ನಿರ್ದೇಶಕ, ಬಿಗ್ಬಾಸ್ ಸ್ಪರ್ಧಿ ಸಾಜಿದ್ ಖಾನ್ ತಮ್ಮ ಸಿನಿಮಾಗಳಲ್ಲಿ ಅವಕಾಶ ನೀಡಲು ಅಪ್ರಾಪ್ತ ಹುಡುಗಿಯರಿಗೆ ಆಡಿಷನ್ಗಳಲ್ಲಿ ಬೆತ್ತಲಾಗುವಂತೆ ಹೇಳಿದ್ದರು ಎಂದು ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ಗಂಭೀರ ಆರೋಪ ಮಾಡಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, ‘ಮೀಟೂ ಅಭಿಯಾನ’ದ ವೇಳೆ ನಿರ್ದೇಶಕ ಮತ್ತು ಬಿಗ್ಬಾಸ್ ಸ್ಪರ್ಧಿ ಸಾಜಿದ್ ಖಾನ್ ವಿರುದ್ಧ ಹತ್ತು ಮಹಿಳೆಯರು ಲೈಂಗಿಕ ಕಿರುಕುಳ ಆರೋಪಗಳನ್ನು ಮಾಡಿದ್ದರು. ಸಾಜಿದ್ ಖಾನ್ ತಮ್ಮ ಹೌಸ್ಫುಲ್ 4 ಮತ್ತು ಹಮ್ಶಕಲ್ಸ್ ಸಿನಿಮಾಗಳಲ್ಲಿ ಅವಕಾಶ ನೀಡಲು ಆಡಿಷನ್ ಸಮಯದಲ್ಲಿ ಅಪ್ರಾಪ್ತ ಹುಡುಗಿಯರಿಗೆ ಬೆತ್ತಲೆಯಾಗುವಂತೆ ಹೇಳಿದ್ದರು ಎಂದೂ ಸ್ವಾತಿ ಸಂಚಲನ ಹೇಳಿಕೆ ನೀಡಿದ್ದಾರೆ.
ಸಾಜಿದ್ ಖಾನ್ ಅನ್ನು ಬಿಗ್ ಬಾಸ್ ಶೋನಿಂದ ತೆಗೆದು ಹಾಕುವಂತೆ ಪಟ್ಟು ಹಿಡಿದಿರುವ ಸ್ವಾತಿ ಮಲಿವಾಲ್, ಬಿಗ್ ಬಾಸ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಾಗೂ ಎಲ್ಲ ದೂರುಗಳ ತನಿಖೆ ನಡೆಸುವಂತೆ ನಾನು ಸಚಿವ ಅನುರಾಗ್ ಠಾಕೂರ್ ಅವರಿಗೆ ದೂರು ಸಲ್ಲಿಸಿದ್ದೇನೆ. ನನ್ನ ದೂರಿನ ಕುರಿತಾಗಿ ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ. ನಾನು ಈ ವಿಚಾರದ ಬಗ್ಗೆ ಧ್ವನಿ ಎತ್ತಿದ ಮೇಲೆ ಅತ್ಯಾಚಾರ ಬೆದರಿಕೆಗಳನ್ನು ಸ್ವೀಕರಿಸುತ್ತಿದ್ದೇನೆ ಎಂದಿದ್ದು, ಸಾಜಿದ್ ಅವರನ್ನು ಕೂಡಲೇ ಬಿಗ್ಬಾಸ್ನಿಂದ ಹೊರಗೆ ಕಳುಹಿಸಬೇಕು’ ಎಂದು ಸ್ವಾತಿ ಆಗ್ರಹಿಸಿದ್ದಾರೆ.