ಪಿಎಂ ಕಿಸಾನ್ ಯೋಜನೆಯಡಿ ಹಣ ಪಡೆಯುವ ರೈತರ ಗಮನಕ್ಕೆ

ಒಂದು ಕುಟುಂಬದಲ್ಲಿ ಒಬ್ಬರಿಗೆ ಮಾತ್ರವೇ ಪ್ರದಾನ ಮಂತ್ರಿ ಪಿಎಂ ಕಿಸಾನ್‌ ಯೋಜನೆಯಡಿ ನೆರವು ಪಡೆಯಲು ಅವಕಾಶವಿದೆ. ಅಂದರೆ ಗಂಡ ಅಥವಾ ಹೆಂಡತಿ ಇಬ್ಬರಲ್ಲಿ ಒಬ್ಬರು ಮಾತ್ರ ಹಣ ಪಡೆಯಬಹುದು. ಆದರೆ ಇಬ್ಬರೂ ಹಣ ಪಡೆಯುತ್ತಿರುವ…

Farmers vijayaprabha news

ಒಂದು ಕುಟುಂಬದಲ್ಲಿ ಒಬ್ಬರಿಗೆ ಮಾತ್ರವೇ ಪ್ರದಾನ ಮಂತ್ರಿ ಪಿಎಂ ಕಿಸಾನ್‌ ಯೋಜನೆಯಡಿ ನೆರವು ಪಡೆಯಲು ಅವಕಾಶವಿದೆ. ಅಂದರೆ ಗಂಡ ಅಥವಾ ಹೆಂಡತಿ ಇಬ್ಬರಲ್ಲಿ ಒಬ್ಬರು ಮಾತ್ರ ಹಣ ಪಡೆಯಬಹುದು. ಆದರೆ ಇಬ್ಬರೂ ಹಣ ಪಡೆಯುತ್ತಿರುವ ಅಂಶ ಬಯಲಾಗಿದ್ದು, ಸರ್ಕಾರ ಈಗಾಗಲೇ ಹಲವೆಡೆ ಅನರ್ಹ ರೈತರ ಪಟ್ಟಿಯನ್ನು ಕೃಷಿ ಇಲಾಖೆಗೆ ಸಲ್ಲಿಸಿದೆ.

ಹಾಗಾಗಿ ನೀವು ಅರ್ಹತೆ ಇಲ್ಲದೆ ಹಣ ಪಡೆಯುತ್ತಿದ್ದರೆ ಅದನ್ನು ಕೃಷಿ ಉಪನಿರ್ದೇಶಕರ ಕಚೇರಿಗೆ ವಾಪಸ್ ಕೊಡಿ. ಇಂತಹ ಕುಟುಂಬಗಳನ್ನು ಗುರುತಿಸುವ ಕಾರ್ಯ ಹಲವು ರಾಜ್ಯಗಳಲ್ಲಿ ನಡೆಯುತ್ತಿದೆ.

ಇನ್ನು, ಕೇಂದ್ರ ಸರ್ಕಾರ ಮಹತ್ವಾಕಾಂಕ್ಷೆಯ ಪ್ರದಾನ ಮಂತ್ರಿ ಪಿಎಂ ಕಿಸಾನ್‌ ಯೋಜನೆಯಡಿ ರೈತರ ಖಾತೆಗೆ ಮೂರೂ ಕಂತುಗಳಲ್ಲಿ 2000 ರೂಗಳಂತೆ ವರ್ಷಕ್ಕೆ 6000 ರೂಗಳನ್ನು ಜಮಾ ಮಾಡಲಾಗುತ್ತದೆ.

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.