“ಕಾರ್ಗಲ್ ನೈಟ್ಸ್” ಟ್ರೈಲರ್; ಈ ಸಿನಿಮಾದಲ್ಲಿ ಕಳಚಲಿದೆ ಪಶ್ಚಿಮ ಘಟ್ಟದ ಭೂಗತ ಲೋಕ ಕ್ರೂರತ್ವ!

ಕ್ರೂರತ್ವ, ನೈಜತ್ವ , ಸ್ಮಗ್ಲಿಂಗ್, ರೌಡಿಸಂ , ಮಾಫಿಯಾ , ಘೋರ ಅನುಭವಗಳು, ದಟ್ಟಕಾಡುಗಳ ನಡುವೆ ಸಮಾಜಕ್ಕೆ ಗೊತ್ತಾಗದ ಮತ್ತೊಂದು ಕರಾಳ ಮುಖವನ್ನ ಜನರ ಮುಂದೆ ಬೆಳ್ಳಿ ಪರದೆ ಮೂಲಕ ತೋರಿಸೋಕೆ ಅರುಣ್ ಎ…

ಕ್ರೂರತ್ವ, ನೈಜತ್ವ , ಸ್ಮಗ್ಲಿಂಗ್, ರೌಡಿಸಂ , ಮಾಫಿಯಾ , ಘೋರ ಅನುಭವಗಳು, ದಟ್ಟಕಾಡುಗಳ ನಡುವೆ ಸಮಾಜಕ್ಕೆ ಗೊತ್ತಾಗದ ಮತ್ತೊಂದು ಕರಾಳ ಮುಖವನ್ನ ಜನರ ಮುಂದೆ ಬೆಳ್ಳಿ ಪರದೆ ಮೂಲಕ ತೋರಿಸೋಕೆ ಅರುಣ್ ಎ ಎನ್ ಆರ್ ಮತ್ತು ನಿರ್ದೇಶಕ ದೇವರಾಜ್ ಪೂಜಾರಿ ತಂಡ ಸಿದ್ಧವಾಗಿದೆ.

ಹೌದು,19ನೇ ಶತಮಾನದಲ್ಲಿ ರಾಜ್ಯದ ಪಶ್ಚಿಮ ಘಟ್ಟದ ದಟ್ಟವಾದ ಕಾಡುಗಳ ನೆರಳಲ್ಲಿ ನಡೆಯುತ್ತಿದ್ದ ಗಂಧದ ಕಳ್ಳಸಾಗಣಿಕೆಯ ಸುತ್ತ ಕಥೆಯನ್ನ ಹೆಣೆಯಲಾಗಿದ್ದು, ಸಿನಿಮಾ ಟ್ರೈಲರ್ ರಿಲೀಸ್ ಆಗಿದ್ದು, ಎದೆ ಝುಂ ಎನಿಸುವಂತಹ ಸನ್ನಿವೇಶಗಳು, ಬಿಜಿಎಂ , ಲೊಕೇಶನ್ , ಥ್ರಿಲ್ ಜೊತೆಗೆ ಮತ್ತಷ್ಟು ಕಾತರತೆ ಹೆಚ್ಚಿಸಿದ್ದು, ಸಿನಿಮಾದ ಟ್ರೇಲರ್ ಗೆ ಸಖತ್ ರೆಸ್ಪಾನ್ಸ್ ಸಿಗ್ತಿದೆ.

