ರೋಗನಿರೋಧಕ ಶಕ್ತಿ ಏಕೆ ಮುಖ್ಯವಾಗಿದೆ?
“ಬಲವಾದ ರೋಗನಿರೋಧಕ ಶಕ್ತಿಯು ಕೂರೋನಾ ರೋಗಲಕ್ಷಣಗಳನ್ನು ದೂರವಿರಿಸುವಲ್ಲಿ ಪ್ರಮುಖವಾಗಿದೆ. ಉತ್ತಮ ರೋಗನಿರೋಧಕ ಶಕ್ತಿ ಹೊಂದಿರುವ ವ್ಯಕ್ತಿಯು ವೈರಸ್ ಗೆ ತುತ್ತಾಗುವ ಅಪಾಯ ಕಡಿಮೆ ಇರುತ್ತದೆ, ಅಲ್ಲದ ಸೋಂಕಿಗೆ ತುತ್ತಾದರೂ ಯಾವುದೇ ಗಂಭೀರ ಸಮಸ್ಯೆಗಳಿಲ್ಲದೆ ತ್ವರಿತವಾಗಿ ಚೇತರಿಸಿಕೊಳ್ಳಬಹುದಾಗಿರುತ್ತದೆ.
ಆರೋಗ್ಯಕರ ಆಹಾರ ಸೇವನೆಯು ಕೊರೋನಾ ರೂಪಾಂತರಿಗಳ ವಿರುದ್ಧ ರೋಗನಿರೋಧಕ ಶಕ್ತಿಯನ್ನು ನಿರ್ಮಿಸುವ ಮಾರ್ಗಗಳಲ್ಲೊಂದಾಗಿದೆ.
‘ಆರೋಗ್ಯಕರ ಆಹಾರ ಸೇವನೆ’:-
“ಸಾಂಕ್ರಾಮಿಕ ರೋಗದ ಕಾಲದಲ್ಲಿ ಮಕ್ಕಳಿಗೂ ಕೂಡ ಆರೋಗ್ಯಕ ಆಹಾರ ನೀಡುವುದು ಬಹಳ ಅಗತ್ಯ. ಮಕ್ಕಳ ಊಟ, ತಿಂಡಿಗಳನ್ನು ತಯಾರಿಸುವಾಗ ಪೋಷಕರು ಆರೋಗ್ಯಕರ ಪರ್ಯಾಯಗಳನ್ನು ಹುಡುಕುತ್ತಿದ್ದಾರೆ.
ಮಕ್ಕಳು ಹಸಿದಿರುವಾಗ ಅವರು ಹೊಟ್ಟೆ ತುಂಬ ಆರೋಗ್ಯಕರ ಆಹಾರ ಸೇವಿಸುವುದು ಅಗತ್ಯ. ಇದರಿಂದ ಅವರಿಗೆ ಶಕ್ತಿಯುತವಾಗಿರಲು ಸಾಧ್ಯವಾಗುತ್ತದೆ.
ಗೋಲ್ಡನ್ ಮಿಲ್ಕ್:- “ಹಾಲು (200 ಮಿಲೀ) | ಬಾದಾಮಿ ಪುಡಿ | ಅರಿಶಿನ ಪುಡಿ | ಚಕ್ಕೆ ಪುಡಿ | ಏಲಕ್ಕಿ ಪುಡಿ | ಕಾಳುಮೆಣಸಿನ ಪುಡಿ | ಬೆಲ್ಲ
“ಈ ಎಲ್ಲಾ ಒಣ ಪದಾರ್ಥಗಳನ್ನು ಹಾಲಿನಲ್ಲಿ ಹಾಕಿ, ಸ್ವಲ್ಪ ಕಾಯಿಸಿ. ಉತ್ತಮ ನಿದ್ರೆಗಾಗಿ ಮಗುವಿಗೆ ಪ್ರತಿ ರಾತ್ರಿ ಇದನ್ನು ನೀಡಿ,
ಅರಿಶಿನ, ಚಕ್ಕೆ ಬ್ಯಾಕ್ಟಿರಿಯಾ ವಿರೋಧಿ ಗುಣಗಳನ್ನು ಹೊಂದಿದ್ದು, ಮಗುವಿಗೆ ಶೀತ ಮತ್ತು ಜ್ವರದ ವಿರುದ್ಧ ಹೋರಾಡಲು ಸಹಾಯ ಮಾಡುತ್ತವೆ. ಹಾಲಿನ ಕ್ಯಾಲ್ಸಿಯಂ ಅಂಶದಿಂದಾಗಿ ಮೂಳೆಗಳು ಬಲಗೊಳ್ಳುತ್ತವೆ. ಕಬ್ಬಿಣದ ಅಂಶ ಹೊಂದಿರುವ ಬೆಲ್ಲವು ಶ್ವಾಸಕೋಶದ ಆರೋಗ್ಯಕ್ಕೆ ಉತ್ತಮ.
