತ್ತ, ತನ್ನ ಹದಿಹರೆಯದ ವಯಸ್ಸಿನಲ್ಲಿ ಆಧ್ಯಾತ್ಮಿಕ ಗುರು ನೀಡಿದ ಲೈಂಗಿಕ ಕಿರುಕುಳದ ವಿಷಯವನ್ನು ಬಹಿರಂಗಪಡಿಸುವ ಮೂಲಕ ಸಂಚಲನ ಸೃಷ್ಟಿಸಿದ್ದಾಳೆ. ತನ್ನ ಕುಟುಂಬವು ಗಾಢವಾಗಿ ನಂಬಿದ ಆದ್ಯಾತ್ಮಿಕ ಗುರುವೇ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲು ಮುಂದಾಗಿದ್ದ ಎಂದು ಹೇಳುತ್ತಾ ತನ್ನ ಕಹಿ ಅನುಭವಗಳನ್ನು ನಟಿ ವಿವರಿಸಿದ್ದಾಳೆ.

Vijayaprabha Mobile App free

ನನ್ನ ತಂದೆ ಸೇರಿದಂತೆ ನನ್ನ ಇಡೀ ಕುಟುಂಬಕ್ಕೆ ಆಧ್ಯಾತ್ಮಿಕ ಚಿಂತನೆ ಹೆಚ್ಚಿತ್ತು. ನಾನು ಹದಿಹರೆಯದವಳಾಗಿದ್ದಾಗ ನಮ್ಮ ಕುಟುಂಬವು ಬಾಬಾ (ಆದ್ಯಾತ್ಮಿಕ ಗುರು) ಅವರನ್ನು ಚೆನ್ನಾಗಿ ನಂಬಿತ್ತು. ಕುಟುಂಬದವರು ಅವನ ಮಾತುಗಳನ್ನು ವೇದವಾಕ್ಯವೆಂದು ಪಾಲಿಸುತ್ತಿದ್ದರು. ಬಾಬಾ ಅವರ ಕೆಲಸವು ಪ್ರಾಯೋಗಿಕ ಮತ್ತು ಸಮಂಜಸವೆಂದು ತೋರುತ್ತಿದ್ದಂತೆ ಕ್ರಮೇಣ ನಾನು ಅವನನ್ನು ನಂಬಲು ಪ್ರಾರಂಭಿಸಿದೆ. ಆದರೆ, ಬಾಬಾ ನನ್ನ ನಂಬಿಕೆಯನ್ನು, ಸಲಿಗೆಯಾಗಿ ತೆಗೆದುಕೊಂಡು ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲು ಪ್ಲ್ಯಾನ್ ಮಾಡಿದ್ದ.

ಅದು ಸಂಭವಿಸಿದಾಗ ನನಗೆ ಕೇವಲ 18 ವರ್ಷ. ನಾನು ತುಂಬಾ ಹೆದರಿದ್ದೆ. ನಾನು ಈ ವಿಷಯವನ್ನು ಬಹಳ ದಿನಗಳ ಕಾಲ ಯಾರಿಗೂ ಹೇಳದೆ, ಕೊನೆಗೆ ಧೈರ್ಯ ಮಾಡಿ ಆ ವಿಷಯವನ್ನು ಮನೆಯಲ್ಲಿ ಹೇಳಿದೆ. ಅಂದಿನಿಂದ ನಾವು ಆ ಕಳ್ಳಬಾಬನಿಂದ ದೂರವಿದ್ದೇವೆ. ಆ ಕೆಟ್ಟ ಘಟನೆಯ ಬಗ್ಗೆ ಯೋಚಿಸಿದಾಗಲೆಲ್ಲಾ ನನಗೆ ಸಿಟ್ಟು ಬರುತ್ತದೆ. ನನ್ನ ಜೀವನದಲ್ಲಿ ಕಳ್ಳ ಬಾಬಾ ಒಬ್ಬನೇ ಅಲ್ಲ, ಇಂತಹ ದುಷ್ಕರ್ಮಿಗಳು ಬಹಳ ಜನರು ಇದ್ದಾರೆ ಎಂದು ನಟಿ ಅನುಪ್ರಿಯಾ ಗೋಯೆಂಕಾ ಹೇಳಿಕೊಂಡಿದ್ದಾರೆ.

ಇದನ್ನು ಓದಿ: ದೇಶದಲ್ಲಿ ಮತ್ತೆ ‘ಟಿಕ್ ಟಾಕ್’ ಹವಾ? ಶೀಘ್ರದಲ್ಲೇ ರೀ ಎಂಟ್ರಿ ಕೊಡಲಿದೆ ಟಿಕ್ ಟಾಕ್!

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.