ಮುಂಬೈ : ನಟಿ, ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ದಕ್ಷಿಣ ಭಾರತದ ಬಹುಬೇಡಿಕೆಯ ನಟಿಯಾಗಿದ್ದು, ಪದೇ ಪದೇ ಅವರು ಟ್ರೋಲ್ನಿಂದಲೇ ಸುದ್ದಿಯಾಗುತ್ತಿದ್ದಾರೆ.
ಸದ್ಯ ತೆಲುಗಿನ ಪುಷ್ಪಾ ಸಿನಿಮಾದ ಯಶಸ್ಸಿನ ಗುಂಗಿನಲ್ಲಿರುವ, ಶ್ರೀವಲ್ಲಿ ಖ್ಯಾತಿಯ ರಶ್ಮಿಕಾ ಮಂದಣ್ಣ, ಇದೀಗ ಮುಂಬೈ ಏರ್ಪೋರ್ಟ್ನಲ್ಲಿ ಕಾಣಿಸಿಕೊಂಡಿದ್ದು ಮತ್ತೆ ಟ್ರೋಲ್ಗೆ ಆಹಾರವಾಗಿದ್ದು, ಈ ಬಾರಿ ಬಟ್ಟೆಯ ವಿಚಾರಕ್ಕೆ ಟ್ರೋಲ್ಗೆ ಒಳಗಾಗಿದ್ದಾರೆ.
ಮುಂಬೈ ಏರ್ಪೋರ್ಟ್ನಲ್ಲಿ ಬಿಳಿ ಬಣ್ಣದ ಟೀ ಶರ್ಟ್ ಧರಿಸಿ ಕಾಣಿಸಿಕೊಂಡ ನಟಿ ರಶ್ಮಿಕಾಗೆ, ಕೆಲವರು ನಿಮ್ಮ ಪ್ಯಾಂಟ್ ಎಲ್ಲಿ ಎಂದು ಪ್ರಶ್ನಿಸಿದ್ದಾರೆ. ಇನ್ನೂ ಕೆಲವರು ಅವರ ಪರವಾಗಿಯೂ ಕಾಮೆಂಟ್ ಮಾಡಿದ್ದು, ಬಟ್ಟೆ ಧರಿಸುವುದು ಅವರ ಸ್ವಾತಂತ್ರ್ಯ ಎಂದು ಪ್ರತ್ಯುತ್ತರ ನೀಡಿದ್ದಾರೆ.