ಹಮ್ಮಸ್ ಜೊತೆ ಕ್ಯಾರೆಟ್ ಫೈ:- “10 ಕ್ಯಾರೆಟ್ | 1 ಚಮಚ ಕರಿ ಪುಡಿ |1 ಚಿಟಿಕೆ ಕರಿಮೆಣಸು (2 ಚಮಚ ಜೇನುತುಪ್ಪ | 1 ಚಮಚ ಉಪ್ಪು 14 ಚಮಚ ಆಲಿವ್ ಎಣ್ಣೆ
“ಗಜ್ಜರಿಗಳನ್ನು ಚೆನ್ನಾಗಿ ತೊಳೆದು ತೆಳುವಾಗಿ ಕತ್ತರಿಸಿ, ಕರಿ ಪುಡಿ, ಎಣ್ಣೆ, ಮೆಣಸು ಮತ್ತು ಉಪ್ಪಿನೊಂದಿಗೆ ಸೇರಿಸಿ, 30 ನಿಮಿಷ ಬೇಕ್ ಮಾಡಿ. ನಂತರ ಜೇನುತುಪ್ಪವನ್ನು ಹಾಕಿ, ಹಮ್ಮಸ್ ಜೊತೆಗೆ ಬಡಿಸಿ.
ಕ್ಯಾರೆಟ್ ವಿಟಮಿನ್ ಎ ಮತ್ತು ಕರಗಬಲ್ಲ ಉತ್ತಮ ಫೈಬರ್ ನ ಉತ್ತಮ ಮೂಲವಾಗಿದೆ. ಹಮ್ಮಸ್ ಪ್ರೋಟೀನ್‌ನ ಉತ್ತಮ ಮೂಲವಾಗಿದೆ. ಕರಿಬೇವು ಬ್ಯಾಕ್ಟಿರಿಯಾ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.
ಖರ್ಜೂರ-ಎಳ್ಳಿನ ಲಾಡು:- “100 ಗ್ರಾಂ ಖರ್ಜೂರ | 3 ಚಮಚ ಎಳ್ಳು | 2 ಚಮಚ ಹುರಿದ ಗಸಗಸ ಬೀಜಗಳು [ 4 ಏಲಕ್ಕಿ
“ಎಳ್ಳು ಹುರಿದುಕೊಂಡು ಎಲಕ್ಕಿ ಜೊತೆ ಅದನ್ನು ಪುಡಿಮಾಡಿಕೊಲ್ಲಿ, ಖರ್ಜೂರವನ್ನು ಮುದ್ದೆಯಾಗಿ ಮಾಡಿಕೊಂಡು, ಎಳ್ಳು ಮತ್ತು ಏಲಕ್ಕಿ ಪುಡಿಯೊಂದಿಗೆ ಬೆರೆಸಿ. ಈ ಮಿಶ್ರಣವನ್ನು ಸಣ್ಣ ಸಣ್ಣ ಉಂಡೆಗಳಾಗಿ ಮಾಡಿ ಅವುಗಳನ್ನು ಗಸಗಸೆಯ ಬೀಜಗಳ ಮೇಲೆ ಉರುಳಿಸಿಕೊಳ್ಳಿ.
ಈ ಮೇಲಿನ ಪಾಕವಿಧಾನವು ಶಕ್ತಿ ಮತ್ತು ಪೋಷಕಾಂಶ-ದಟ್ಟವಾಗಿದೆ, ಇದು ಉತ್ತಮ ಪ್ರಮಾಣದ ಸತು, ಸೆಲೆನಿಯಮ್ ಮತ್ತು ಕ್ಯಾಲೊರಿಗಳನ್ನು ಹೊಂದಿದೆ. ಇದು ರೋಗನಿರೋಧಕ ಶಕ್ತಿ ಮತ್ತು ರಕ್ತದಲ್ಲಿ ಹಿಮೋಗ್ಲೋಬಿನ್ ಹೆಚ್ಚಿಸಲು ಸಹಾಯ ಮಾಡುತ್ತದೆ.
