BBK 11: ಮತ್ತೆ ಬಿಗ್‌ಬಾಸ್‌ಗೆ ಲಾಯರ್‌ ಜಗದೀಶ್‌ ಎಂಟ್ರಿ ಅಸಾಧ್ಯ

ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 11ರಿಂದ ಹೊರ ಬಿದ್ದಿರುವ ಸ್ಪರ್ಧಿ ಲಾಯರ್‌ ಜಗದೀಶ್‌ ಅವರು ಮತ್ತೆ ದೊಡ್ಡ ಮನಗೆ ಹೋಗಬಹುದು ಎಂಬ ನಿರೀಕ್ಷೆ ಹಾಗೂ ಆಸೆ ಅವರ ಅಭಿಮಾನಿಗಳಲ್ಲಿ ಮನೆ ಮಾಡಿದೆ. ಆದರೆ…

ಲಾಯರ್‌ ಜಗದೀಶ್‌

ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 11ರಿಂದ ಹೊರ ಬಿದ್ದಿರುವ ಸ್ಪರ್ಧಿ ಲಾಯರ್‌ ಜಗದೀಶ್‌ ಅವರು ಮತ್ತೆ ದೊಡ್ಡ ಮನಗೆ ಹೋಗಬಹುದು ಎಂಬ ನಿರೀಕ್ಷೆ ಹಾಗೂ ಆಸೆ ಅವರ ಅಭಿಮಾನಿಗಳಲ್ಲಿ ಮನೆ ಮಾಡಿದೆ. ಆದರೆ ಅದು ಅಸಾಧ್ಯ ಎನ್ನುತ್ತಿವೆ ಬಿಗ್‌ ಬಾಸ್‌ ನ ನಿಯಮಗಳು.

ಬಿಗ್ ಬಾಸ್ ಮನೆಯಲ್ಲಿ ನಡೆದ ದೊಡ್ಡ ಗಲಾಟೆಯಿಂದ ವಾರದ ಮಧ್ಯೆ ಲಾಯರ್‌ ಜಗದೀಶ್‌ ಹಾಗೂ ರಂಜಿತ್‌ ಶೋ ನಿಂದ ಹೊರ ಬಿದ್ದಿದ್ದರು. ಆದರೆ, ಲಾಯರ್‌ ಜಗದೀಶ್‌ ಪರವಾಗಿ ಸಾಮಾಜಿ ಜಾಲತಾಣದಲ್ಲಿ ಟ್ರೆಂಡ್‌ ಸೃಷ್ಟಿಯಾಗಿತ್ತು. ಲಾಯರ್‌ ಜಗದೀಶ್‌ ಅವು ಮತ್ತೆ ದೊಡ್ಡ ಮನೆಗೆ ಎಂಟ್ರಿ ಕೊಡುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿದ್ದವು. ಆದರೆ ಶನಿವಾರ ನಡೆದ ಕಿಚ್ಚನ ಪಂಚಾಯಿತಿಯಲ್ಲಿ ಲಾಯರ್‌ ಜಗದೀಶ್‌ ವಿಡಿಯೋ ಸಂದೇಶ ಪ್ರಸಾರ ಮಾಡಿದ್ದು, ಅವರಿಗೆ ಅಧಿಕೃತ ಬೀಳ್ಕೊಡುಗೆ ನೀಡಲಾಗಿದೆ. ಇದರಿಂದ ಬಿಗ್‌ಬಾಸ್‌ ಮನೆಗೆ ಲಾಯರ್‌ ಜಗದೀಶ್‌ ಮತ್ತೆ ಬರುವುದು ಅಸಾಧ್ಯ.

