ಮದುವೆಯಾದ ಮೇಲೆ ಪತಿಗೆ ಗೊತ್ತಾಗಿದ್ದು ಪತ್ನಿ “ಅವಳಲ್ಲ”!; ಅದು ಯಾರು ಗೊತ್ತೇ..?

ಕಾನ್ಪುರ: ಮದುವೆಯಾದ ಮೇಲೆ ಪತ್ನಿ ದೈಹಿಕ ಸಂಪರ್ಕಕ್ಕೆ ಸಹಕರಿಸದೇ ಇರುವ ಹಿನ್ನೆಲೆ ಅನುಮಾನಗೊಂಡ ಪತಿ ಪರಿಶೀಲಿಸಿದಾಗ ಅವಳಲ್ಲ ಎಂಬುದು ತಿಳಿದು ಆಘಾತಕ್ಕೆ ಒಳಗಾದ ಘಟನೆ ಉತ್ತರ ಪ್ರದೇಶದ ಕಾನ್ಪುರ ಜಿಲ್ಲೆಯಲ್ಲಿ ನಡೆದಿದೆ. ಪಂಕಿ ಪ್ರದೇಶದ…

ಕಾನ್ಪುರ: ಮದುವೆಯಾದ ಮೇಲೆ ಪತ್ನಿ ದೈಹಿಕ ಸಂಪರ್ಕಕ್ಕೆ ಸಹಕರಿಸದೇ ಇರುವ ಹಿನ್ನೆಲೆ ಅನುಮಾನಗೊಂಡ ಪತಿ ಪರಿಶೀಲಿಸಿದಾಗ ಅವಳಲ್ಲ ಎಂಬುದು ತಿಳಿದು ಆಘಾತಕ್ಕೆ ಒಳಗಾದ ಘಟನೆ ಉತ್ತರ ಪ್ರದೇಶದ ಕಾನ್ಪುರ ಜಿಲ್ಲೆಯಲ್ಲಿ ನಡೆದಿದೆ.

ಪಂಕಿ ಪ್ರದೇಶದ ಶಾಸ್ತ್ರಿ ನಗರ ನಿವಾಸಿ ಏಪ್ರಿಲ್ 28ರಂದು ವಿವಾಹವಾಗಿದ್ದು, ಮದುವೆಯಾದ ಕೆಲವು ದಿನಗಳಲ್ಲಿ ತನ್ನೊಂದಿಗೆ ದೈಹಿಕವಾಗಿ ಸಹಕರಿಸುತ್ತಿಲ್ಲ ಎಂದು ಅನುಮಾನಗೊಂಡು, ವೈದ್ಯರ ಬಳಿ ತಪಾಸಣೆಗೆ ಕರೆದುಕೊಂಡು ಹೋದಾಗ ತಾನು ಮದುವೆ ಆಗಿದ್ದು ಮಹಿಳೆಯನ್ನಲ್ಲ ತೃತೀಯ ಲಿಂಗಿಯನ್ನು ಎಂಬುದು ಬಯಲಾಗಿದೆ.

ಮಾವನ ಮನೆಯವರು ವಂಚಿಸಿ ತೃತೀಯ ಲಿಂಗಿಯನ್ನು ಮದುವೆ ಮಾಡಿದ ಆರೋಪದಲ್ಲಿ ತೃತೀಯ ಲಿಂಗಿ, ಆಕೆಯ ಪೋಷಕರು ಮತ್ತು ವಿವಾಹ ಸಂಬಂಧ ಕುದುರಿಸಿದ ಬ್ರೋಕರ್ ವಿರುದ್ಧ ಪತಿ ದೂರು ದಾಖಲಿಸಿದ್ದು, ವೈದ್ಯಕೀಯ ವರದಿಗಳ ಸಮೇತ ದೂರು ನೀಡಲಾಗಿದ್ದು, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 420ರ ಅಡಿಯಲ್ಲಿ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

Vijayaprabha Mobile App free

ಇನ್ನು, ಈ ಪ್ರಕರಣ ಸಂಬಂಧ ಸುಮಾರು 8 ಮಂದಿಯ ವಿರುದ್ಧ ದೂರು ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.