ಪರ್ಲ್ ಮಿಲೆಟ್ ಸೂಪ್:- “ನೀರು | ಮೊಸರು | ಉಪ್ಪು | ಅರಿಶಿನ ಪುಡಿ | ಸಜ್ಜೆ ಹಿಟ್ಟು ಎಣ್ಣೆ | ಜೀರಿಗೆ | ಈರುಳ್ಳಿ | ಕ್ಯಾರೆಟ್ | ಹಸಿರು ಬಟಾಣಿ
“ಮೊದಲು ನೀರು, ಮೊಸರು, ಉಪ್ಪು ಮತ್ತು ಅರಿಶಿನ ಪುಡಿಯನ್ನು ಸೇರಿಸಿ ಮೊಸರಿನ ಮಿಶ್ರಣವನ್ನು ತಯಾರಿಸಿಕೊಳ್ಳಿ. ನಂತರ ಹುರಿದ ಸಜ್ಜೆ ಹಿಟ್ಟನ್ನು ಅದರೊಂದಿಗೆ ಮಿಶ್ರಣ ಮಾಡಿ. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಜೀರಿಗೆ, ಈರುಳ್ಳಿ ಮತ್ತು ಎಲ್ಲಾ ತರಕಾರಿಗಳನ್ನು ಹಾಕಿ. ಕೆಲವು ನಿಮಿಷಗಳ ನಂತರ ಮೊಸರಿನ ಮಿಶ್ರಣವನ್ನು ಹಾಕಿ, ಕಡಿಮೆ ಉರಿಯಲ್ಲಿ ಬೇಯಿಸಿ.”
`ಒಮೆಗಾ-3 ನಿಂದ ಸಮೃದ್ಧವಾಗಿದ್ದು, ಹೆಚ್ಚಿನ ಪ್ರಮಾಣದ ಕಬ್ಬಿಣ ಮತ್ತು ರಂಜಿಕವನ್ನು ಹೊಂದಿದೆ. ಇದು ಜೀರ್ಣಕ್ರಿಯೆ ಸುಧಾರಿಸಲು ಸಹಾಯ ಮಾಡುತ್ತದೆ, ಮಧುಮೇಹವನ್ನು ನಿರ್ವಹಿಸುತ್ತದೆ ಮತ್ತು ತೂಕ ಕಳೆದುಕೊಳ್ಳಲು ಸಹಕರಿಸುತ್ತದೆ.
ಕುಂಬಳದ ಥಾಲಿಪಟ್ಟು:- “ಬೇಯಿಸಿ ಹದ ಮಾಡಲಾದ ಕುಂಬಳಕಾಯಿ ಎಣ್ಣೆ 11.5 ಕಪ್ ಹಿಟ್ಟಿನ ಮಿಶ್ರಣ (ಸಜ್ಜೆ, ರಾಗಿ, ಜೋಳ) | ಉಪ್ಪು | ಲವಂಗ ಪುಡಿ
“ಹಿಟ್ಟಿನ ಮಿಶ್ರಣವನ್ನು ತೆಗೆದುಕೊಂಡು ಅದರಲ್ಲಿ ಲವಂಗದ ಪುಡಿಯನ್ನು ಹಾಕಿ. ಈಗ ಕುಂಬಳಕಾಯಿಯನ್ನು ಹಾಕಿ ಬೆರೆಸಿಕೊಳ್ಳಿ. ಅಗತ್ಯವಿದ್ದರೆ ಸ್ವಲ್ಪ ನೀರು ಹಾಕಿ ಒದ್ದೆಯಾದ ಬೆರಳಿನಿಂದ ಹಿಟ್ಟನ್ನು ತಟ್ಟೆಯಲ್ಲಿ ತಟ್ಟೆ ಮತ್ತು ಹಿಟ್ಟಿನಲ್ಲಿ ಸಣ್ಣ ರಂಧ್ರವನ್ನು ಮಾಡಿ. ರಂಧ್ರದಲ್ಲಿ ಸ್ವಲ್ಪ ಎಣ್ಣೆ ಹಾಕಿ, ಈಗ ಹೆಂಚಿನ ಮೇಲೆ ಬೇಯಿಸಿಕೊಂಡು, ಬಿಸಿ ಬಿಸಿಯಾಗಿ ಬಡಿಸಿ.
