ಮೈಸೂರು: ಹಿಜಾಬ್ ವಿವಾದ ಹಿನ್ನೆಲೆಯಲ್ಲಿ ಹೈಕೋರ್ಟ್ ಅಂತಿಮ ತೀರ್ಪು ಬರುವವರೆಗೆ ಈ ಹಿಂದೆ ಇದ್ದ ಯಥಾಸ್ಥಿತಿಯನ್ನೇ ಕಾಯ್ದುಕೊಳ್ಳಬೇಕು ಎಂದು ಶಾಸಕ ಯು.ಟಿ.ಖಾದರ್ ಆಗ್ರಹಿಸಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಯು.ಟಿ.ಖಾದರ್, ಇರುವ ಸಮಸ್ಯೆಯನ್ನು ಸರ್ಕಾರ ನ್ಯಾಯಾಲಯದ ವ್ಯಾಪ್ತಿಯ ಹೊರಗಿದ್ದು ಬಗೆಹರಿಸಬೇಕಿದೆ. ಹಾಗಾಗಿ ಧಾರ್ಮಿಕ ಮುಖಂಡರ ಮತ್ತು ಸರ್ವಪಕ್ಷ ಸಭೆಯನ್ನು ಕರೆದು ಮುಖ್ಯಮಂತ್ರಿಗಳು ವಿವಾದದ ಬಗ್ಗೆ ಅಂತಿಮ ನಿರ್ಧಾರ ಏನೆಂದು ಚರ್ಚಿಸಿ, ಪ್ರಕಟಿಸಲಿ ಎಂದು ಒತ್ತಾಯಿಸಿದ್ದಾರೆ.
ಸಿಂಹ ವಿರುದ್ಧ ಕಿಡಿಕಾರಿದ ಖಾದರ್:
ಇನ್ನು, ಹಿಜಾಬ್ ಬಿಟ್ಟು ಕಿತಾಬ್ ಕೇಳಿ ಎಂದಿದ್ದ ಮೈಸೂರು ಸಂಸದ ಪ್ರತಾಪ್ ಸಿಂಹ ವಿರುದ್ಧ ಕಾಂಗ್ರೆಸ್ ಶಾಸಕ ಯು.ಟಿ.ಖಾದರ್ ಕಿಡಿಕಾರಿದ್ದು, ಸಿಂಹ ಅಂಥ ಮೂರ್ಖರು ಮತ್ತೊಬ್ಬರಿಲ್ಲ. ತಂದೆ ಬೇಕಾ, ತಾಯಿ ಬೇಕಾ ಅಥವಾ ಊಟ ಬೇಕಾ, ನೀರು ಬೇಕಾ ಎಂದು ಕೇಳಲಾಗುತ್ತದೆಯೇ? ನೀವು ಪಾರಂಪರಿಕ, ಐತಿಹಾಸಿಕ ಮೈಸೂರಿನ ಸಂಸದರು. ಮೈಸೂರಿನ ಘನತೆಯನ್ನು ಉಳಿಸಿ, ಕಪ್ಪುಚುಕ್ಕೆ ತರಬೇಡಿ. ಎಲ್ಲರೂ ಪರಿಹಾರ ಹುಡುಕಿದರೆ ನೀವು ಪರಿಹಾರ ಸಿಕ್ಕಾಗ ಸಮಸ್ಯೆ ಮಾಡುತ್ತೀರಿ ಎಂದು ಗುಡುಗಿದ್ದಾರೆ.