ರಷ್ಯಾ ಮತ್ತು ಉಕ್ರೇನ್ ಮಹಾಸಮರ: ರಷ್ಯಾಗೆ ಹೆದರಿ ದೇಶ ತೊರೆದ ಉಕ್ರೇನ್ ಅಧ್ಯಕ್ಷ!; ಲಕ್ಷ ಉಕ್ರೇನಿಯನ್ನರು ಪೋಲೆಂಡ್ ಗೆ ಪಲಾಯನ

ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ರಾಜಧಾನಿ ಕೀವ್ ನಗರವನ್ನು ತೊರೆದಿದ್ದು, ಪರಾರಿಯಾಗಿದ್ದಾರೆ ಎಂದು ರಷ್ಯಾ ಸರ್ಕಾರ ತಿಳಿಸಿದೆ. ಇನ್ನು ಇಡೀ ಕೀವ್ ನಗರವನ್ನು ವಶಕ್ಕೆ ಪಡೆದು ಸರ್ಕಾರವನ್ನು ಪತನಗೊಳಿಸಿದರೆ ಇಡೀ ಉಕ್ರೇನ್ ನಮ್ಮ…

volodymyr zelensky vijayaprabha news

ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ರಾಜಧಾನಿ ಕೀವ್ ನಗರವನ್ನು ತೊರೆದಿದ್ದು, ಪರಾರಿಯಾಗಿದ್ದಾರೆ ಎಂದು ರಷ್ಯಾ ಸರ್ಕಾರ ತಿಳಿಸಿದೆ.

ಇನ್ನು ಇಡೀ ಕೀವ್ ನಗರವನ್ನು ವಶಕ್ಕೆ ಪಡೆದು ಸರ್ಕಾರವನ್ನು ಪತನಗೊಳಿಸಿದರೆ ಇಡೀ ಉಕ್ರೇನ್ ನಮ್ಮ ವಶವಾಗಲಿದ್ದು, ಅದನ್ನೂ ಕೂಡ ಅಂತಿಮವಾಗಿ ನಾವೇ ಆಳಬಹುದು ಎಂಬುದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಯೋಜನೆಯಾಗಿದೆ. ಹಾಗಾಗಿ ಮುಂದಿನ 3-4 ದಿನ ಯುದ್ಧ ಮುಂದುವರಿಯಲಿದೆ ಎಂದು ಹೇಳಲಾಗುತ್ತಿದೆ.

ಲಕ್ಷ ಉಕ್ರೇನಿಯನ್ನರು ಪೋಲೆಂಡ್ ಗೆ ಪಲಾಯನ

Vijayaprabha Mobile App free

ರಷ್ಯಾ ಸೇನೆಯು ಉಕ್ರೇನ್ ಮೇಲೆ ದಾಳಿ ಮುಂದುವರಿಸಿದ್ದು, 1,00,000 ಮಂದಿ ಉಕ್ರೇನಿಯನ್ನರು ಪೋಲೆಂಡ್ ಗೆ ಪಲಾಯನಗೊಂಡಿದ್ದಾರೆ. ಬೆಳಗ್ಗೆ 7 ಗಂಟೆಯಿಂದ ಈವರೆಗೆ 9,000 ಮಂದಿ ಉಕ್ರೇನಿಯನ್ನರು ಪೋಲೆಂಡ್ ಪ್ರವೇಶಿಸಿದ್ದಾರೆ ಎಂದು ಎಎಫ್ ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.

ಇನ್ನು ಮಾ.24ರಂದು ಮಾಸ್ಕೊದಲ್ಲಿ ನಡೆಯಲಿದ್ದ 2022ರ ವಿಶ್ವಕಪ್ ಪ್ಲೇ ಆಫ್ ಪಂದ್ಯಗಳಲ್ಲಿ ರಷ್ಯಾ ಜೊತೆ ಆಡಲ್ಲ ಎಂದು ಪೋಲೆಂಡ್ ಈಗಾಗಲೇ ಘೋಷಿಸಿದೆ. ಪೋಲೆಂಡ್ ಸದ್ಯ ಉಕ್ರೇನ್ ಬೆಂಬಲಿಸುತ್ತಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.