ಕುಂಬಳಕಾಯಿ ಥಾಲಿಪಟ್ಟು ವಿಟಮಿನ್ ಎ, ಥಯಾಮಿನ್, ಸತು ಮತ್ತು ಕಾರ್ಬೋಹೈಡ್ರಟ್‌ನ ಉತ್ತಮ ಮೂಲವಾಗಿದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಫೈಬರ್ ಅಗತ್ಯಗಳನ್ನು ಪೂರೈಸಲು ಸಹಾಯ ಮಾಡುತ್ತದೆ.
ಆಕ್ರೋಡು:- ಆಕ್ರೋಡು ಆರೋಗ್ಯಕರ ಒಮೆಗಾ -3 ಕೊಬ್ಬಿನಾಮ್ಲಗಳನ್ನು ಹೊಂದಿದ್ದು, ಇದು ನಿಮ್ಮ ಮಕ್ಕಳಿಗೆ ಬಹಳಷ್ಟು ರೀತಿಯಲ್ಲಿ ಒಳ್ಳೆಯದು. ಒಮೆಗಾ -3 ಕೊಬ್ಬಿನಾಮ್ಲಗಳು ದೇಹವನ್ನು ಅನಾರೋಗ್ಯದ ವಿರುದ್ಧ ಹೋರಾಡುವಲ್ಲಿ ಸಹಾಯ ಮಾಡುತ್ತವೆ ಎಂದು ತಜ್ಞರು ಹೇಳುತ್ತಾರೆ. ಒಮೆಗಾ-3 ಮಕ್ಕಳಲ್ಲಿ ಉಸಿರಾಟದ ಸೋಂಕುಗಳ ಅಪಾಯವನ್ನು ಕಡಿಮೆ ಮಾಡುತ್ತದೆ.
ಮೊಸರು :- “ಮೊಸರು ಪ್ರೋಬಯಾಟಿಕ್ ಎಂಬ ಸಹಾಯಕ ಸೂಕ್ಷ್ಮಾಣುಗಳನ್ನು ಹೊಂದಿರುತ್ತದೆ. ಈ ಕ್ವಿಟ್ಟರ್‌ಗಳು ಕರುಳಿನಲ್ಲಿ ವಾಸಿಸುತ್ತವೆ ಮತ್ತು ದೇಹದ ಆಹಾರವನ್ನು ಬಳಸುವ ವಿಧಾನವನ್ನು ಸುಧಾರಿಸುತ್ತವೆ. ಅಲ್ಲದೆ, ದೇಹವು ಅನಾರೋಗ್ಯದ ವಿರುದ್ಧ ಹೋರಾಡುವಲ್ಲಿ ಸಹಾಯ ಮಾಡುತ್ತವೆ.
ಮೊಸರನ್ನು ಸೇವಿಸುವ ಮಕ್ಕಳಲ್ಲಿ ಕೀತ, ಕಿವಿಯ ಸೋಂಕು ಮತ್ತು ಗಂಟಲಿನ ಉರಿಯೂತದ ಅಪಾಯ ಶೇ.19ರಷ್ಟು ಕಡಿಮೆ ಇರುತ್ತದೆ.
ಈ ಆಹಾರಗಳನ್ನು ತಿನ್ನಬಾರದು:-
- ಸಕ್ಕರೆ ಪ್ರಮಾಣ ಅಧಿಕವಾಗಿರುವ ಆಹಾರಗಳು
- ಸಂಸ್ಕರಿಸಿದ ಕಾರ್ಬೋಹೈಡ್ರೆಟ್‌ಗಳು ಹೆಚ್ಚಿರುವ ಆಹಾರ
- ಸಂಸ್ಕರಿಸಿದ ಆಹಾರಗಳು
- ಕೆಫೀನ್ ಮತ್ತು ಆಲ್ಕೋಹಾಲ್
- ಫಾಸ್ಟ್ ಫುಡ್
- ಸೋಡಾ




