ದೀರ್ಘಕಾಲದ ಮೂತ್ರಪಿಂಡ ಕಾಯಿಲೆಗೆ ಕಾರಣ ಮತ್ತು ರೋಗ ಲಕ್ಷಣಗಳು; ಅರೋಗ್ಯ ಸಲಹೆಗಳ ಬಗ್ಗೆ ತಿಳಿದುಕೊಳ್ಳಿ

10 ರಲ್ಲಿ 1 ದೀರ್ಘಕಾಲದ ಮೂತ್ರಪಿಂಡ ರೋಗವು ಜನಸಂಖ್ಯೆಯ ಶೇ.10ರಷ್ಟು ಜನರ ಮೇಲೆ ಪರಿಣಾಮ ಬೀರುತ್ತದೆ. ಯಾರು ಬಾಧಿತರು? ವಿಶ್ವಾದ್ಯಂತ ಜನಸಂಖ್ಯೆಯ ಶೇ.10ರಷ್ಟು ಜನರು. 65 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರು. 65ರಿಂದ…

kidney

10 ರಲ್ಲಿ 1 ದೀರ್ಘಕಾಲದ ಮೂತ್ರಪಿಂಡ ರೋಗವು ಜನಸಂಖ್ಯೆಯ ಶೇ.10ರಷ್ಟು ಜನರ ಮೇಲೆ ಪರಿಣಾಮ ಬೀರುತ್ತದೆ.

ಯಾರು ಬಾಧಿತರು?

  • ವಿಶ್ವಾದ್ಯಂತ ಜನಸಂಖ್ಯೆಯ ಶೇ.10ರಷ್ಟು ಜನರು.
  • 65 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರು.
  • 65ರಿಂದ 74 ವರ್ಷದೊಳಗಿನ ಪ್ರತಿ 5 ಪುರುಷರಲ್ಲಿ ಒಬ್ಬರು ಹಾಗು 4 ಮಹಿಳೆಯರಲ್ಲಿ ಒಬ್ಬರು ದೀರ್ಘಕಾಲದ ಮೂತ್ರಪಿಂಡದ ಕಾಯಿಲೆಯಿಂದ ಬಳಲುತ್ತಿದ್ದಾರೆ.

ಆತಂಕಕಾರಿ ಅಂಕಿಅಂಶಗಳು:-

Vijayaprabha Mobile App free

2.4 million Deaths:- ದೀರ್ಘಕಾಲದ ಮೂತ್ರಪಿಂಡ ಕಾಯಿಲೆಯಿಂದ ವರ್ಷಕ್ಕೆ ಕನಿಷ್ಠ 2.4 ಮಿಲಿಯನ್ ಜನರು ಸಾವನ್ನಪ್ಪುತ್ತಾರೆ ಹಾಗೂ ಇದು ವಿಶ್ವದಾದ್ಯಂತ ವೇಗವಾಗಿ ಬೆಳೆಯುತ್ತಿರುವ ಸಾವಿಗೆ ಕಾರಣವಾಗುವ ರೋಗಗಳಲ್ಲೊಂದಾಗಿದೆ.

1.36 Lakh Deaths:- ಭಾರತದಲ್ಲಿ ಪ್ರತಿ ವರ್ಷ 1.36 ಲಕ್ಷ ವಯಸ್ಕರು ಈ ಕಾಯಿಲೆಯಿಂದಾಗಿ ಸಾಯುತ್ತಾರೆ. ಈ ಸಂಖ್ಯೆ ಏಡ್ಸ್ ಗೆ ಬಲಿಯಾಗುವವವರ ಸಂಖ್ಯೆಗಿಂತಲೂ ಹೆಚ್ಚಿದೆ.

ಪ್ರಮುಖ ಕಾರಣಗಳು:-

ವಯಸ್ಕರಲ್ಲಿ ಈ ಕಾಯಿಲೆಗೆ ಅಧಿಕ ರಕ್ತದೊತ್ತಡ ಮತ್ತು ಮಧುಮೇಹ ಎರಡು ಸಾಮಾನ್ಯ ಕಾರಣಗಳಾಗಿವೆ.

ಮಧುಮೇಹ ಮತ್ತು ಅಧಿಕ ರಕ್ತದೊತ್ತಡವು ಮೂತ್ರಪಿಂಡಗಳಲ್ಲಿ ರಕ್ತನಾಳಗಳನ್ನು ಹಾನಿಗೊಳಿಸುತ್ತದೆ. ಇದರಿಂದಾಗಿ ಅವುಗಳ ಕಾರ್ಯಕ್ಷಮತೆ ಕ್ರಮೇಣವಾಗಿ ಕಡಿಮೆಯಾಗುತ್ತದೆ.

ರೋಗಲಕ್ಷಣಗಳು:-

ಆರಂಭದಲ್ಲಿ ಈ ಕಾಯಿಲೆ ಸಾಮಾನ್ಯವಾಗಿ ಯಾವುದೇ ರೋಗಲಕ್ಷಣಗಳನ್ನು ಹೊಂದಿರುವುದಿಲ್ಲ. ಪ್ರಾರಂಭದಲ್ಲಿ ವ್ಯಕ್ತಿಯ ಮೂತ್ರಪಿಂಡದ ಕಾರ್ಯಕ್ಷಮತೆ ಶೇ.90ರಷ್ಟು ಕಡಿಮೆಯಾಗಬಹುದು.

