ಫೆಬ್ರವರಿಯಿಂದ ಬ್ಯಾಂಕಿಂಗ್ ವಲಯದಿಂದ ಇತರ ಕ್ಷೇತ್ರಗಳಿಗೆ ಕೆಲವು ನಿಯಮಗಳಲ್ಲಿ ಬದಲಾವಣೆಯಾಗಲಿದ್ದು, ಬ್ಯಾಂಕ್ ಆಫ್ ಬರೋಡಾ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್ ವಿವಿಧ ಸೇವೆಗಳಿಗೆ ಸಂಬಂಧಿಸಿದ ಕೆಲವು ಹೊಸ ನಿಯಮಗಳನ್ನು ಜಾರಿಗೆ ತರಲಿವೆ.
ಇನ್ನು, ದೇಶದ ಮೊದಲ ಸಾರ್ವಜನಿಕ ವಲಯದ ಬ್ಯಾಂಕ್ ಎಸ್.ಬಿ.ಐ. ಹಣ ವರ್ಗಾವಣೆಯ ನಿಯಮಗಳನ್ನು ಬದಲಾಯಿಸುತ್ತಿದ್ದು, IMPS ಮೂಲಕ 2 ಲಕ್ಷದಿಂದ 5 ಲಕ್ಷ ರೂ.ವರೆಗೆ ಹಣ ವರ್ಗಾಯಿಸಲು ಬ್ಯಾಂಕ್ ಈಗ 20 ರೂ. + GST ಶುಲ್ಕ ವಿಧಿಸುತ್ತದೆ. ಬ್ಯಾಂಕ್ ಆಫ್ ಬರೋಡಾ ಗ್ರಾಹಕರು ಫೆಬ್ರವರಿ 1 ರಿಂದ ಚೆಕ್ ಪಾವತಿಗೆ ಧನಾತ್ಮಕ ಪಾವತಿ ವ್ಯವಸ್ಥೆಯನ್ನು ಅನುಸರಿಸಬೇಕಾಗುತ್ತದೆ.
ಗ್ಯಾಸ್ ಸಿಲಿಂಡರ್ ಬೆಲೆ ಬದಲಾವಣೆಯಾಗುತ್ತಿದ್ದು, PNB ನಲ್ಲಿ ಹೊಸ ರೂಲ್ಸ್-ನಿಮ್ಮ ಖಾತೆಯಲ್ಲಿ ಹಣದ ಕೊರತೆಯಿಂದ ಕಂತು ಅಥವಾ ಹೂಡಿಕೆ ವಿಫಲವಾದರೆ, ನೀವು 250 ರೂ. ದಂಡ ಪಾವತಿಸಬೇಕಾಗುತ್ತದೆ.