ಲಾಯರ್‌ ಜಗದೀಶ್‌

Vijayaprabha Mobile App free

ವೈಲ್ಡ್‌ ಕಾರ್ಡ್‌ ಎಂಟ್ರಿ ಮೂಲಕ ಲಾಯರ್‌ ಜಗದೀಶ್‌ ಅವರನ್ನು ಮತ್ತೆ ಬಿಗ್‌ ಬಾಸ್‌ ಮನೆಗೆ ಕರೆಯಿಸಿಕೊಳ್ಳಬಹುದು ಎಂದು ಅವರ ಅಭಿಮಾನಿಗಳು ಆಶಯ ವ್ಯಕ್ತಪಡಿಸಿದ್ದಾರೆ. ಈ ನಡುವೆ ಶನಿವಾರ ಮಧ್ಯರಾತ್ರಿ ಫೇಸ್‌ಬುಕ್‌ ಲೈವ್‌ ನಲ್ಲಿ ಲಾಯರ್‌ ಜಗದೀಶ್‌ ಕಾಣಿಕೊಂಡಿದ್ದು, ಇಂದು ಬೆಂಗಳೂರಿನಲ್ಲಿ ಸಂಜೆ 4.30ಕ್ಕೆ ಪತ್ರಿಕಾಗೋ಼ಷ್ಠಿ ನಡೆಸುವುದಾಗಿ ತಿಳಿಸಿದ್ದಾರೆ. ಇದರಿಂದ ಅವರು ಮತ್ತೆ ದೊಡ್ಡ ಮನೆಗೆ ಹೋಗುವುದು ಅಸಾಧ್ಯ. ಕಾರಣ ಸಮಾಜದಲ್ಲಿ ಅವರ ಪರವಾಗಿ ಜನರಿಗೆ ಇರುವ ಅಭಿಪ್ರಾಯದ ಬಗ್ಗೆ ನೇರವಾಗಿ ಗೊತ್ತಾಗುತ್ತೆ. ಇದರಿಂದ ಮತ್ತೆ ದೊಡ್ಡಮನೆಗೆ ಎಂಟ್ರಿಕೊಟ್ಟರೆ ಉಳಿದ ಸ್ಪರ್ಧಿಗಳಿಗೆ ಕಾಂಪಿಟೇಷನ್‌ ಟಫ್‌ ಆಗುತ್ತೆ. ಆದ್ದರಿಂದ ಬಿಗ್‌ ಬಾಸ್‌ ನಿಯಗಳ ಪ್ರಕಾರ ಲಾಯರ್‌ ಜಗದೀಶ್‌ ಮತ್ತೆ ಬಿಗ್‌ ಬಾಸ್‌ ಮನೆಗೆ ಹೋಗುವುದು ಅಸಾಧ್ಯ ಎನ್ನುತ್ತಿವೆ ಮೂಲಗಳು.

 

 

ಬಿಗ್‌ ಬಾಸ್‌ ಹಾಗೂ ಕಿಚ್ಚ ಸುದೀಪ್‌ ಬಳಿ ಕ್ಷಮೆ ಕೇಳಿದ ಲಾಯರ್‌ ಜಗದೀಶ್‌

ಶನಿವಾರ ನಡೆದ ವಾರದ ಕಥೆ ಕಿಚ್ಚನ ಜೊತೆ ಎಪಿಸೋಡ್‌ ನಲ್ಲಿ ಲಾಯರ್‌ ಜಗದೀಶ್‌ ಬಿಗ್‌ಬಾಸ್‌ ಹಾಗೂ ಕಿಚ್ಚ ಸುದೀಪ್‌ ಅವರ ಬಳಿ ಕ್ಷಮೆ ಯಾಚಿಸಿದ್ದಾರೆ. ಸಾಧ್ಯವಾದರೆ ಮತ್ತೊಮ್ಮೆ ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ. ಕಿಚ್ಚನ ಪಂಚಾಯಿತಿ ವೇಳೆ ಜಗದೀಶ್ ಅವರ ವಿಡಿಯೋ ಪ್ರಸಾರ ಮಾಡಿದ್ದು, ಕೆಲವೊಂದು ಘಟನೆಗಳು ನನ್ನಿಂದ ಆಗಬಾರದಿತ್ತು. ನನ್ನಿಂದ ತಪ್ಪಾಗಿದೆ. ನನ್ನ ಹಂಸಾ, ಸಾರಿ ಹಂಸಾ. ನನ್ನದೊಂದು ರಿಕ್ವೆಸ್ಟ್ ಇದೆ ಸಾಧ್ಯವಾದ್ರೆ ನನ್ನ ವಾಪಸ್ ಕರೆಸಿಕೋ ಬಿಗ್‌ಬಾಸ್‌ ಎಂದು ಕೈ ಮುಗಿದು ಕೇಳಿಕೊಂಡಿದ್ದಾರೆ. ಈ ಮಾತಿಗೆ ಸುದೀಪ್‌ ಕೈ ಮುಗಿದು ನಮಸ್ಕರಿಸಿದ್ದಾರೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.