ಈ ರೋಗಲಕ್ಷಣಗಳನ್ನು ಒಳಗೊಂಡಿರಬಹುದು: ಮೂತ್ರ ವಿಸರ್ಜನೆಯಲ್ಲಿ ತೊಂದರೆ, ನೊರೆ ಮೂತ್ರ, ಉಸಿರಾಟದಲ್ಲಿ ತೊಂದರೆ, ಊತ, ದೌರ್ಬಲ್ಯ, ನಿದ್ರೆ ಸಮಸ್ಯೆ, ಹಸಿವಿನಲ್ಲಿ ಬದಲಾವಣೆಗಳು, ಲೈಂಗಿಕ ಸಮಸ್ಯೆಗಳು, ಜ್ಞಾಪಕ ಶಕ್ತಿ ನಷ್ಟ ಇತ್ಯಾದಿ.

ಕಾಯಿಲೆಯ ಹಂತಗಳು:

ಈ ಕಾಯಿಲೆಯನ್ನು 5 ಹಂತಗಳಾಗಿ ವಿಂಗಡಿಸಲಾಗಿದೆ. ಸಾಮಾನ್ಯವಾಗಿ ರಕ್ತದಲ್ಲಿನ ಕ್ರಿಯೇಟಿನೈನ್ ಮಟ್ಟವನ್ನು ಆಧರಿಸಿದ ಪರೀಕ್ಷೆ ಜಿಎಫ್‌ಆರ್‌ ಆಧರಿಸಿ ಹಂತಗಳನ್ನು ಅಂದಾಜಿಸಲಾದೆ. ಮೂತ್ರಪಿಂಡದ ಕಾರ್ಯ ಹದಗೆಟ್ಟಂತೆ ಜಿಎಫ್‌ಆರ್‌ ಕಡಿಮೆಯಾಗುತ್ತದೆ.

ಮೂತ್ರಪಿಂಡದ ಹಾನಿಯ ಮಟ್ಟ

ಸೌಮ್ಯ Stage 1, ಮೂತ್ರಪಿಂಡದ ಕಾರ್ಯಕ್ಷಮತೆ > 90%

ಸೌಮ್ಯ Stage 2, ಮೂತ್ರಪಿಂಡದ ಕಾರ್ಯಕ್ಷಮತೆ >60-89%

ಸೌಮ್ಯದಿಂದ ಮಧ್ಯಮ Stage 3, ಮೂತ್ರಪಿಂಡದ ಕಾರ್ಯಕ್ಷಮತೆ >30-59%

ಮಧ್ಯಮದಿಂದ ತೀವ್ರ Stage 4 ಮೂತ್ರಪಿಂಡದ ಕಾರ್ಯಕ್ಷಮತೆ >15-29%

ಅಂತಿಮ ಹಂತ ಡಯಾಲಿಸಿಸ್ ಪ್ರಾರಂಭಿಸುವ ಅಥವಾ ಮೂತ್ರಪಿಂಡ ಕಸಿ ಮಾಡುವ ಅಗತ್ಯವಿರುತ್ತದೆ.

Stage 5 ಮೂತ್ರಪಿಂಡದ ಕಾರ್ಯಕ್ಷಮತೆ <15%

ಇದಕ್ಕೆ ಚಿಕಿತ್ಸೆ ಇದೆಯೇ?

ದೀರ್ಘಕಾಲದ ಮೂತ್ರಪಿಂಡದ ಕಾಯಿಲೆಗೆ (ಸಿಕೆಡಿ) ಯಾವುದೇ ಚಿಕಿತ್ಸೆ ಇಲ್ಲ. ಆದರೆ, ಚಿಕಿತ್ಸೆಯು ರೋಗಲಕ್ಷಣಗಳನ್ನು ನಿವಾರಿಸಲು ಮತ್ತು ಕಾಯಿಲೆ ತೀವ್ರವಾಗುವುದನ್ನು ತಡೆಯಲು ಸಹಾಯ ಮಾಡುತ್ತದೆ. ಮೂತ್ರಪಿಂಡದ ಹಾನಿ ಮೂತ್ರಪಿಂಡ ವೈಫಲ್ಯಕ್ಕೆ ಕಾರಣವಾದಾಗ, ರೋಗಿ ಬದುಕುಳಿಯಲು ಮೂತ್ರಪಿಂಡ ಬದಲಿ ಚಿಕಿತ್ಸೆ (ಡಯಾಲಿಸಿಸ್ ಅಥವಾ ಮೂತ್ರಪಿಂಡ ಕಸಿ) ಅತ್ಯಗತ್ಯವಾಗಿರುತ್ತದೆ.

ಲಾಭಕಾರಿ ಸಲಹೆಗಳು:

  • ಆರೋಗ್ಯವಾಗಿರಿ, ಸಕ್ರಿಯರಾಗಿರಿ.
  • ಆರೋಗ್ಯಕರ ಆಹಾರವನ್ನು ಸೇವಿಸಿ.
  • ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಪರೀಕ್ಷಿಸಿ ಮತ್ತು ನಿಯಂತ್ರಿಸಿ.
  • ರಕ್ತದೊತ್ತಡವನ್ನು ಪರೀಕ್ಷಿಸಿ ಮತ್ತು ನಿಯಂತ್ರಿಸಿ.
  • ಹೆಚ್ಚು ಹೆಚ್ಚು ದ್ರವ ಸೇವನೆ ಮಾಡಿ.
  • ಧೂಮಪಾನ ಮಾಡಬೇಡಿ.
  • ಉರಿಯೂತ ನಿವಾರಕ/ನೋವು ನಿವಾರಕ ಮಾತ್ರೆಗಳನ್ನು ಹೆಚ್ಚು ಸೇವಿಸಬೇಡಿ.
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.