ಸಂಸದರ ಮಕ್ಕಳಿಗೆ ಟಿಕೆಟ್ ನೀಡದಿರುವುದು ಪಾಪವಾದ್ರೆ ನಾನು ಆ ಪಾಪ ಮಾಡುತ್ತೇನೆ: ಪ್ರಧಾನಿ ಮೋದಿ

ನವದೆಹಲಿ: ಸಂಸದರ ಮಕ್ಕಳಿಗೆ ಚುನಾಚಣೆಯಲ್ಲಿ ಟಿಕೆಟ್ ನೀಡದೇ ಇರುವುದು ಪಾಪ ಎನ್ನುವುದಾದರೆ, ನಾನು ಆ ಪಾಪವನ್ನು ಮಾಡಿದ್ದೇನೆ ಹಾಗೂ ಮಾಡುತ್ತೇನೆ. ಭಾರತೀಯ ಜನತಾ ಪಕ್ಷದಲ್ಲಿ ಕುಟುಂಬ ರಾಜಕಾರಣಕ್ಕೆ ಎಂದೂ ಅವಕಾಶ ಇಲ್ಲ ಎಂದು ಪ್ರಧಾನಿ…

narendra modi vijayaprabha

ನವದೆಹಲಿ: ಸಂಸದರ ಮಕ್ಕಳಿಗೆ ಚುನಾಚಣೆಯಲ್ಲಿ ಟಿಕೆಟ್ ನೀಡದೇ ಇರುವುದು ಪಾಪ ಎನ್ನುವುದಾದರೆ, ನಾನು ಆ ಪಾಪವನ್ನು ಮಾಡಿದ್ದೇನೆ ಹಾಗೂ ಮಾಡುತ್ತೇನೆ. ಭಾರತೀಯ ಜನತಾ ಪಕ್ಷದಲ್ಲಿ ಕುಟುಂಬ ರಾಜಕಾರಣಕ್ಕೆ ಎಂದೂ ಅವಕಾಶ ಇಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಸಂಸದೀಯ ಪಕ್ಷದ ಸಭೆಯಲ್ಲಿ ಹೇಳಿದ್ದಾರೆ.

ಸಂಸದರ ಮಕ್ಕಳಿಗೆ ಟಿಕೆಟ್ ಕಡಿತವಾದರೆ ಅದು ನನ್ನ ಹೊಣೆಯಾಗಿದ್ದು, ವಂಶ ರಾಜಕಾರಣ ಮಾಡುವುದಾದರೆ ಅಂತವರಿಗೆ ಬೇರೆ ಪಕ್ಷಗಳಿವೆ ಎಂದು ಸಭೆಯಲ್ಲಿ ಪ್ರಧಾನಿ ಮೋದಿ ಕಟ್ಟುನಿಟ್ಟಾಗಿ ಹೇಳಿದ್ದಾರೆ.

ಚುನಾವಣೆಯಲ್ಲಿ ಬಿಜೆಪಿ ಕೆಲವು ಸ್ಥಾನಗಳನ್ನ ಏಕೆ ಕಳೆದುಕೊಂಡಿತು ಎಂಬುದನ್ನು ನಿರ್ಣಯಿಸಲು ಪ್ರಧಾನಿ ಮೋದಿ ಎಲ್ಲ ಸಂಸದರನ್ನು ಸಭೆಯಲ್ಲಿ ಪ್ರಶ್ನಿಸಿದ್ದು, ನಿಮ್ಮ ಪ್ರದೇಶದಲ್ಲಿ ಕಳೆದುಹೋದ 100 ಬೂತ್‌ಗಳನ್ನು ನೀವು ಮೌಲ್ಯಮಾಪನ ಮಾಡಿ ಮತ್ತು ನಾವು ಏಕೆ ಸೋತಿದ್ದೇವೆ ಎಂಬ ವರದಿಯನ್ನ ಸಿದ್ಧಪಡಿಸಿ, ಆ ಸೋಲಿಗೆ ಕಾರಣಗಳನ್ನ ಕಂಡುಹಿಡಿಯಬಹುದು ಮತ್ತು ಸರಿಪಡಿಸಬಹುದು ಎಂದು ಪ್ರಧಾನಿ ಮೋದಿ ಅವರು ಸಂಸದರಿಗೆ ಹೇಳಿದ್ದಾರೆ.

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.