ಕಲ್ಕತ್ತಾ: ಪಶ್ಸಿಮಾ ಬಂಗಾಳದ ಟಿಎಂಸಿ ಪಕ್ಷದ ಸಂಸದೆ, ಖ್ಯಾತ ನಟಿ ನುಸ್ರತ್ ಜಹಾನ್ ಇತ್ತೀಚೆಗೆ ಪ್ರೆಗ್ನೆನ್ಸಿ ವಿಚಾರವಾಗಿ ಸುದ್ದಿಯಲ್ಲಿದ್ದಾರೆ.
ಹೌದು, ನಟಿ ನುಸ್ರತ್ ಜಹಾನ್ ಶೀಘ್ರದಲ್ಲೇ ತಾಯಿಯಾಗಲಿದ್ದಾರೆಂಬ ಸುದ್ದಿ ಹರಿದಾಡುತ್ತಿದ್ದರೂ ಈವರೆಗೆ ಸುಸ್ರತ್ ಜಹಾನ್ ಮತ್ತು ಅವರ ಕುಟುಂಬ ಸದಸ್ಯರಾಗಲೀ ಯಾವುದೇ ಮಾಹಿತಿ ನೀಡಿಲ್ಲ.
ಆದರೆ ನಟಿ ನುಸ್ರತ್ ಜಹಾನ್ ಅವರ ಗಂಡ ನಿಖಿಲ್ ಜೈನ್ ತಾವಿಬ್ಬರೂ 6 ತಿಂಗಳಿಂದ ಒಟ್ಟಿಗೆ ಇಲ್ಲವೆಂದಾಗ ಈ ಮಗು ನನ್ನದು ಹೇಗಾಗುತ್ತದೆ? ಎಂದು ಪ್ರಶ್ನಿಸಿರುವುದು ಎಲ್ಲರನ್ನು ಅಚ್ಚರಿಗೀಡು ಮಾಡಿದೆ. ಇನ್ನು ನಟಿ ನುಸ್ರತ್ ಜಹಾನ್ ಮತ್ತು ನಿಖಿಲ್ ಮದುವೆ ಮುರಿದು ಬೀಳುವ ಹಂತದಲ್ಲಿದೆ ಎನ್ನಲಾಗಿದೆ.
ನಮ್ಮ ಮದುವೆ ಕಾನೂನು ಬದ್ಧವಾಗಿರಲಿಲ್ಲ ಟಿಎಂಸಿ ಸಂಸದೆ!
ಇನ್ನು, ಈ ವಿಚಾರವಾಗಿ ಸಂಸದೆಯಾಗಿ ಆಯ್ಕೆಯಾದ ಬಳಿಕ ಪ್ರಮಾಣವಚನ ಸ್ವೀಕರಿಸುವ ಮೊದಲೇ ಉದ್ಯಮಿ ನಿಖಿಲ್ ಜೈನ್ ಜತೆ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದ ಪಶ್ಚಿಮ ಬಂಗಾಳದ ಟಿಎಂಸಿ ನಾಯಕಿ, ನುಸ್ರತ್ ಜಹಾನ್, ತಮ್ಮ ಮದುವೆ ಕಾನೂನು ಬದ್ಧವಾಗಿರಲಿಲ್ಲ ಹಾಗೂ ತಾವಿಬ್ಬರೂ ಕೆಲವು ಸಮಯದಿಂದ ದೂರ ಇರುವುದಾಗಿ ತಿಳಿಸಿದ್ದಾರೆ.
2019ರಲ್ಲಿ ಟರ್ಕಿಯಲ್ಲಿ ವಿಜೃಂಭಣೆಯಿಂದ ಹಸೆಮಣೆ ಏರಿದ್ದ ನಟಿ ನುಸ್ರತ್ ಜಹಾನ್, ತಮ್ಮ ವಿವಾಹ ವಾರ್ಷಿಕೋತ್ಸವದ 2ನೇ ವರ್ಷಾಚರಣೆ ಸಮೀಪದಲ್ಲಿಯೇ ಈ ಆಘಾತಕಾರಿ ಸಂಗತಿಯನ್ನು ತಿಳಿಸಿದ್ದಾರೆ.