Vijayaprabha Mobile App free

ಕಾರ್ಗಲ್ ನೈಟ್ಸ್” ಸಿನಿಮಾಕ್ಕೆ ಹರ್ಶಿಲ್ ಕೌಶಿಕ್ ಈ ನಾಯಕನಾಗಿದ್ದು, ಈ ಸಿನಿಮಾ ಮೂಲಕ ಹರ್ಶಿಲ್ ನಾಯಕನಾಗಿ ಪರಿಚಯವಾಗುತ್ತಿದ್ದಾರೆ. ಇನ್ನು, ಸತ್ಯಕಥೆ ಆಧಾರಿತ ಸಿನಿಮಾ ಇದಾಗಿದ್ದು, 90ರ ದಶಕದಲ್ಲಿ ಸ್ಮಗ್ಲಿಂಗ್ ನ ಸುತ್ತ ಕಥೆ ನಡೆಯಲಿದ್ದು, ಟ್ರೆಲರ್ ನಿಂದಲೇ ಇದೊಂದು ಪಕ್ಕಾ ಸಸ್ಪೆನ್ಸ್ ಥ್ರಿಲ್ಲರ್, ಆಕ್ಷನ್ ಸಿನಿಮಾ ಅನ್ನೋದು ಗೊತ್ತಾಗುತ್ತಿದ್ದು, ನೆಟ್ಟಿಗರು ಸಿನಿಮಾ ಟೀಮ್ ಗೆ ಆಲ್ ದ ಬೆಸ್ಟ್ ಹೇಳ್ತಿದ್ಧಾರೆ.

ಅಂದಹಾಗೆ ಸಾಗರ ತಾಲ್ಲೂಕಿನ ಕಾರ್ಗಲ್ ನಲ್ಲಿ ನಿಗೂಢವಾಗಿ ಸಾಗುತ್ತಿದ್ದ ಗಂಧದ ಮರಗಳ ಕಳ್ಳಸಾಗಾಣಿಕೆಯ ವಾತಾವರಣವನ್ನು ಮಲ್ಲಿಕಾರ್ಜುನ್ ಮತ್ತು ಅವರ ತಂಡ ಅದ್ಭುತವಾಗಿ ಮರುಸೃಷ್ಟಿಸುವಲ್ಲಿ ಯಶಸ್ವಿಯಾಗಿದ್ದು, ಚಿತ್ರವನ್ನು ರೋಷನ್ ಲೋಕೇಶ್ ಸಂಕಲಿಸಿದ್ದು ಸುರೇಂದ್ರನಾಥ್ ಬಿ ಆರ್ ಸಂಗೀತವನ್ನು ರಚಿಸಿದ್ದು, ಚಿತ್ರದ ಕತೆಯನ್ನು ಸಾಗರ ತಾಲ್ಲೂಕ್ ಹಾಗೂ ಕಾರ್ಗಲ್ ನಲ್ಲಿ ಕಳ್ಳಸಾಗಾಣಿಕೆಯ ಸಾಕ್ಷ್ಯಗಳನ್ನು ದಾಖಲಿಸಿ ರಚಿಸಿದ್ದಾರೆ .

ಇನ್ನು, ಈ ಸಿನಿಮಾದಲ್ಲಿ ಹರ್ಶಿಲ್ ಕೌಶಿಕ್ , ರಾಗ್ ಯು ಆರ್ ಎಸ್, ಸೂಚನ್ ಶೆಟ್ಟಿ , ಕಿಶೋರ್, ಪ್ರಶಾಂತ್ ಸಿದ್ದಿ, ನಾಗರಾಜ್ ಬೈಂದೂರ್, ಹರೀಶ್ ಭಟ್ ನೀನಾಸಂ, ಸಂದೀಪ್ ಪರಶುರಾಮ್, ರಾಜೇಶ್ ರಾಮಕೃಷ್ಣ, ಶಶಿಧರ್ ಗೌಡ, ವರುಣ್ ಹೆಗ್ಡೆ, ಅಕ್ಷತಾ ಅಶೋಕ್, ಚಂದ್ರಕಾಂತ್, ಶ್ರೀಗಂಧ್ ನಾಗ್, ನರೇಂದ್ರ ಕಬ್ಬಿನಾಲೆ ಸೇರಿದಂತೆ ಇನ್ನು ಹಲವರು ನಟಿಸಿದ್ದು, ಸಿನಿಮಾದ ನಿರೀಕ್ಷೆಯನ್ನ ಟ್ರೇಲರ್ ಹೆಚ್ಚಿಸಿದ್ದು, ಓಂಕಾರ್ ಪ್ರೊಡಕ್ಷನ್ ಮತ್ತು ಕಾಳಿಕಾ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.